More

    ಪುಸ್ತಕದಲ್ಲೇ ಉಳಿಯುತ್ತಿದೆ ರಾಷ್ಟ್ರೀಯತೆ; ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅಭಿಮತ ; ಗ್ರಾಪಂ ನೂತನ ಸದಸ್ಯರಿಗೆ ಸನ್ಮಾನ

    ತುಮಕೂರು: ಇಂದು ಜಾತಿ ವಿಷಬೀಜದ ಮೇಲೆ ರಾಜಕಾರಣ ನಡೆಯುತ್ತಿದೆ, ಜಾತಿ ಆಧಾರದಲ್ಲಿಯೇ ಚುನಾವಣೆ ಹಾಗೂ ಫಲಿತಾಂಶ ನಿರ್ಧಾರವಾಗುತ್ತಿದ್ದು, ಇದು ತೊಲಗಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲಿದೆ ಎಂದು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

    ನಗರದ ಗಂಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಜನಾಂಗದ ನೂತನ ಗ್ರಾಪಂ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ನಾವು ಸಮಾಜ ಕಟ್ಟುತ್ತೇವೆ, ರಾಷ್ಟ್ರೀಯತೆ ಬೆಳೆಸುತ್ತೇವೆ ಎನ್ನುವವರು ಹಣ ಕೊಟ್ಟು ಮತ ಪಡೆದು, ಜಾತಿ ಆಧಾರದಲ್ಲಿ ಚುನಾವಣೆಗಳನ್ನು ನಡೆಸುತ್ತಾರೆ. ಇದರಿಂದಾಗಿ ಸಮಾಜ ಹಾಗೂ ರಾಷ್ಟ್ರೀಯತೆ ಎಂಬುದು ಬರೀ ಪುಸ್ತಕದಲ್ಲೇ ಉಳಿದುಕೊಳ್ಳುತ್ತಿದೆ ಎಂದು ಬೇಸರಿಸಿದರು.

    ಗ್ರಾಪಂ ಚುನಾವಣೆ ಗೆದ್ದರುವುದು ಮುಖ್ಯವಲ್ಲ, ಪರಿಶಿಷ್ಟ ಜಾತಿ, ಪಂಗಡಗಳ ಕಾಲನಿಗಳಿಗೆ ಎಷ್ಟು ಅನುದಾನ ಬರುತ್ತದೆ? ಯಾವ ರೀತಿ ಖರ್ಚು ಮಾಡಬೇಕು? ಎಂಬುದನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ. ಈ ಮೂಲಕ ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರ ಕಾಲನಿಗಳಿಗೆ ಮೀಸಲಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಸಲಹೆ ನೀಡಿದರು.
    ಕಳೆದ 75 ವರ್ಷಗಳಿಂದಲೂ ಮೀಸಲಾತಿ ಇದೆ. ಬೇರೆ ಸಮುದಾಯಗಳ ಹಂತಕ್ಕೆ ನಮ್ಮ ಮೀಸಲಾತಿ ಪ್ರಮಾಣ ಹೆಚ್ಚಬೇಕಿತ್ತು, ಆದರೆ ಬಲಾಢ್ಯರಿಗೆ ಮೀಸಲಾತಿಗಳು ಹೆಚ್ಚುತ್ತಿದ್ದು, ಜನಸಂಖ್ಯೆಯಲ್ಲಿ ಅಧಿಕವಾಗಿರುವ ಅಸ್ಪೃಶ್ಯ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಲು ಸರ್ಕಾರಗಳ ಇಚ್ಚಾಶಕ್ತಿ ಕೊರತೆ ಇದೆ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ವಿಷಾದಿಸಿದರು.

    ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಹಿರಿಯ ಕಲಾವಿದ ಡಾ.ಲಕ್ಷ್ಮಣದಾಸ್ ಮಾತನಾಡಿದರು. ಜಿಪಂ ಸದಸ್ಯ ಕೆಂಚಮಾರಯ್ಯ, ನಗರಸಭೆ ಮಾಜಿ ಸದಸ್ಯ ನರಸೀಯಪ್ಪ, ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಪಿ.ಚಂದ್ರಪ್ಪ, ಮರಿಚನ್ನಮ್ಮ ಮತ್ತಿತರರು ಇದ್ದರು.
    ನೂತನವಾಗಿ ಆಯ್ಕೆಯಾಗಿರುವ ಎಡ ಮತ್ತು ಬಲ ಸಮುದಾಯಗಳ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಅ

    ಇಚ್ಛಾಶಕ್ತಿ ಕೊರತೆ: ದಲಿತರ ಹಾಗೂ ದಲಿತ ಕಾಲನಿಗಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ, ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ 100ಕ್ಕೆ ಶೇ.40 ಮಾತ್ರ ತಲುಪುತ್ತಿವೆ, ಇಲಾಖೆಗಳು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲವಾಗಿವೆ ಎಂದು ಸಂಸದ ನಾರಾಯಣಸ್ವಾಮಿ ಕಿಡಿಕಾರಿದರು.

    ಸಾಮಾನ್ಯ ಕ್ಷೇತ್ರ ಅಷ್ಟು ಸುಲಭದ ಮಾತಲ್ಲ!: ದೇಶದಲ್ಲಿ ಮೀಸಲಾತಿ ಇಲ್ಲದಿದ್ದರೆ ನಾರಾಯಣಸ್ವಾಮಿಯಾಗಲಿ, ಪರಮೇಶ್ವರ್ ಆಗಲಿ, ತಿಮ್ಮರಾಯಪ್ಪ ಆಗಲಿ ಯಾರೂ ವಿಧಾನಸಭೆ ಅಥವಾ ಲೋಕಸಭೆ ಪ್ರವೇಶ ಮಾಡುವುದಕ್ಕಾಗುತ್ತಿರಲಿಲ್ಲ, ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ, ಮೀಸಲಾತಿ ಇರುವುದರಿಂದಲೇ ಎರಡೂ ಸಮುದಾಯದವರು ರಾಜಕೀಯ ರಂಗ ಪ್ರವೇಶಿಸಿದ್ದಾರೆ ಎಂದು ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

    ಸದಾಶಿವ ಆಯೋಗ ಮಾಡಲು ಕುಮ್ಮಕ್ಕು ಕೊಟ್ಟವನು ನಾನು, ಎಸ್‌ಸಿ ಸಮಿತಿಯನ್ನು ಎಸ್.ಎಂ.ಕೃಷ್ಣ ಸಂಪುಟದಲ್ಲಿ ಒಬ್ಬ ಕ್ಯಾಬಿನೆಟ್ ದರ್ಜೆ ಸಚಿವನಾಗಿ ಮಾಡಿದವನು ನಾನು, ಆಯೋಗದ ವರದಿ ಪರವಾಗಿದ್ದವನು ನಾನು, ವರದಿ ಜಾರಿಗಾಗಿ ಸದಾ ನಿಮ್ಮ ಜೊತೆ ಇರುತ್ತೇನೆ, ನಾನು ವರದಿಗೆ ವಿರೋಧಿ ಎಂದು ಬಿಂಬಿಸಿದರೆ ಸಹಿಸಿಕೊಂಡು ಇರುವುದಿಲ್ಲ, ಎ.ನಾರಾಯಣಸ್ವಾಮಿ ಕೂಡಲೇ ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಬೇಕು, ಅವರ ಬೆನ್ನ ಹಿಂದೆ ನಾವು ಇರುತ್ತೇವೆ.
    ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts