More

    ಪೊಲೀಸ್ ವಶಕ್ಕೆ ಬಚ್ಚಾಖಾನ್

    ಧಾರವಾಡ: ಜೈಲಿನಲ್ಲಿ ಇದ್ದುಕೊಂಡೇ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದ ಭೂಗತ ಪಾತಿಕಿ ಯೂಸುಫ್ ಬಚ್ಚಾಖಾನ್​ನನ್ನು ಡಿ. 31ರವೆಗೆ ಪೊಲೀಸ್ ವಶಕ್ಕೆ ನೀಡಿ ಇಲ್ಲಿನ ಪ್ರಧಾನ ದಿವಾಣಿ ಮತ್ತು ಜೆಎಂಎಫ್​ಸಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

    ಕೊಲೆ ಪ್ರಕರಣವೊಂದರಲ್ಲಿ ಬಂಧನವಾಗಿರುವ ಬಚ್ಚಾಖಾನ್​ನನ್ನು ಮೈಸೂರು ಜೈಲಿನಲ್ಲಿ ಇಡಲಾಗಿತ್ತು. ಅಲ್ಲಿಂದಲೇ ನಗರದ ಅನೇಕ ಉದ್ಯಮಿಗಳು, ಬಿಲ್ಡರ್​ಗಳಿಗೆ ಬೆದರಿಕೆ ಹಾಕುತ್ತಿದ್ದ ಎಂಬ ಆರೋಪದ ಮೇಲೆ ಇಲ್ಲಿನ ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ಭಾನುವಾರ ರಾತ್ರಿ ಕರೆ ತಂದಿದ್ದರು.

    ಸೋಮವಾರ ಬೆಳಗ್ಗೆ ಬಿಗಿ ಭದ್ರತೆಯಲ್ಲಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ವಿಚಾರಣೆ ನಡೆಸುವ ನಿಟ್ಟಿನಲ್ಲಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯ, ಡಿ. 31ರವರೆಗೆ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

    ನಗರದ ರೌಡಿಶೀಟರ್ ಫ್ರುಟ್ ಇರ್ಫಾನ್ ಕೊಲೆ ಪ್ರಕರಣದಲ್ಲಿ ಸಹ ವಿಚಾರಣೆಗೆ ಒಳಪಟ್ಟಿರುವ ಬಚ್ಚಾಖಾನ್, ತನ್ನ ಕೆಲ ಸಹಚರರೊಂದಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಪ್ರಾರಂಭಿಸಿದ್ದ. ಈ ಕುರಿತು ಕೆಲವರು ಉಪನಗರ ಠಾಣೆಯಲ್ಲಿ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.

    ನ್ಯಾಯಾಲಯಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಚ್ಚಾಖಾನ್, ನನ್ನ ಹೆಸರಿನಲ್ಲಿ ಇನ್ನ್ಯಾರೋ ಬೆದರಿಕೆ ಹಾಕುತ್ತಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧನ ಮಾಡಬೇಕು ಎಂದು ಆಗ್ರಹಿಸಿದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts