More

    ಪಿಡಿಒ ಒತ್ತಡ ನಿರ್ವಣೆಗೆ ಕಾರ‌್ಯಗಾರಕ್ಕೆ ಮುಂದಾದ ದುರ್ಗದ ಜಿಪಂ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
    ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಕುಂದು, ಕೊರತೆ ಆಲಿಸುವುದರೊಂದಿಗೆ ಅವರು ತಮ್ಮ ಮೇಲಿನ ಕೆಲಸದ ಒತ್ತಡಗಳ ನಿರ್ವಹಣೆ ಹೇಗೆ ಎಂಬುದರ ಕುರಿತಂತೆ ಕಾರ‌್ಯಾಗಾರ ನಡೆಸಲು ಜಿಪಂ ಮುಂದಾಗಿದೆ.
    ಇದಕ್ಕೆ ಪೂರಕವೆಂಬಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರು, ಬುಧವಾರದಿಂದ ಪಿಡಿಒಗಳ ಕುಂದು ಕೊರತೆ ಆಲಿಸುವ ಕಾರ‌್ಯಕ್ಕೆ ಚಾಲನೆ ನೀಡಿದ್ದಾರೆ. ಚಿತ್ರದುರ್ಗ, ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿ ಆಯಾ ಪಿಡಿಒಗಳ ಕುಂದು ಕೊರತೆಗಳನ್ನು ಆಲಿಸಿದ್ದಾರೆ.
    ಸಾರ್ವಜನಿಕರು-ಜನಪ್ರತಿನಿಧಿಗಳು, ಸಿಬ್ಬಂದಿ ಹಾಗೂ ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಕರ್ತವ್ಯ ನಿರ್ವಹಣೆ. ಸಂವಹನ ಕೌಶಲ, ಆರೋಗ್ಯ ರಕ್ಷಣೆ, ವ್ಯಕ್ತಿತ್ವ ವಿಕಸನ ಮತ್ತಿತರ, ಸಮರ್ಥ ಕಾರ‌್ಯನಿರ್ವಹಣೆಗೆ ಪೂರಕ ವಿಷಯಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಆರೋಗ್ಯ ತಪಾಸಣಾ ಶಿಬಿರ ಇತ್ಯಾದಿಗಳೊಂದಿಗೆ ಡಿಸೆಂಬರ್ ಕೊನೆವಾರದಲ್ಲಿ ಕಾರ‌್ಯಾಗಾರ ಏರ್ಪಡಿಸಲು ಸಿಇಒ ತೀರ್ಮಾನಿಸಿದ್ದಾರೆ.
    ಜಿಲ್ಲೆಯ ಎಲ್ಲ 189 ಗ್ರಾಪಂ ಪಿಡಿಒಗಳಿಗೆ, ಜಿಲ್ಲಾ ಕೇಂದ್ರದಲ್ಲಿ ಒಂದು ದಿನ ಕ್ರೀಡಾಕೂಟ, ಸಂಗೀತ ಸಂಜೆ/ಮನರಂಜನೆ ಕಾರ‌್ಯಕ್ರಮ ಆಯೋಜಿಸುವುದು ಹಾಗೂ ಯೋಗ, ಉಪನ್ಯಾಸ, ಆರೋಗ್ಯ ಶಿಬಿರ ಇತ್ಯಾದಿಗಳೊಂದಿಗೆ ಆಯಾ ತಾಲೂಕಿನಲ್ಲೇ ಪ್ರತ್ಯೇಕವಾಗಿ ಒತ್ತಡ ನಿರ್ವಹಣೆ ಕಾರ‌್ಯಾಗಾರಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ. ಪಿಡಿಒಗಳಿಗೆಂದೇ ಇಂಥ ಕಾರ‌್ಯಾಗಾರ ಏರ್ಪಡಿಸುತ್ತಿರುವ ದುರ್ಗ ಜಿಪಂ ಕ್ರಮ ರಾಜ್ಯದಲ್ಲೇ ಮೊದಲು ಎನ್ನಲಾಗುತ್ತಿದೆ.
    *ಎಫ್‌ಡಿ ಒಪ್ಪಿಗೆ ಕೊಟ್ಟಿದ್ದರೂ…: ರಾಜ್ಯದ 6024 ಗ್ರಾಪಂಗಳ ಪಿಡಿಒಗಳ 800 ಹುದ್ದೆಗಳು ಖಾಲಿ ಇವೆ. 10 ವರ್ಷ ಸೇವೆ ಸಲ್ಲಿಸಿದ ಪಿಡಿಒಗಳಿಗೆ ಹಿರಿಯ ಪಂ. ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಬಡ್ತಿ ನೀಡಬೇಕಿದೆ. ಈ ನಿಟ್ಟಿನಲ್ಲಿ 1500 ಬಡ್ತಿ ಹುದ್ದೆಗಳಿಗೆ ಹಣಕಾಸು ಇಲಾಖೆ ಒಪ್ಪಿಗೆ ಕೊಟ್ಟಿದ್ದರೂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಬಡ್ತಿ ಹುದ್ದೆಗಳ ಭರ್ತಿಗೆ ಒಪ್ಪಿಗೆ ಕೊಟ್ಟಿಲ್ಲ. ಪಿಡಿಒಗಳಿಗೆ ಕಳೆದ 14 ವರ್ಷಗಳಿಂದ ಬಡ್ತಿ ಸಿಕ್ಕಿಲ್ಲ.
    ಗ್ರಾಪಂ ಕೆಲಸಗಳೊಂದಿಗೆ ವಿವಿಧ 28 ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳ ಹೊಣೆ. ಕಚೇರಿಯಲ್ಲಿ ಕಾರ‌್ಯದರ್ಶಿ,ಎಸ್‌ಡಿಎ, ಆಪರೇಟರ್ ಹುದ್ದೆಗಳ ಪೈಕಿ ಯಾವುದಾದರೂ ಒಂದೊ, ಎರಡೋ ಖಾಲಿ ಇರುವುದು. ನರೇಗಾ ಮೊದಲಾದ ಯೋಜನೆಗಳ ಅನುಷ್ಠಾನದ ಟಾರ್ಗೆಟ್. ಸಮನ್ವಯತೆ ಸಮಸ್ಯೆ.
    ಪಂಚತಂತ್ರ 2.0ನಲ್ಲಿ ಆನ್‌ಲೈನ್ ಮೀಟಿಂಗ್ ನಿರ್ಣಯ ಬರೆಯುವುದು,ಬಾಪೂಜಿ ಸೇವಾ ಕೇಂದ್ರ ಸರ್ವಿಸ್ ಇತ್ಯಾದಿ ಕೆಲಸಗಳು ಪಿ ಡಿಒಗಳು ನಿಬಾಯಿಸಬೇಕಿದೆ. ಪೂರಕ ಸಿಬ್ಬಂದಿ, ಅಧಿಕಾರಿ ಹುದ್ದೆಗಳ ಭರ್ತಿ ಮೂಲಕ ಕೆಲಸದ ಹೊರೆ ಕಡಿಮೆಗೊಳಿಸುವುದು. ಭತ್ಯೆ, ಬ ಡ್ತಿ ಮೊದಲಾದ ಪರಿಹಾರರೋಪಾಯಗಳೊಂದಿಗೆ ಒತ್ತಡ ಕಡಿತದ ಸಲಹೆಗಳು ಕೇಳಿ ಬಂದಿವೆ.

    *ಕೋಟ್
    ಯೋಗ, ಕ್ರೀಡೆ, ಮನರಂಜನೆ, ಆರೋಗ್ಯತಪಾಸಣೆ, ಉಪನ್ಯಾಸದೊಂದಿಗೆ ಒತ್ತಡ ನಿರ್ವಹಣೆ ಕುರಿತು ಪಿಡಿಒಗಳಿಗೆ ನಮ್ಮ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕಾರ‌್ಯಾಗಾರ ಏರ್ಪಡಿಸಲು ಉದ್ದೇಶಿಸಲಾಗಿದೆ. ಆರು ತಾಲೂಕುಗಳ ಪಿಡಿಒಗಳ ಸಭೆಗಳನ್ನು ಪ್ರತ್ಯೇಕವಾಗಿ ಕರೆದು ಅ ವರ ಕುಂದು ಕೊರತೆಗಳನ್ನು, ಸಮಸ್ಯೆಗಳನ್ನು ಆಲಿಸಲಾಗುತ್ತಿದೆ.
    ಎಸ್.ಜೆ.ಸೋಮಶೇಖರ್, ಸಿಇಒ, ಜಿಪಂ, ಚಿತ್ರದುರ್ಗ
    *ಸಿಇಒ ಕ್ರಮ ಸ್ವಾಗತಾರ್ಹ
    ಪಿಡಿಒಗಳ ಮೇಲಿರುವ ಒತ್ತಡಗಳನ್ನು ಅರಿತು, ಈ ನಿಟ್ಟಿನಲ್ಲಿ ಕಾರ‌್ಯಾಗಾರ ಏರ್ಪಡಿಸಲು ಮುಂದಾಗಿರುವ ಸಿಇಒ ಅವರ ಕ್ರಮ ಸ್ವಾಗ ತಾರ್ಹ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಬಡ್ತಿ ನೀಡಲು ಇಲಾಖೆ ಕ್ರಮ ವಹಿಸಬೇಕು.
    ಆರ್.ಪಾತಣ್ಣ, ರಾಜ್ಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ಕಾರ‌್ಯಾಧ್ಯಕ್ಷ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts