More

    ಪೊಲೀಸ್ ಇಲಾಖೆಗೆ ಆಧುನಿಕ ಸೌಲಭ್ಯ

    ಚಿತ್ರದುರ್ಗ: ದೇಶದಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ಅತ್ಯುತ್ತಮ ಹಾಗೂ ಆಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

    ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ಬಸವೇಶ್ವರ ನಗರದಲ್ಲಿ ನಿರ್ಮಿಸಿರುವ ಪೊಲೀಸ್ ವಸತಿ ಸಮುಚ್ಚಯ, ಚಿತ್ರದುರ್ಗ ಗ್ರಾಮಾಂತರ ಹಾಗೂ ತಳಕು ಠಾಣೆಗಳ ಕಟ್ಟಡಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    ತಂತ್ರಜ್ಞಾನದ ನೆರವಿನೊಂದಿಗೆ ನಮ್ಮ ಪೊಲೀಸರು ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಕಾನೂನು ರಕ್ಷಣೆಯಲ್ಲಿ ಅವರ ಪಾತ್ರ ಹಿರಿದಾಗಿದೆ. ಇಲಾಖೆಯ 1.9 ಲಕ್ಷ ಸಿಬ್ಬಂದಿ, ಪೈಕಿ ಕನಿಷ್ಠ 80 ಸಾವಿರ ಸಿಬ್ಬಂದಿಗೆ ವಸತಿ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಸೈಬರ್ ಕ್ರೈಂ ವಿಶ್ವದಲ್ಲೇ ಹೊಸ ಆಯಾಮ ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ ಇಲಾಖೆಯ ನ್ನು ಬಲಪಡಿಸಲಾಗುವುದು ಎಂದು ಹೇಳಿದರು.

    ಕಾನ್‌ಸ್ಟೇಬಲ್ ಹುದ್ದೆಗಳಿಗೆ ಶೇ.60 ಉನ್ನತ ಶಿಕ್ಷಣ ಪಡೆದವರು ಅರ್ಜಿ ಹಾಕುತ್ತಿರುವುದನ್ನು ಗಮನಿಸಿದರೆ ಇಂದು ಪೊಲೀಸ್ ಕೆಲಸಕ್ಕೆ ಗೌರವ ಹೆಚ್ಚಿದೆ ಎಂದರ್ಥ ಎಂದರು.
    ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಎಸ್‌ಪಿಎಚ್‌ಸಿ ಸಿಇ ಮಂಜುನಾಥ್, ದಾವಣಗೆರೆ ಐಜಿಪಿ ಡಾ.ಕೆ.ತ್ಯಾಗರಾಜ್, ಜಿಲ್ಲಾಧಿಕಾರಿ ದಿವ್ಯಾಪ್ರಭು, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಇದ್ದರು. ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಸ್ವಾಗತಿಸಿದರು.

    *ಕೋಟ್
    ಚಿತ್ರದುರ್ಗ, ಹಿರಿಯೂರಲ್ಲಿ ಪೊಲೀಸ್ ವಸತಿ ಸಮುಚ್ಚಯ, ಚಳ್ಳಕೆರೆ, ಹಿರಿಯೂರಲ್ಲಿ ಸಂಚಾರಿ ಪೊಲೀಸ್ ಠಾಣೆ, ಹೊಸದುರ್ಗದಲ್ಲಿ ಹೆಚ್ಚುವರಿ ಠಾಣೆ ಹಾಗೂ ಚಿಕ್ಕಜಾಜೂರಲ್ಲಿ ಪೊಲೀಸ್ ಠಾಣೆ ಸ್ಥಾಪಿಸಲು ಗೃಹಸಚಿವರು ಕ್ರಮಕೈಗೊಳ್ಳಬೇಕು.
    ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ

    *ಕೋಟ್
    ರಾಜ್ಯ ದಲ್ಲಿ ಈವರೆಗೆ 31 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಬಸವೇಶ್ವರ ನಗರದಲ್ಲಿ ಬಸವೇಶ್ವರ ನಗರದ 72 ಪೊಲೀಸ್ ವಸತಿ ಗೃಹಗಳ ಚಿತ್ರದುರ್ಗ ಹಾಗೂ ತಳಕು ಪೊಲೀಸ್ ಠಾಣೆಗಳ ನಿರ್ಮಾಣವಾಗಿದೆ.
    ಕೆ.ರಾಮಚಂದ್ರರಾವ್, ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಡಿಜಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts