More

    ಪುರಸಭೆಗೆ 2 ಕೋಟಿ ರೂ. ವಿಶೇಷ ಅನುದಾನ

    ಹಾನಗಲ್ಲ: ಪುರಸಭೆಗೆ 2019-20ನೇ ಸಾಲಿನ ಎಸ್​ಎಫ್​ಸಿ ಯೋಜನೆಯಡಿ 2 ಕೋಟಿ ರೂ. ವಿಶೇಷ ಅನುದಾನ ಲಭ್ಯವಾಗಿದೆ. ಇದರಲ್ಲಿ 7 ಪ್ಯಾಕೇಜ್​ನಡಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ 1370 ಮೀ. ಕಾಂಕ್ರೀಟ್ ಚರಂಡಿ, 1648 ಮೀ. ಸಿಮೆಂಟ್ ಕಾಂಕ್ರೀಟ್ ರಸ್ತೆ, 680 ಮೀ. ರಸ್ತೆ ಡಾಂಬರೀಕರಣ ಹಾಗೂ 3 ಸಿ.ಡಿ. ನಿರ್ಮಾಣ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದ ಕೆಎಚ್​ಬಿ ಕಾಲನಿ, ಗಂಗಾನಗರ, ವಿವೇಕಾನಂದನಗರ, ಮಖಬೂಲಿಯಾನಗರ, ಹೊಸಪೇಟೆ ಓಣಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಪ್ರಸಕ್ತ ವರ್ಷದ 15ನೇ ಹಣಕಾಸು ಯೋಜನೆಯಡಿ 1.40 ಕೋಟಿ ಅನುದಾನ ಮಂಜೂರಾಗಿದ್ದು, ಪಟ್ಟಣದ ಮೂಲಸೌಕರ್ಯ ಹಾಗೂ ಅಗತ್ಯತೆ-ಬೇಡಿಕೆಗಳಿಗನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

    ಪುರಸಭೆ ಸದಸ್ಯರಾದ ಜಮೀರಅಹ್ಮದ್ ದರ್ಗಾ, ಶೋಭಾ ಉಗ್ರಣ್ಣನವರ, ಸುನಕವ್ವ ಚಿಕ್ಕಣ್ಣನವರ, ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಬಿಜೆಪಿ ತಾಲೂಕು ಅಧ್ಯಕ್ಷ ರಾಜು ಗೌಳಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಲಿಂಗಪ್ಪ ತಲ್ಲೂರ, ಬಸವರಾಜ ಬೂದಿಹಾಳ, ಬಿ.ಎಸ್. ಅಕ್ಕಿವಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಜಣ್ಣ ಪಟ್ಟಣದ, ಮಾಲತೇಶ ಗಂಟೇರ, ರವಿರಾಜ ಕಲಾಲ, ಸಂತೋಷ ಟಿಕೋಜಿ, ಚಂದ್ರಣ್ಣ ಉಗ್ರಣ್ಣನವರ, ರವಿಚಂದ್ರ ಪುರೋಹಿತ, ಚಂದ್ರು ಉಗ್ರಣ್ಣನವರ, ಕೋಟೇಶ ಚಿಕ್ಕಣ್ಣನವರ, ರಾಜೇಶ ಗುಡಿ, ಎಂ.ಕೆ. ಹುಬ್ಬಳ್ಳಿ, ಮಧುಮತಿ ಪೂಜಾರ, ಪುರಸಭೆ ಮುಖ್ಯಾಧಿಕಾರಿ ಎಚ್.ಎನ್. ಭಜಕ್ಕನವರ, ಇಂಜಿನಿಯರ್ ನಾಗರಾಜ ಮಿರ್ಜಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts