More

    ಪೊಲೀಸ್ `ಬಲ’ದಿಂದ ಖಡಕ್ ಎಚ್ಚರಿಕೆ

    ಕಲಬುರಗಿ: ಕರೊನಾ ಹಾಟ್ಸ್ಪಾಟ್ ರೆಡ್ ಜೋನ್ನಲ್ಲಿರುವ ಕಲಬುರಗಿಯಲ್ಲಿ ಎರಡನೇ ಹಂತದ ಲಾಕ್ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರದಿಂದ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳಿಸಿದರು. ಪಥ ಸಂಚಲನ ಮಾಡುವುದರ ಜತೆಗೆ ಕೆಲವೆಡೆ ಬಂದೋಬಸ್ತ ಬಿಗಿಗೊಳಿಸಿದರು. ಮನೆಯಿಂದ ಹೊರ ಬರಬೇಡಿ, ತುರ್ತು ಕೆಲಸವಿಲ್ಲದೆ ರಸ್ತೆಗಿಳಿಯಬೇಡಿ ಎಂದು ಎಚ್ಚರಿಸಿದರು.
    ಪೊಲೀಸ್ ವಾಹನಗಳ ಸೈರನ್ ಜನರನ್ನು ಬೆಚ್ಚಿಬೀಳಿಸಿತು. ಪೊಲೀಸ್ ಆಯುಕ್ತಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಮುಖ ರಸ್ತೆಯಲ್ಲಿ ಪಥ ಸಂಚಲನ ಮಾದರಿಯಲ್ಲಿ ಹೆಜ್ಜೆ ಹಾಕಿ ಜನರಿಗೆ ಖಡಕ್ ಸಂದೇಶ ರವಾನಿಸಿದರು. ಲಾಕ್ಡೌನ್ ಉಲ್ಲಂಘಿಸಿದವರಿಗೆ ಲಾಠಿ ರುಚಿ ತೋರಿಸಿ ಗೂಡು ಸೇರಿಸಿದರು.
    ವಾಹನ ಓಡಾಟ ಹಿನ್ನೆಲೆಯಲ್ಲಿ ಖುದ್ದು ಪೊಲೀಸ್ ಆಯುಕ್ತ ಸತೀಶಕುಮಾರ ಮತ್ತು ಡಿಸಿಪಿ ಕಿಶೋರಬಾಬು ಅವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಗುರುವಾರ ಬೆಳಗ್ಗೆಯೇ ಅಖಾಡಕ್ಕಿಳಿದರು. ಇಪ್ಪತ್ತಕ್ಕೂ ಹೆಚ್ಚಿನ ಅಧಿಕಾರಿಗಳು ಹಾಗೂ ಸಿಬ್ಭಂದಿ ಬಟಾಲಿಯನ್ ಕಾರ್ಯಾಚರಣೆ ಚುರುಕುಗೊಳಿಸಿದರು.
    ನಗರದ ಮುಸ್ಲಿಂ ಚೌಕ್, ರೋಜಾ ಪ್ರದೇಶ, ಹುಮನಾಬಾದ್ ರಿಂಗ್​ ರೋ ಡ್, ಸೂಪರ್ ಮಾರ್ಕೆಟ್, ಜಗತ್ ವೃತ್ತ, ಸರದಾರ ವಲ್ಲಭಭಾಯಿ ಪಟೇಲ್ ವೃತ್ತ, ಬಸ್ ನಿಲ್ದಾಣ, ರಾಮ ಮಂದಿರ ಬಳಿಯ ಮಹರ್ಷಿ ವಾಲ್ಮೀಕಿ ವೃತ್ತ, ಸೇಡಂ ರಸ್ತೆಯಲ್ಲಿರುವ ಚಂದ್ರಶೇಖರ ಬಿಲಗುಂದಿ ವೃತ್ತ, ಮಹ್ಮದ ರಫಿ ಸರ್ಕಲ್ ಹೀಗೆ ಹಲವು ಕಡೆ ಪೊಲೀಸ್ ಬಲ ಪ್ರದರ್ಶನ ನಡೆಯಿತು.
    ಲಾಕ್ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿದರು. ಇನ್ನೂ ಕೆಲವರು ತುತರ್ು ಕೆಲಸದ ಮೇಲೆ ಹೋಗುತ್ತಿರುವವರ ಗುರುತಿನ ಚೀಟಿ ಪರಿಶೀಲಿಸಿ ಕಳುಹಿಸಿದರು. ಬೈಕ್ ಮತ್ತು ಕಾರ್ಗಳನ್ನು ವಶಪಡಿಸಿಕೊಳ್ಳುವ ಕಾರ್ಯ ಮುಂದುವರೆಯಿತು.
    ಆರು ವಾಹನಗಳಿಗೆ ಸೈರ್ನ್ ಜತೆಗೆ ಮೈಕ್ ಮೂಲಕ ಜನರು ಮನೆಯಲ್ಲಿಯೇ ಇರವಂತೆ ಮತ್ತು ಸಹಕರಿಸುವಂತೆ ಜನತೆಗೆ ಡಿಸಿಪಿ ಡಿ.ಕಿಶೋರಬಾಬು ಮನವಿ ಮಾಡಿದರು.
    ದಿನವಿಡಿ ನಡೆದ ಕಾರ್ಯಾಚರಣೆಯಲ್ಲಿ ಎಸಿಪಿಗಳಾದ ವಿರೇಶ ಕರಡಿಗುಡ್ಡ, ವಿಜಯಕುಮಾರ, ಗಿರೀಶ, ಇನ್ಸ್ಪೆಕ್ಟರ್ಗಳಾದ ಪಂಡಿತ ಸಗರ, ಎಲ್.ಎಚ್.ಗೌಂಡಿ, ಸಂಗಮನಾಥ ಹಿರೇಮಠ, ಅರುಣಕುಮಾರ, ಕಪಿಲ್ದೇವ, ಸಂಗಮೇಶ ಪಾಟೀಲ್, ಸೋಮಲಿಂಗ ಕಿರದಳ್ಳಿ, ರಮೇಶ ಕಾಂಬಳೆ, ಶಾಂತಿನಾಥ, ನಾಗಭೂಷಣ ಸೇರಿ ಅನೇಕರಿದ್ದರು.

    ಲಾಕ್ಡೌನ್ 2ನೇ ಹಂತದ ನಿಯಮ ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ನಗರದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಜನರು ಸಹಕಾರ ನೀಡಬೇಕು ಇಲ್ಲದೆ ಹೋದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.
    | ಎನ್.ಸತೀಶಕುಮಾರ ಪೊಲೀಸ್ ಆಯುಕ್ತ
    ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts