More

    ಪಿಯುಸಿ ಪೂರಕ ಪರೀಕ್ಷೆ 23ರಿಂದ


    ಚಿತ್ರದುರ್ಗ: ಸೆಕೆಂಡ್ ಪಿಯುಸಿ ಪೂರಕ ಪರೀಕ್ಷೆ ಮೇ 23ರಿಂದ ಜೂ.3ರವರೆಗೆ ನಡೆಯಲಿದ್ದು, ಜಿಲ್ಲೆಯ 9 ಪರೀಕಾ ್ಷಕೇಂದ್ರಗಳಲ್ಲಿ 4782 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಡಿಸಿ ದಿವ್ಯಾಪ್ರಭು ಹೇಳಿದರು.
    ಡಿಸಿ ಕಚೇರಿಯಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರಗಳ ಬಳಿ ಬಂದೋಬಸ್ತ್ ಕಲ್ಪಿಸಬೇಕು. ವೀಕ್ಷಕ ಅಧಿಕಾರಿಗಳು ಪರೀಕ್ಷೆ ಆರಂಭದ 2 ಗಂಟೆಗಳ ಮೊದಲು ಕೇಂದ್ರಗಳಲ್ಲಿ ಇರಬೇಕು. ಪ್ರಶ್ನೆ ಪತ್ರಿಕೆಗಳ ಬಂಡಲ್‌ಗಳನ್ನು ನಿಯ ಮಾನುಸಾರ ತೆರೆಯಬೇಕು. ಮೊಬೈಲ್ ಬಳಕೆಗೆ ಅವಕಾಶವಿಲ್ಲ ಎಂದ ಅವರು, ಪೂರಕ ಪರೀಕ್ಷೆಗಳ ದಿನಗಳಂದು ಕೇಂದ್ರಗಳ ಸುತ್ತ ನಿಷೇಧಾಜ್ಞೆ ಇರುತ್ತದೆ ಎಂದರು.
    ಚಿತ್ರದುರ್ಗದಲ್ಲಿ 3,ಚಳ್ಳಕೆರೆ-2 ಹಾಗೂ ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆಯಲ್ಲಿ ತಲಾ ಒಂದು ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಈ ಕೇಂದ್ರಗಳಿಗೆ 129 ಕಾಲೇಜುಗಳು ಸೇರಿವೆ. ಕಲಾ ವಿಭಾಗದಲ್ಲಿ 2142,ವಾಣಿಜ್ಯ-1141 ಹಾಗೂ ವಿಜ್ಞಾನ ವಿಭಾಗದಲ್ಲಿ 1499 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಮಾಹಿತಿ ನೀಡಿದರು. ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಮತ್ತಿತರರು ಇದ್ದರು.
    20ರಿಂದ ಸಿಇಟಿ
    ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 20,21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಿದೆ ಎಂದು ಡಿಸಿ ಹೇಳಿದರು.
    ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5379 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಕ್ರಮಗಳಿಗೆ ಅವಕಾಶವಾಗದಂತೆ ಪರೀಕ್ಷೆ ನಡೆಸಬೇಕು. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾರ್ಥಿಗಳು ವಾಚ್,ಆಭರಣ, ತುಂಬು ತೋಳಿನ ವಸ್ತ್ರ ಧರಿಸುವಂತಿಲ್ಲ ಎಂದರು.
    ಪಿಯು ಡಿಡಿ ಮಾತನಾಡಿ, ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪಪೂ ಕಾಲೇಜು,ಬಾಲಕರ ಸರ್ಕಾರಿ ಪಪೂ ಕಾಲೇಜು,ಎಂ.ಕೆ.ಹಟ್ಟಿ ಎಸ್‌ಜೆಎಂ ಪಪೂ ಕಾಲೇಜು,ಪಿ.ಕೆ.ಹಳ್ಳಿ ಕೆಎಂಎಸ್ ಪಪೂಕಾಲೇಜು,ಎಸ್‌ಆರ್‌ಎಸ್ ಪಪೂ ಕಾಲೇಜು,ಮಹಾರಾಣಿ ಪಪೂ ಕಾಲೇಜು, ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಡಾನ್‌ಬಾಸ್ಕೋ ಪಪೂ ಕಾಲೇಜು,ಗಾರೇಹಟ್ಟಿ ಬೃಹನ್ಮಠ ಪಪೂ ಕಾಲೇಜು,ಹೊಳಲ್ಕೆರೆ ರಸ್ತೆ ಎಸ್‌ಜೆಎಂ ಪಪೂ ಕಾಲೇಜು ಹಾಗೂ ಚಿನ್ಮೂಲಾದ್ರಿ ಪಪೂ ಕಾಲೇಜು ಸೇರಿ 11 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
    20ರಂದು ಬೆಳಗ್ಗೆ 10 ರಿಂದ 11.50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತ ಶಾಸ್ತ್ರ,21ರಂದು ಬೆಳಗ್ಗೆ 10. 30ರಿಂದ 11.50ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನ ಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ ಎಂದರು.


    ಸಿಇಟಿ, ಅಂಗವಿಕಲರಿಗೆ ಹೆಚ್ಚುವರಿ ಸಮಯ
    ಚಿತ್ರದುರ್ಗ: ಸಿಇಟಿ ಪರೀಕ್ಷೆ ಅಂಗವಿಕಲರ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ ಹಾಗೂ ಲಿಪಿಕಾರರನ್ನು ಹೊಂದುವ ಅವಕಾಶ ನೀಡ ಲಾಗಿದೆ. ಪ್ರಶ್ನೆ ಪತ್ರಿಕೆಗೆ ಉತ್ತರಿಸಲು,ಪ್ರತಿ ಒಂದು ಗಂಟೆಗೆ 20 ನಿಮಿಷದ ಹೆಚ್ಚುವರಿ ಸಮಯ ನೀಡಲಾಗಿದೆ. ಅಗತ್ಯವುಳ್ಳವರಿಗೆ ಲಿಪಿಕಾರ ರನ್ನು ನೀಡಲಾಗುವುದು. ಇದಕ್ಕಾಗಿ ಪರೀಕ್ಷೆ ದಿನಾಂಕದ ಮೊದಲು ಕೋರಿಕೆ ಸಲ್ಲಿಸ ಬಹುದು. ಲಿಪಿಕಾರರರು 10ನೇ ತರಗತಿ ಅಥವಾ ಪ್ರಥಮ ಪಿಯುಸಿ ಕಲಾ ಅಥವಾ ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ಹೊಂದಿರ ಬಹುದು, ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿದವರನ್ನು ಲಿಪಿಕಾರನ್ನಾಗಿ ಪರಿಗಣಿಸುವುದಿಲ್ಲವೆಂದು ಡಿಡಿ ಎನ್.ರಾಜು ತಿಳಿಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts