More

    ಪಿಎಸ್​ಐ ಫೇಸ್​ಬುಕ್ ಖಾತೆ ಹ್ಯಾಕ್

    ಕಾರವಾರ: ಫೇಸ್​ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸುವ ಹೊಸ ದಂಧೆ ಪ್ರಾರಂಭವಾಗಿದೆ. ಈ ಸಂಬಂಧ ಕಾರವಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣವೊಂದು ದಾಖಲಾಗಿದೆ. ಗ್ರಾಮೀಣ ಠಾಣೆ ಪಿಎಸ್​ಐ ರೇವಣ್ಣ ಅವರ ಹೆಸರಿನ ಖಾತೆಯನ್ನು ಹ್ಯಾಕ್ ಮಾಡಿ, ಕೆಲವು ಸ್ನೇಹಿತರ ಜತೆಗೆ ಫೇಸ್ ಬುಕ್ ಮೇಸೆಂಜರ್ ಮೂಲಕ ಚಾಟ್ ಮಾಡಿ, ‘ನಾನು ಸಂಕಷ್ಟದಲ್ಲಿದ್ದು, ತುರ್ತಾಗಿ 10 ಸಾವಿರ ರೂ. ಬೇಕಾಗಿದೆ’ ಎಂದು ವಿನಂತಿಸಲಾಗಿದೆ. ನಂಬಿದ ವ್ಯಕ್ತಿಯೊಬ್ಬರು ಹೇಳಿದ ಖಾತೆಗೆ 7 ಸಾವಿರ ರೂ. ಹಣ ಹಾಕಿದ್ದಾರೆ. ಇನ್ನೊಬ್ಬರಿಗೂ ಇದೇ ರೀತಿ ಸಂದೇಶ ರವಾನೆಯಾದಾಗ ಅನುಮಾನಗೊಂಡು ಪಿಎಸ್​ಐ ಅವರನ್ನು ವಿಚಾರಿಸಲಾಗಿ ಮೋಸದ ಜಾಲ ಬಯಲಾಗಿದೆ. ಪಿಎಸ್​ಐ ರೇವಣ್ಣ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಪ್ರತಿಷ್ಠಿತ ಪಿಯು ಕಾಲೇಜ್ ಒಂದರ ಪ್ರಾಂಶುಪಾಲರ ಖಾತೆಯನ್ನೂ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಸಂಗ ನಡೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts