More

    ಪಿಕೆಪಿಎಸ್‌ಗೆ ಹೆಚ್ಚು ಬೀಜ, ಗೊಬ್ಬರ ನೀಡಿ

    ಚನ್ನಮ್ಮನ ಕಿತ್ತೂರ, ಬೆಳಗಾವಿ: ಪಿಕೆಪಿಎಸ್ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೀಜ, ಗೊಬ್ಬರ ವಿತರಿಸಬೇಕು. ಇದಕ್ಕೆ ಬೇಕಾಗುವಷ್ಟು ಗೊಬ್ಬರ ಬೀಜ ಮೊದಲೇ ಶೇಖರಿಸಿಕೊಳ್ಳಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಅಧಿಕಾರಿಗಳಿಗೆ ಸೂಚಿಸಿದರು.

    ಸ್ಥಳೀಯ ಎಪಿಎಂಸಿ ಆವರಣದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ 1.50 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರ 10 ಸಾವಿರ ಸಹಾಯ ಧನ ವಿತರಿಸುತ್ತಿದ್ದು ರೈತರಿಗೆ ಅನುಕೂಲವಾಗಲಿದೆ. ರೈತರ ಮಕ್ಕಳು ವಿದ್ಯಾನಿಧಿ ಯೋಜನೆ ಮೂಲಕ ಸಹಾಯಧನ ಪಡೆಯುತ್ತಿದ್ದಾರೆ. ಜಮೀನು ಇಲ್ಲದ ಮಕ್ಕಳಿಗೂ ಈ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಸ್ತರಿಸಿದ್ದಾರೆ. ಎ್ಡಿಎ ಮೂಲಕ ರೈತರದ್ದೇ ಕಂಪನಿಯನ್ನು ಮಾಡಿ ಅದರ ಮೂಲಕ ಕೃಷಿಗೆ ಬೇಕಾಗುವ ವಸ್ತುಗಳು ಹಾಗೂ ರೈತ ಉತ್ಪಾದಕ ವಸ್ತುಗಳನ್ನು ಹೊರ ದೇಶಕ್ಕೂ ರ್ತು ಮಾಡಬಹುದು ಎಂದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಪಿಎಂ ಕಿಸಾನ್ ಯೋಜನೆಗೆ ಇನ್ನೂ ಹಲವಾರು ರೈತರು ಇ-ಕೆವೈಸಿ ಮಾಡಿಸಿಲ್ಲ. ಆದ್ದರಿಂದ ಎಲ್ಲ ರೈತರು ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.

    ನಂತರ ಕಿತ್ತೂರಿನ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ವಿತರಣೆ, ಹೊಸ ವಿಜ್ಞಾನ ಪ್ರಯೋಗಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ಇಂಗ್ಲಿಷ್ ಭಾಷಾ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರಶಸ್ತಿ ಪತ್ರ ಹಾಗೂ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ಶಾಸಕ ಮಹಾಂತೇಶ ದೊಡಗೌಡರ ವಿತರಿಸಿದರು.
    ಬೆಳಗಾವಿ ಕೃಷಿ ಉಪ ನಿರ್ದೇಶಕ ಎಸ್.ಬಿ. ಕೊಂಗವಾಡ, ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಗೃಹ ಮಂಡಳಿ ಅಭಿಯಂತ ಜ್ಯೋತಿ ನಜರೆ, ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕೃಷಿ ಅಧಿಕಾರಿ ಮಂಜುನಾಥ ಕೆಚ್ಚರಾಹುತ, ಕೃಷಿ ವಿಜ್ಞಾನಿ ಎಸ್.ಎಸ್. ಹಿರೇಮಠ, ಸುನೀಲ ಗೋಡಬಾಳೆ, ಡಾ. ಕುಲಕರ್ಣಿ, ಆರ್.ಎನ್. ಬೆಳಗಾಂವಕರ, ಬಿ.ಎ್. ಕೊಳದೂರ, ಉಳವಪ್ಪ ಉಳ್ಳಾಗಡ್ಡಿ, ಎಸ್.ಆರ್. ಪಾಟೀಲ, ವಿ.ಆರ್.ಪಾಟೀಲ, ಬಸಪ್ಪ ಹುಣಶ್ಯಾಳ, ಸುಭಾಷ ರಾವಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts