More

    ಪುಸ್ತಕ ರೂಪದಲ್ಲಿ ಔಷಧ ಸಸ್ಯಗಳ ಸಂತತಿ

    ವಿಕ್ರಮ ನಾಡಿಗೇರ ಧಾರವಾಡ

    ಈ ದಂಪತಿ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳು. ಸರ್ಕಾರ ನೀಡಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇದರೊಟ್ಟಿಗೆ ಸಸ್ಯ ಸಂಪತ್ತಿನ ಬಗ್ಗೆ ಜನರಿಗೆ ಮಾಹಿತಿ ನೀಡುವ ಇವರ ವಿಶೇಷ ಕಾರ್ಯ ಜನಮನ್ನಣೆಗೆ ಪಾತ್ರವಾಗಿದೆ.

    ಧಾರವಾಡ ಅರಣ್ಯ ಉಪ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹಾಗೂ ಅವರ ಪತ್ನಿ, ಗುಂಗರಗಟ್ಟಿ ಅರಣ್ಯ ಅಕಾಡೆಮಿ ಜಂಟಿ ನಿರ್ದೇಶಕಿ, ಅರಣ್ಯ ಉಪ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಕಾರ್ಯ ಗಮನ ಸೆಳೆದಿದೆ. ಅರಣ್ಯಕ್ಕೆ ಕಾವಲಾದರೆ ಸಾಲದು, ಏಕೆ ಅರಣ್ಯ ಉಳಿಸಬೇಕು, ಅಲ್ಲಿನ ಸಸ್ಯ ರಾಶಿಗಳ ಮಾಹಿತಿ ನೀಡುವುದೇ ಮುಖ್ಯ ಧ್ಯೇಯ ಎನ್ನುತ್ತಾರೆ ಅಧಿಕಾರಿ ದಂಪತಿ.

    ಈ ಧ್ಯೇಯದೊಂದಿಗೆ ಗದಗ ಜಿಲ್ಲೆ ಕಪ್ಪತಗುಡ್ಡದಲ್ಲಿನ ಔಷಧೀಯ ಸಸ್ಯಗಳ ದಾಖಲೀಕರಣಗೊಳಿಸಿದ್ದಾರೆ. 375 ಸಸಿಗಳ ಸಮಗ್ರ ಮಾಹಿತಿ ಸಂಗ್ರಹಿಸಿ ‘ಕಪ್ಪತಗುಡ್ಡ’ (ಗದಗ ಔಷಧೀಯ ಸಸ್ಯಗಳ ಒಂದು ಸಂಗ್ರಹ) ಎಂಬ ಪುಸ್ತಕ ಸಿದ್ಧಪಡಿಸಿದ್ದಾರೆ. ಸಣ್ಣ ಬೆಂಡೆ, ಗುಲಗಂಜಿ, ಕೆಂಪು ಜಾಲಿ, ಕಾಡು ಸೀಗೆ, ಕುಪ್ಪಿ ಗಿಡ, ಉತ್ತರಾಣಿ ಸೇರಿದಂತೆ 375 ಔಷಧೀಯ ಸಸ್ಯಗಳ ಸಂತತಿ ಸೇರಿ ಅವುಗಳ ಸಮಗ್ರ ಮಾಹಿತಿ ಪುಸ್ತಕದಲ್ಲಿದೆ. ಜತೆಗೆ ಎಲ್ಲ ಸಸಿಗಳ ಭಾವಚಿತ್ರಗಳನ್ನು ಸ್ವತಃ ಸೆರೆಹಿಡಿದಿರುವುದು ಮತ್ತೊಂದು ವಿಶೇಷ.

    ಐಎಫ್​ಎಸ್​ನ 2011ನೇ ಬ್ಯಾಚ್​ನ ಈ ದಂಪತಿ 2015ರಿಂದ 3 ವರ್ಷ ಗದಗ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆಗ ಕಪ್ಪತಗುಡ್ಡ ಉಳಿಸುವ ಬೃಹತ್ ಆಂದೋಲನ ನಡೆದಿತ್ತು. ಇದರಿಂದ ಮತ್ತಷ್ಟು ಪ್ರೇರಣೆ ಪಡೆದು, ಔಷಧೀಯ ಸಸ್ಯಗಳ ಅಧ್ಯಯನ ನಡೆಸಿದ್ದಾರೆ.

    2015ರಿಂದ ಸಸ್ಯಗಳ ಮಾಹಿತಿ ಕಲೆ ಹಾಕುವ ಕಾರ್ಯ ಆರಂಭಿಸಿದ ಇವರು, 6 ವರ್ಷ ಅಧ್ಯಯನ ನಡೆಸಿ 428 ಪುಟಗಳ ಪುಸ್ತಕ ಸಿದ್ಧಪಡಿಸಿದ್ದಾರೆ. ಹಣಕ್ಕಾಗಿ ಪುಸ್ತಕ ಮಾರಾಟ ಮಾಡದೆ, ಜನರಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಉಚಿತವಾಗಿ ನೀಡಲು ತೀರ್ವನಿಸಿದ್ದಾರೆ.

    ಆಯುರ್ವೆದದ ಮಾಹಿತಿ: ಕಪ್ಪತಗುಡ್ಡದಲ್ಲಿ 500ಕ್ಕೂ ಹೆಚ್ಚು ಔಷಧೀಯ ಸಸ್ಯಗಳಿವೆ. ಅವುಗಳಲ್ಲಿ 375 ಜಾತಿಯ ಸಸ್ಯಗಳ ಮಾಹಿತಿ ಸಂಗ್ರಹಿಸಿ ಈ ಪುಸ್ತಕದಲ್ಲಿ ದಾಖಲೀಕರಣ ಮಾಡಲಾಗಿದೆ. ಪ್ರತಿ ಸಸ್ಯಗಳ ಪಟ್ಟಿ ಮಾಡಿ, ಆ ಸಸ್ಯದ ಜಾತಿ, ಫ್ಯಾಮಿಲಿ, ವೈಜ್ಞಾನಿಕ ಹೆಸರು, ಸಾಮಾನ್ಯ ಹೆಸರು (ಪರಿಚಿತ ಹೆಸರು), ಕನ್ನಡದ ಹೆಸರು, ಹೂವು, ಕಾಯಿ ಬಿಡುವ ಸಮಯ, ಸಸಿಯ ಎತ್ತರ, ಎಲೆಯ ಅಳತೆ, ವಿನ್ಯಾಸ ಹೀಗೆ ಸಸ್ಯದ ಸಂಪೂರ್ಣ ವೈಶಿಷ್ಟ್ಯ ಅದರಿಂದಾಗುವ ಆಯುರ್ವೆದ ಉಪಯೋಗದ ಮಾಹಿತಿ ಸಹ ನೀಡಿದ್ದಾರೆ.

    24ರಂದು ಬಿಡುಗಡೆ: ಜ. 24ರಂದು ಗದಗ ರಿಂಗ್ ರಸ್ತೆಯಲ್ಲಿನ ಡಾ. ಅಂಬೇಡ್ಕರ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಕಪ್ಪತಗುಡ್ಡ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಅರಣ್ಯ ಸಚಿವ ಆನಂದ ಸಿಂಗ್, ಅರಣ್ಯ ಪಡೆ ಮುಖ್ಯಸ್ಥ ಸಂಜಯ ಮೋಹನ, ಅಜಯ ಮಿಶ್ರಾ ಪಾಲ್ಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts