More

    ಪೂರ್ಣಗೊಳ್ಳಲಿದೆ ಸ್ಮಾರ್ಟ್ ಟೆಂಡರ್

    ಹುಬ್ಬಳ್ಳಿ: ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯು ಶೀಘ್ರದಲ್ಲೇ ಟೆಂಡರ್ ಹಂತದಿಂದ ಮುಕ್ತವಾಗಲಿದೆ. ಕೊನೆಯ 6 ಕಾಮಗಾರಿಗಳಿಗೆ ಜೂನ್ ಅಂತ್ಯದೊಳಗೆ ಟೆಂಡರ್ ಕರೆಯಲು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಸಿದ್ಧತೆ ನಡೆಸಿದೆ.

    10.5 ಕಿಮೀ ಉದ್ದದ ರಾಜ ಕಾಲುವೆ ಮೇಲೆ ಗ್ರೀನ್ ಕಾರಿಡಾರ್ ನಿರ್ಮಾಣ ಕಾಮಗಾರಿ (131 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಅನುದಾನ 80 ಕೋಟಿ ರೂ. ಇದೆ), ಗೋಕುಲ ರಸ್ತೆಯಲ್ಲಿ 117 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ವಣ, 36 ಕೋಟಿ ರೂ.ನಲ್ಲಿ ಉಣಕಲ್ ದಂಡೆ ಸೌಂದಯೀಕರಣ, 12 ಕೋಟಿ ರೂ. ವೆಚ್ಚದಲ್ಲಿ ವಾಣಿ ವಿಲಾಸ ವೃತ್ತ ಸುಧಾರಣೆ, ಹಳೇ ಬಸ್ ನಿಲ್ದಾಣ ಸುಧಾರಣೆ (ಸ್ಮಾರ್ಟ್​ಸಿಟಿ ಅನುದಾನ 30 ಕೋ.ರೂ.) ಹಾಗೂ 5 ಕೋಟಿ ರೂ.ನಲ್ಲಿ ಪಾಲಿಕೆ ಒಡೆತನದ ಈಜುಕೊಳ ಉನ್ನತೀಕರಣ ಕಾಮಗಾರಿಗಳಿಗೆ ಟೆಂಡರ್ ಕರೆಯುವುದು ಬಾಕಿ ಇದೆ.

    ‘ಈ 6 ಕಾಮಗಾರಿಗಳಲ್ಲಿ 4 ಕಾಮಗಾರಿಗಳ ವಿಸõತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿವೆ. 2 ಕಾಮಗಾರಿಗಳು ಸಾಧ್ಯತಾ ವರದಿ (ಎಫ್​ಆರ್) ಹಂತದಲ್ಲಿವೆ. ಎಲ್ಲ 6 ಕಾಮಗಾರಿಗಳ ವರದಿಯನ್ನು ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿಯ ಗಮನಕ್ಕೆ ತಂದು ಹಾಗೂ ಒಪ್ಪಿಗೆ ಪಡೆದು ಜೂನ್ ಅಂತ್ಯದೊಳಗೆ ಟೆಂಡರ್ ಕರೆಯಲಾಗುವುದು. ಇದರಿಂದ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಎಲ್ಲ ಕಾಮಗಾರಿಗಳ ಟೆಂಡರ್ ಹಂತ ಪೂರ್ಣಗೊಳ್ಳಲಿದೆ’ ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ವಿಜಯವಾಣಿಗೆ ತಿಳಿಸಿದ್ದಾರೆ.

    ಹು-ಧಾ ಅವಳಿನಗರ ಅಕ್ಟೋಬರ್ 2016ರಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿತ್ತು. ಈ ಯೋಜನೆಯ ವ್ಯಾಪ್ತಿ ಇದೀಗ ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿದೆ. ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಹೆಚ್ಚು ಕಾಲ ಜನಾಭಿಪ್ರಾಯ ಸಂಗ್ರಹಣೆ, ಸಮೀಕ್ಷೆ, ಸಾಧ್ಯತಾ ವರದಿ, ಡಿಪಿಆರ್ ಹಂತದಲ್ಲಿಯೇ ಕಳೆದು ಹೋಗಿದೆ. ಬಹಳಷ್ಟು ಕಾಮಗಾರಿಗಳಿಗೆ 3-4 ಬಾರಿ ಟೆಂಡರ್ ಕರೆಯಲಾಗಿದೆ. ಹಾಗೆ ಮಾಡಿದ ಮೇಲೂ ಕೆಲವು ಕಾಮಗಾರಿಗಳು ರದ್ದಾಗಿವೆ.

    2020ರ ಆರಂಭದಲ್ಲಿ ಪಾಲಿಕೆ ಒಡೆತನದ ಲ್ಯಾಮಿಂಗ್ಟನ್ ಸ್ಕೂಲ್​ನಲ್ಲಿ ಸ್ಮಾರ್ಟ್ ಸ್ಕೂಲ್, ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್ ಹೆಲ್ತ್, ತಾತ್ಕಾಲಿಕ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್, ಪಾಲಿಕೆ ಒಡೆತನದ ಈಜುಗೊಳದ ನವೀಕರಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದ್ದವು. ಇದಕ್ಕೂ ಪೂರ್ವ ಇ-ಟಾಯ್ಲೆಟ್ ವ್ಯವಸ್ಥೆ ಸ್ಮಾರ್ಟ್ ಸಿಟಿಯ ಕೊಡುಗೆಯಾಗಿವೆ. ಇವು ಕಣ್ಣಿಗೆ ಗೋಚರಿಸುವ, ಜನೋಪಯೋಗಿ ಕೆಲಸಗಳಾಗಿವೆ.

    386 ಕೋಟಿ ರೂ. ಬಿಡುಗಡೆ

    ಹು-ಧಾ ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಸರ್ಕಾರ 196 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 190 ಕೋಟಿ ರೂ. ಬಿಡುಗಡೆ ಮಾಡಿದೆ. ಮೇ ಅಂತ್ಯದವರೆಗೆ 105 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ ಯೋಜನಾ ವೆಚ್ಚ 79.06 ಕೋಟಿ ರೂ. ಯೋಜನಾ ನಿರ್ವಹಣಾ ಸಲಹೆಗಾರರಾದ ಪ್ರೖೆಸ್ ವಾಟರ್​ಹೌಸ್ ಕೂಪರ್ಸ್​ಗೆ 8.29 ಕೋಟಿ ರೂ. ನೀಡಲಾಗಿದೆ. ಆಡಳಿತ ಮತ್ತು ಕಚೇರಿ ವೆಚ್ಚವೆಂದು 8.78 ಕೋಟಿ ರೂ. ಖರ್ಚಾಗಿದೆ.

    ಕೇಂದ್ರ-ರಾಜ್ಯ ಸರ್ಕಾರಗಳ ಅನುದಾನ, ಖಾಸಗಿ ಸಹಭಾಗಿತ್ವ (ಪಿಪಿಪಿ) ಹಾಗೂ ಕನ್ವರ್ಜೆನ್ಸ್ ಪ್ರಾಜೆಕ್ಟ್​ಗಳು ಸೇರಿ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಗಾತ್ರ 1662 ಕೋಟಿ ರೂ.ಗಳದ್ದು. ಒಟ್ಟು ಪ್ರಸ್ತಾವಿತ 67 ಕಾಮಗಾರಿಗಳಲ್ಲಿ 15 ಪೂರ್ಣಗೊಳಿಸಲಾಗಿದೆ. 43 ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts