More

    ಪುತ್ತೂರಿನಲ್ಲಿ ರಂಗೇರಿದ ಹಲಸಿನ ದರ್ಬಾರ್, ಬೇಡಿಕೆ ಹೆಚ್ಚಿಸಿಕೊಂಡ ತಿಪಟೂರಿನ ಪ್ರಸಿದ್ಧ ಕೆಂಪು ಹಲಸು

    ಪುತ್ತೂರು: ಕೈಗೆ ಅಂಟು ಇಲ್ಲದೆಯೂ ಇರುವ ಹಲಸಿನ ಹಣ್ಣು ಮತ್ತು ಹಲಸಿನ ಬೆಳೆ, ಬಳಕೆ ಮತ್ತು ಮೌಲ್ಯವರ್ಧನೆ ಬಗ್ಗೆ ಎರಡು ದಿನಗಳ ಹಲಸು ಮೇಳ ಪುತ್ತೂರಿನಲ್ಲಿ ಭಾನುವಾರ ಸಂಪನ್ನಗೊಂಡಿತು.
    ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವಠಾರದಲ್ಲಿ ನವತೇಜ ಪುತ್ತೂರು ಮತ್ತು ಜೇಸಿ ಜಂಟಿ ಆಯೋಜನೆಯಲ್ಲಿ ನಡೆದ ಹಲಸಿನ ಮೇಳದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ದೇಶೀಯ ಪರಂಪರೆಯ ಹಲಸು ಕಾಣಿಸಿಕೊಂಡಿತ್ತು. ತಿಪಟೂರಿನ ಪ್ರಸಿದ್ಧ ಕೆಂಪು ಹಲಸು ಮೇಳದ ವಿಶೇಷ ಆಕರ್ಷಣೆ ಆಗಿತ್ತು. 200ಕ್ಕೂ ಅಧಿಕ ಕೆಂಪು ಹಲಸು ಮಾರಾಟವಾಗಿದ್ದು, ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗಿಲ್ಲ.
    ಬೇಡಿಕೆ ಪಡೆದುಕೊಂಡ ಅಡಕೆ ಟೀ
    ಶಿರಶಿ ಮೂಲದ ಸುರೇಶ್ ಹೆಗಡೆ ತಯಾರಿಸಿದ ಅಡಕೆ ಟೀ ಕೂಡ ಪ್ರಮುಖ ಆಕರ್ಷಣೆಯಾಗಿತ್ತು. ಸ್ಥಳೀಯ ಬೆಳೆಗಾರರು ತಯಾರಿಸಿದ ತೆಂಗಿನ ನೀರಾ ಕೂಡ ಗಮನ ಸೆಳೆಯಿತು. ಡ್ರ್ಯಾಗನ್ ಪ್ರುಟ್, ರಂಬುಟನ್, ಮಂಗ ಓಡಿಸುವ ಕೋವಿ, ಕೈಮಗ್ಗ ಮತ್ತು ಖಾದಿ ಉತ್ಪನ್ನಗಳ ಹ್ಯಾಂಡ್‌ಲೂಮ್ಸ್, ಕ್ಯಾಂಪ್ಕೋ ಚಾಕಲೇಟು, ಕೃಷಿ ಸಲಕರಣೆಗಳು ಕೂಡ ಜನರ ಗಮನ ಸೆಳೆದವು.
    ಹಲಸಿನ ಮೇಳದಲ್ಲಿ ಮಾತನಾಡಿದ, ಫಲಪ್ರಿಯ ಡಾ.ಚಂದ್ರಶೇಖರ ಚೌಟ, ಹಲಸಿನ ಯಾವುದೇ ಖಾದ್ಯ ಮಾಡಿದರೂ ಹಿಂದೆ ನಿರ್ಲಕ್ಷ್ಯವಿತ್ತು. ನಾಲ್ಕೈದು ವರ್ಷಗಳಿಂದ ಜಗತ್ತಿನಾದ್ಯಂತ ಹಲಸಿನ ಘಮ ಇದೆ. ಮಲೇಷ್ಯಾದ ಮುಖ್ಯರಸ್ತೆಯ ಬದಿಯಲ್ಲೇ ಹಲಸಿನ ಮರಗಳಿವೆ. ಅಮೇರಿಕಾದ ಹವಾಯಿ ಎಂಬಲ್ಲಿ ಹೋಟೆಲ್‌ಗಳಲ್ಲಿ ಮಧ್ಯಾಹ್ನ ಹಲಸಿನಿಂದ ಮಾಡಿದ ಲಂಚ್ ಪ್ಯಾಕೆಟ್, ಹಲಸಿನ ಐಸ್‌ಕ್ರೀಮ್, ಬರ್ಗರ್ ಸಿಗುತ್ತವೆ. ನಮ್ಮಲ್ಲಿ ಹಲಸು ಬೆಳೆಸಿದರೂ ಖಾದ್ಯಕ್ಕೆ ಪ್ರಾಮುಖ್ಯತೆ ಸಿಗದಿರುವುದು ಖೇದಕರ. ಹಲಸಿನ ಹೊಸ ಹೊಸ ಖಾದ್ಯ ತಯಾರಿಯಾಗಿ ಮೌಲ್ಯವರ್ಧನೆ ಆಗಬೇಕು ಎಂದರು.

    ——–
    ಪುತ್ತೂರಿನಲ್ಲಿ ಸಾವಯವ ಮೇಳ ಮಾಡುವ ಮೂಲಕ ಹಲಸಿಗೆ ಪ್ರಾಧಾನ್ಯತೆ ನೀಡಲಾಗಿತ್ತು. ಪುತ್ತೂರಿನಲ್ಲಿ ದೊಡ್ಡ ಹಣ್ಣಿನ ಮೇಳ ಮಾಡಬೇಕೆಂದು ಚಿಂತನೆ ನಡೆಸಿ ಕೋವಿಡ್ ಸಂದರ್ಭ ಅದನ್ನು ಕೈ ಬಿಡಲಾಗಿತ್ತು. ಈ ವರ್ಷ ಶೀಘ್ರದಲ್ಲಿ ಪುತ್ತೂರಿನಲ್ಲಿ ದೊಡ್ಡ ಹಣ್ಣಿನ ಮೇಳ ಮಾಡಲಿದ್ದೇವೆ.
    ಅನಂತಪ್ರಸಾದ್ ನೈತ್ತಡ್ಕ, ನವತೇಜ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts