More

    ಪುರಸಭೆ ಅಧಿಕಾರಿಗಳ ಅನಾದರ ಖಂಡಿಸಿ ಧರಣಿ

    ಹಾನಗಲ್ಲ: ಪಟ್ಟಣದಲ್ಲಿ ಜನರಿಗೆ ಶುದ್ಧ ನೀರು ಪೂರೈಕೆ, ಕಸ ವಿಲೇವಾರಿ ಆಸ್ತಿಗಳ ದಾಖಲೆ ನೀಡುವುದು ಸೇರಿ ವಿವಿಧ ಸಮಸ್ಯೆಗಳಿಗೆ ಸ್ಪಂದಿಸದ ಪುರಸಭೆ ಅಧಿಕಾರಿಗಳ ವರ್ತನೆ ಖಂಡಿಸಿ ಬಿಜೆಪಿ, ಕಾಂಗ್ರೆಸ್ ಸದಸ್ಯರು ಪಕ್ಷಾತೀತವಾಗಿ ಪುರಸಭೆ ಮುಂದೆ ಧರಣಿ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಪುರಸಭೆ ಸದಸ್ಯ ಎನ್.ಐ. ಸವಣೂರ ಮಾತನಾಡಿ, ಹಲವು ತಿಂಗಳಿನಿಂದ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗದೇ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗಟಾರಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುತ್ತಿಲ್ಲ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಆದಾಗ್ಯೂ ಎಲ್ಲ ವಾಹನಗಳಿಗೂ ಇಂಧನ ಖರ್ಚು ಹಾಕಲಾಗಿದೆ. 10 ಲಕ್ಷ ರೂ. ಕೊಟ್ಟು ಗಟಾರ್ ಸ್ವಚ್ಛಗೊಳಿಸುವ ಯಂತ್ರ ಖರೀದಿಸಿ 3 ವರ್ಷವಾದರೂ ಬಳಕೆಯಾಗಿಲ್ಲ. ವ್ಹೀಡ್ ಕಟರ್ ಇದ್ದರೂ ಬಳಸುತ್ತಿಲ್ಲ. ಜೆಸಿಬಿಗೆ ಒಂದೇ ವಾರದಲ್ಲಿ 120 ಲೀಟರ್ ಡೀಸೆಲ್ ತುಂಬಿಸಿದ ಖರ್ಚು ಹಾಕಲಾಗಿದೆ. ಆದರೆ, ಆ ಇಂಧನದಲ್ಲಿ ಎಲ್ಲಿ ಕೆಲಸ ಮಾಡಲಾಗಿದೆ ಎಂಬ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

    ತೆರಿಗೆ ವಿಭಾಗದ ಮಾಹಿತಿ ಇಲ್ಲದ ಪೌರ ಕಾರ್ವಿುಕರನ್ನು ತೆರಿಗೆ ವಿಭಾಗದಲ್ಲಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದಾಯ ಕೊರತೆಯಿಂದಾಗಿ ವಿವಿಧ ವಿಭಾಗಗಳ ಸಿಬ್ಬಂದಿಗೆ 6 ತಿಂಗಳಿನಿಂದ ವೇತನ ನೀಡಿಲ್ಲ. ಅದರಿಂದಾಗಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಆಡಳಿತಾಧಿಕಾರಿಯಾದ ಸವಣೂರ ಉಪವಿಭಾಗಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನಾಕಾರರು ಶಿರಸ್ತೇದಾರ್ ಬಸವರಾಜ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.

    ಪುರಸಭೆ ಸದಸ್ಯರಾದ ಹಸೀನಾಬಿ ನಾಯ್ಕನವರ, ಜೆಡ್.ಎಂ. ದರ್ಗಾ, ಖುರ್ಷಿದ್ ಹುಲ್ಲತ್ತಿ, ಎನ್.ಎಂ. ಬಡಗಿ, ಚಂದ್ರು ಉಗ್ರಣ್ಣನವರ, ಎ.ಎಫ್. ನಿಂಗೋಜಿ, ಎಸ್.ಕೆ. ಚಿಕ್ಕಣ್ಣನವರ, ಅನಂತವಿಕಾಸ ನಿಂಗೋಜಿ, ರವಿ ದೇಶಪಾಂಡೆ, ಪರಶುರಾಮ ಖಂಡೂನವರ, ಮಹೇಶ ಪವಾಡಿ, ವಿ.ಬಿ. ಕಡಬಗೇರಿ, ಆರ್.ಎ. ನಾಯಕನವರ, ಮಮತಾ ಆರೇಗೊಪ್ಪ, ರಾಜು ಗುಡಿ, ಆದರ್ಶ ಶೆಟ್ಟಿ, ಕೋಟೆಪ್ಪ ಚಿಕ್ಕಣ್ಣನವರ, ಮಾರುತಿ ಹೊಂಬಳಿ, ಶ್ರೀನಿವಾಸ ಭದ್ರಾವತಿ, ಇಬ್ರಾಹಿಂ ದಾವಣಗೆರೆ, ಹಜರತ್​ಅಲಿ ಅತ್ತಾರ, ಮುಸ್ತಾಕ್ ಸುತಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts