More

    ಪೌರಕಾರ್ವಿುಕರ ಗಂಟಲ ದ್ರವ ಪರೀಕ್ಷೆ

    ಭಟ್ಕಳ: ಕರೊನಾ ಸೇನಾನಿಗಳಾಗಿ ಹಗಲು- ರಾತ್ರಿ ಕಾರ್ಯನಿರ್ವಹಿಸುತ್ತಿರುವ ಜಾಲಿ ಪಟ್ಟಣ ಪಂಚಾಯಿತಿಯ 15 ಪೌರಕಾರ್ವಿುಕರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

    ಪಟ್ಟಣದಲ್ಲಿ ಆತಂಕ ಹೆಚ್ಚಿದ್ದರೂ ನೈರ್ಮಲ್ಯ ಕಾಪಾಡುವಲ್ಲಿ ಪೌರ ಕಾರ್ವಿುಕರ ಸೇವೆ ಶ್ಲಾಘನೀಯ. ಕೆಲವು ಸೀಲ್​ಡೌನ್ ಪ್ರದೇಶದಲ್ಲೂ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಇಂತಹ ಕಾರ್ವಿುಕರ ಹಿತದೃಷ್ಟಿಯಿಂದ, ಮುಂಜಾಗ್ರತೆಯ ಸಲುವಾಗಿ 15 ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕರ್ತವ್ಯದಲ್ಲಿರುವ ಪೌರ ಕಾರ್ವಿುಕರಿಗೆ ಯಾವುದೆ ಲಕ್ಷಣಗಳಿಲ್ಲ. ಸೀಲ್​ಡೌನ್ ಪ್ರದೇಶಗಳಲ್ಲಿ ಅವರು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ತಿಂಗಳಿಗೊಮ್ಮೆ ಅವರಿಗೆ ಕೋವಿಡ್- 19 ಪರೀಕ್ಷೆ ಸೇರಿ 6 ತಿಂಗಳಿಗೊಮ್ಮೆ ಮಾಸ್ಟರ್ ಚೆಕ್​ಅಪ್ ನಡೆಸುತ್ತೇವೆ ಎಂದು ಪ್ರಭಾರ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts