More

    ಪೌಷ್ಟಿಕ ಆಹಾರದಿಂದ ಆರೋಗ್ಯಕರ ಜೀವನ

    ಸೇಡಂ: ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿರುವುದನ್ನು ಗಮನಿಸಿ ಸರ್ಕಾರ ಪೋಷಕಾಂಶ ಆಹಾರ ನೀಡುವ ಯೋಜನೆ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಮಹಾಮಂಡಳಿ ನಿರ್ದೇಶಕ ಬಸವರಾಜ ಪಾಟೀಲ್ ಊಡಗಿ ಹೇಳಿದರು.

    ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪೂರಕ ಪೋಷಕಾಂಶದ ಆಹಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದರೊಟ್ಟಿಗೆ ದೈಹಿಕವಾಗಿಯೂ ಸದೃಢರಾಬೇಕಾಗಿದೆ. ಅದಕ್ಕಾಗಿ ಪೌಷ್ಟಿಕ ಆಹಾರದ ಅಗತ್ಯತೆ ಇದೆ. ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ, ಬಾಳೆಹಣ್ಣು ಸಹ ವಿತರಣೆ ಮಾಡಲಾಗುವುದು ಎಂದರು.

    ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ಮಾತನಾಡಿ, ಕರೊನಾ ಬಳಿಕ ಮನುಷ್ಯನ ಬದುಕಿನ ಪದ್ಧತಿಯೇ ಬದಲಾಗಿದೆ. ನಿತ್ಯದ ಜೀವನದಲ್ಲಿ ದೇಹಕ್ಕೆ ಬೇಕಾಗುವಷ್ಟೇ ಸಮತೋಲಿನ ಆಹಾರ ಸೇವನೆ ಮಾಡಬೇಕು. ಇದೀಗ ಆಹಾರದ ಬಗ್ಗೆ ಅರಿವು ಬಂದಿದ್ದರಿAದ ಮುಂಬರುವ ದಿನಗಳಲ್ಲಿ ತಾಯಿ ಮತ್ತು ಮಗುವಿನ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ತಾಪಂ ಇಒ ಚನ್ನಪ್ಪ ರಾಯಣ್ಣವಾರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ ಇಮಡಾಪುರ, ಮುಖ್ಯಗುರು ಚಂದ್ರಕಾAತ ಕೆಂಚೆ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ್, ಎಸ್‌ಡಿಎಂಸಿ ಅಧ್ಯಕ್ಷ ದಶರಥ ಚವ್ಹಾಣ್, ತಾಪಂ ಯೋಜನಾಧಿಕಾರಿ ರವೀಂದ್ರ, ದೈಹಿಕ ಶಿಕ್ಷಕ ಮಣಿಸಿಂಗ್, ನಮ್ರತಾ, ತಿಪ್ಪಯ್ಯ, ರಾಜಕುಮಾರ ಇತರರಿದ್ದರು. ವಿದ್ಯಾರ್ಥಿನಿ ನಿಶಾ ಪ್ರಾರ್ಥಿಸಿದರು. ಶಿಕ್ಷಕ ಶಿವಯೋಗಿ ಸ್ವಾಗತಿಸಿದರು. ರಾಜು ನಿರೂಪಣೆ ಮಾಡಿದರು. ರಾಜೇಶ್ವರಿ ವಂದಿಸಿದರು. ಅಧಿಕಾರಿಗಳು ಹಾಗೂ ಮುಖಂಡರು ವಿದ್ಯಾರ್ಥಿಗಳೊಂದಿಗೆ ಆಹಾರ ಸೇವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts