More

    ಪೊಲೀಸರಿದ್ದರೆ ಮಾತ್ರ ನಿಯಮ ಪಾಲನೆ

    ಹುಬ್ಬಳ್ಳಿ: ಪೊಲೀಸರು ಫೀಲ್ಡಿಗಿಳಿಯದ ಹೊರತು ಜನರು ರಸ್ತೆ ಬಿಟ್ಟು ಮನೆಗೆ ಹೋಗಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ನಗರದ ಹಲವೆಡೆ ಜನ ಸಂಚಾರ ಶನಿವಾರ ಬೆಳಗ್ಗೆಯೂ ಕಂಡು ಬಂತು.

    ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಸಡಿಲಿಕೆ ಇದೆ. ಆದರೆ, ಜನರು ಬೆಳಗ್ಗೆ 10ರ ನಂತರವೂ ಎಲ್ಲ ಕಡೆ ಓಡಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಹಲವರಿಗೆ ಬಿಸಿ ಮುಟ್ಟಿಸಿದರು.

    ಪ್ರತಿ ಶನಿವಾರ ಕೆಲವೆಡೆ ಸಂತೆ ನಡೆಯುತ್ತಿತ್ತು. ಆದರೆ, ಲಾಕ್​ಡೌನ್ ನಾಲ್ಕನೇ ದಿನವಾದ ಶನಿವಾರದಂದು ಎಲ್ಲಿಯೂ ಸಂತೆಗೆ ಅವಕಾಶ ಇರಲಿಲ್ಲ. ಕೇವಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಸಂತೆ ಮಾದರಿಯಲ್ಲಿಯೇ ಜನರು ಅಗತ್ಯ ವಸ್ತು ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಬಂದಿದ್ದರು. ಹಾಗಾಗಿ ಹುಬ್ಬಳ್ಳಿ ಎಪಿಎಂಸಿ, ಸಿದ್ಧಾರೂಢ ಮಠ, ಗಿರಣಿಚಾಳ ಮೈದಾನ ಹೀಗೆ ವಿವಿಧೆಡೆ ಸಂತೆ ಬಯಲಿನಲ್ಲಿ ಜನಜಂಗುಳಿ ಕಂಡು ಬಂತು.

    ಸಡಿಲಿಕೆ ಅವಧಿ ಮೀರಿದರೂ ಜನರ ಸಂಚಾರ ಇನ್ನೂ ಇದ್ದಿದ್ದರಿಂದ ಪೊಲೀಸರು ವಾಹನಗಳನ್ನು ತಡೆದು ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಿದರು.

    ಹುಬ್ಬಳ್ಳಿಯ ಚನ್ನಮ್ಮ ವೃತ್ತ, ಬಸ್ ನಿಲ್ದಾಣ, ಕೋರ್ಟ್ ವೃತ್ತ, ದಾಜಿಬಾನಪೇಟ, ಮಹಾತ್ಮ ಗಾಂಧಿ ಮಾರ್ಕೆಟ್ ಮುಂತಾದೆಡೆ ರಸ್ತೆಗಿಳಿದ ಪೊಲೀಸರು ಅಂಗಡಿ, ಮುಂಗಟ್ಟು ಹಾಗೂ ತರಕಾರಿ- ಹಣ್ಣು ಮಾರಾಟವನ್ನು ಬಂದ್ ಮಾಡಿಸಿದರು.

    ಆದರೂ, ನಗರದ ಹಲವೆಡೆ ರಸ್ತೆಗಳಲ್ಲಿ ಮಧ್ಯಾಹ್ನದವರೆಗೂ ವಾಹನ ಸಂಚಾರ ಇದ್ದೇ ಇತ್ತು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಬಿರುಗಾಳಿ ಸಮೇತ ಮಳೆ ಸುರಿದಿದ್ದರಿಂದ ರಸ್ತೆಗಳು ನಿರ್ಜನವಾಗಿದ್ದವು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts