More

    ಪೊಲೀಸರ ತ್ಯಾಗ ಅಮೂಲ್ಯ

    ಬಾಗಲಕೋಟೆ: ದೇಶ ಹಾಗೂ ರಾಜ್ಯದಲ್ಲಿ ನಾವೆಲ್ಲರೂ ಸುರಕ್ಷಿತರಾಗಿದ್ದೇವೆ ಎಂಬುದರ ಹಿಂದೆ ಪೊಲೀಸರ ಅಮೂಲ್ಯವಾದ ಪ್ರಾಣತ್ಯಾಗ ಮಾಡಿರುವುದನ್ನು ಅರಿಯಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಹೇಳಿದರು.
    ನವನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪೊಲೀಸ್ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿದ ಅವರು, ದೇಶದಲ್ಲಿ ನಡೆಯುವ ಗಲಭೆ, ಪ್ರತಿಭಟನೆಗಳು, ಪ್ರವಾಹ, ಅಪರಾಧ ಪ್ರಕರಣಗಳಲ್ಲಿ ಹಗಲಿರುಳೆನ್ನದೇ ಕಾರ್ಯನಿರ್ವಹಿಸುತ್ತಿರುವಾಗ ಕರ್ತವ್ಯದಲ್ಲಿ ಬಲಿಯಾದ ಪೊಲೀಸ್‌ರಿಗೆ ಗೌರವ ನೀಡುವ ಉದ್ದೇಶದಿಂದ ಸರ್ಕಾರ ಅ.೨೧ ರಂದು ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
    ದೇಶ ಕಾಯುವ ಸೈನಿಕರಿಗೂ, ಪೊಲೀಸ್ ಸಹಕಾರವಿದ್ದು, ಗಡಿಭಾಗದಲ್ಲಿರುವ ಗ್ರಾಮಗಳ ಜನರ ರಕ್ಷಣೆ ಕಾರ್ಯ ಮಾಡುತ್ತಾರೆ. ಅಲ್ಲದೇ ದೇಶದ ಒಳಗಡೆ ಕೂಡಾ ಅನೇಕ ಸಮಸ್ಯೆಗಳಿದ್ದು, ಅದರಲ್ಲಿ ಮೂರು ತರ ಸಾವು ಕಾಣಬಹುದಾಗಿದ್ದು, ಭಯೋತ್ಪಾದನಾ ಚಟುವಟಿಕೆಗಳು, ನಕ್ಸಲ್ ದಾಳಿ, ಕಾನೂನು ಸುವವ್ಯವಸ್ಥೆ ಕಾಪಾಡುವ ಸಂದರ್ಭಗಳಲ್ಲಿ ಅತ್ಯಂತ ಪರಿಣಾಮಕಾರಿ ಕಾರ್ಯಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು
    ಪೊಲೀಸ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಕುಟುಂಬದ ಕಷ್ಟ ಸುಖಗಳಲ್ಲಿ ಜಿಲ್ಲಾಡಳಿತ ಭಾಗವಹಿಸುತ್ತದೆ. ಹುತಾತ್ಮ ಪೊಲೀಸ್ ಕುಟುಂಬದ ಕುಂದು ಕೊರತೆಗೆ ಸ್ಪಂದಿಸುತ್ತದೆ. ಇದನ್ನರಿತ ಪೊಲೀಸ್ ಸಿಬ್ಬಂದಿ, ಹೆದರದೆ ಮುನ್ನುಗ್ಗಿ ತಮ್ಮ ದಕ್ಷ ಕಾರ್ಯನಿರ್ವಹಿಸಬೇಕು. ನಿಮ್ಮೇಲ್ಲರ ರಕ್ಷಣೆಗೆ ಸರ್ಕಾರ ಬದ್ದವಿದ್ದು, ನಿಮ್ಮನ್ನು ಗೌರವಿಸಲಾಗುತ್ತಿದೆ ಎಂಬುದನ್ನು ಎಲ್ಲ ಸಿಬ್ಬಂದಿಗಳು ತಿಳಿದುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ ಮಾತನಾಡಿ, ದೇಶ ಹಾಗೂ ರಾಜ್ಯ ರಕ್ಷಣೆಯಲ್ಲಿ ಪೊಲೀಸ್ ಕಾರ್ಯ ಅವಶ್ಯವಾಗಿದ್ದು, ತಮ್ಮ ಅಮೂಲ್ಯ ಪ್ರಾಣ ನೀಡಿದ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಪೊಲೀಸರು ಹುತಾತ್ಮರಾಗಿದ್ದಾರೆ. ಅದರಲ್ಲಿ ರಂಗನಾಥ ಕೆ, ಮಂಜುನಾಥ, ಸದಾಶಿವ, ಮಾಲತೇಶ, ಅಬೂಬಕರ, ಬಸವರಾಜ, ಅನೀಲ್, ನಿಂಗಪ್ಪ ಬೋಸನ್ನವರ, ಪ್ರಸಾದ, ಪಂಡಿತ ಪ್ರಸನ್ ಪ್ರಾಣ ಕಳೆದುಕೊಂಡು ಹುತಾತ್ಮರಾಗಿದ್ದು, ಅಂತವರ ಹೆಸರುಗಳನ್ನು ಸ್ಮರಣೆ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಕುಶಾಲತೋಪು ಹಾರಿಸಿ ಗೌರವ ಅರ್ಪಿಸುವದರ ಜೊತೆಗೆ ೨ ನಿಮಿಷ ಮೌನ ಆಚರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts