More

    ಪೊಲೀಸರದ್ದು ಅಮಾನವೀಯ ನಡೆ

    ಮಂಗಳೂರು: ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಮಹಿಳೆ ಮತ್ತು ಮಗುವಿನ ಮೇಲೆ ನಡೆದ ಆ್ಯಸಿಡ್ ದಾಳಿ ವೇಳೆ ರಕ್ಷಣೆಗೆ ಕರೆ ಮಾಡಿದಾಗ ಸ್ಪಂದಿಸದ ಶ್ಯಾಮಲಾ ಕುಂದರ್ ನಡೆಗೆ ರಾಷ್ಟ್ರೀಯ ಮಹಿಳಾ ಆಯೋಗದ(ಎನ್‌ಸಿಡಬ್ಲೂೃ) ಸದಸ್ಯೆ ಶ್ಯಾಮಲಾ ಕುಂದರ್ ಅಸಮಾಧಾನ ವ್ಯಕ್ತಪಡಿಸಿದರು.

    ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
    ಆರೋಪಿಯಾಗಿರುವ ಮಹಿಳೆಯ ಬಾವ ಕಿಟಕಿಯಿಂದ ಆ್ಯಸಿಡ್ ದಾಳಿ ನಡೆಸಿದ್ದಾನೆ. ಉರಿ ತಾಳಲಾಗದೆ ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿದಾಗ ಸ್ಪಂದಿಸದೆ ಕರ್ತವ್ಯ ಲೋಪ ಎಸಗಿದ್ದಾರೆ. ರಕ್ಷಣೆ ಒದಗಿಸಬೇಕಾದ ಅವರ ವರ್ತನೆ ಅಕ್ಷಮ್ಯ. ನಂತರ ಮಹಿಳೆ 3 ಕಿ.ಮೀ ದೂರದ ಠಾಣೆಗೆ ನಡೆದುಕೊಂಡೇ ಹೋಗಿದ್ದಾರೆ. ಆಗಲೂ ಸ್ಪಂದಿಸದ ಪೊಲೀಸರು ಲಿಖಿತ ದೂರು ಕೇಳಿದ್ದಾರೆ. ‘ಉರಿ ತಾಳಲಾಗುತ್ತಿಲ್ಲ. ಬರೆಯಲಾಗುತ್ತಿಲ್ಲ’ ಎಂದು ಅಂಗಲಾಚಿದರೂ ಸ್ಪಂದಿಸಿಲ್ಲ. ಸಂತ್ರಸ್ತೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕಿತ್ತು, ಅಮಾನವೀಯವಾಗಿ ವರ್ತಿಸಬಾರದಿತ್ತು ಎಂದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಉಸ್ಮಾನ್, ವೆನ್ಲಾಕ್ ಆಸ್ಪತ್ರೆ ಸರ್ಜನ್ ಡಾ.ಶಿವಪ್ರಕಾಶ್, ಬಿಜೆಪಿ ಮಹಿಳಾ ಮೋರ್ಚಾದ ಪೂಜಾ ಪೈ ಮತ್ತಿತರರಿದ್ದರು.

      ಸ್ವಯಂಪ್ರೇರಿತ ಕೇಸು: ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಎನ್‌ಸಿಡಬ್ಲೂೃ ಸ್ವಯಂ ಪ್ರೇರಿತ ಕೇಸು ದಾಖಲಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ತಿಂಗಳ ಬಳಿಕ ಪ್ರಕರಣದ ಬೆಳವಣಿಗೆ ಮಾಹಿತಿ ಪಡೆಯುತ್ತೇನೆ ಎಂದು ಶ್ಯಾಮಲಾ ಕುಂದರ್ ತಿಳಿಸಿದರು.

     ಸಂತ್ರಸ್ತೆಯ ಮಕ್ಕಳಿಗೆ ಶಿಕ್ಷಣಕ್ಕೆ ವ್ಯವಸ್ಥೆ: ಆ್ಯಸಿಡ್ ದಾಳಿ ಸಂತ್ರಸ್ತೆಯ ಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಸಹಿತ ಎಲ್ಲ ಸೌಕರ್ಯ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ ಕಾನೂನು ನೆರವು ನೀಡಲಾಗುವುದು. ‘ಸಖಿ’ ಕೇಂದ್ರದಿಂದ ಕೌನ್ಸೆಲರ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ರಕ್ಷಣೆ ನೀಡಲೂ ಸೂಚಿಸಲಾಗಿದೆ ಎಂದು ಎನ್‌ಸಿಡಬ್ಲೂೃ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.

     ಸಂತ್ರಸ್ತೆಗೆ ಬಾವನಿಂದಲೇ ಅನ್ಯಾಯ ಆಗಿದೆ. ಆತ ತನ್ನೊಂದಿಗೆ ನಿರಂತರವಾಗಿ ಕೆಟ್ಟದಾಗಿ ವರ್ತಿಸುತ್ತಿದ್ದ. ಪತಿ ವಿಯೋಗದ ನಂತರವೂ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ ಎಂಬುದಾಗಿ ಸಂತ್ರಸ್ತೆ ನೋವು ಹಂಚಿಕೊಂಡಿದ್ದಾರೆ. ಸಂತ್ರಸ್ತೆಗೆ ಮೂವರು ಹೆಣ್ಮಕ್ಕಳಿದ್ದು, ಹೆಣ್ಣಾಗಿಯೇ ಹುಟ್ಟಿದ್ದು ತಪ್ಪು ಎನ್ನುವ ಭಾವನೆ ಬರುತ್ತಿದೆ. ಅವರಿಗೆ ಧೈರ್ಯ ತುಂಬಿದ್ದೇನೆ.
    – ಶ್ಯಾಮಲಾ ಕುಂದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts