More

    ಪಾಲಿಕೆ ಸಭೆಯಲ್ಲಿ ಗೌನ್ ಗದ್ದಲ

    ಹುಬ್ಬಳ್ಳಿ: ಗೌನ್ ಗದ್ದಲದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

    ಸಭೆಗೆ ಮೇಯರ್ ಈರೇಶ ಅಂಚಟಗೇರಿ ಗೌನ್ ಧರಿಸದೇ ಬಂದಿದ್ದರು. ಇದನ್ನು ಗಮನಿಸಿದ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಸಭೆಯ ಆರಂಭದಲ್ಲಿಯೇ ವಿಷಯ ಪ್ರಸ್ತಾಪಿಸಿ ಮೇಯರ್ ಅವರು ಗೌನ್ ಧರಿಸಬೇಕೆಂದು ಪಟ್ಟು ಹಿಡಿದರು. ಮೇಯರ್ ಪೀಠದ ಬಳಿ ತೆರಳಿ ಪ್ರತಿಭಟನೆ ನಡೆಸಿದರು.

    ಇದರಿಂದ ಸಭೆಯಲ್ಲಿ ಗೌಜಿ ಗದ್ದುಲ ಉಂಟಾಗುತ್ತಿದ್ದಂತೆ ಮೇಯರ್ ಅವರು ಸಭೆಯನ್ನು ಅರ್ಧ ಗಂಟೆ ಮುಂದೂಡಿದರು. ಮೇಯರ್ ಈರೇಶ ಅಂಚಟಗೇರಿ ಅವರು ಗೌನ್ ಧರಿಸಬೇಕು. ಗೌನ್ ಧರಿಸದೇ ರಾಷ್ಟ್ರಪತಿಗೆ ಅಗೌರವ ತೋರಿದ ಮೇಯರ್​ಗೆ ಧಿಕ್ಕಾರ…,ಪೇ ಮೇಯರ್​ಗೆ ಧಿಕ್ಕಾರ…., ಬೇಕೇ ಬೇಕು ನ್ಯಾಯ ಬೇಕು.., ವಿ ವಾಂಟ್ ಗೌನ್ ಗೌನ್….ಮೇಯರ್ ಸ್ಥಾನಕ್ಕೆ ಅಗೌರವ ತೋರಿದ ಈರೇಶ ಅಂಚಟಗೇರಿಗೆ ಧಿಕ್ಕಾರ ಎಂಬಿತ್ಯಾದಿ ಘೊಷಣೆಗಳನ್ನು ಕೂಗಿದರು.

    ಗೌನ್ ಧರಿಸುವುದು ಬ್ರಿಟಿಷ್ ಪದ್ದತಿ. ಹೀಗಾಗಿ ನಾನು ಗೌನ್ ಧರಿಸಿಲ್ಲ. ಸರ್ಕಾರದ ಆದೇಶದವರೆಗೂ ಗೌನ್ ಧರಿಸಲ್ಲ.

    ಸರ್ಕಾರಕ್ಕೂ ಪತ್ರ ಬರೆದಿದ್ದೇನೆ, ಸರ್ಕಾರದ ಆದೇಶ ಬಂದ್ರೆ ಗೌನ್ ಧರಿಸುತ್ತೇನೆ. ಈಗಾಗಲೇ ಹಲವು ಮಹಾನಗರ ಪಾಲಿಕೆ ಮೇಯರ್ ಗೌನ್ ಪದ್ದತಿ ಬಿಟ್ಟಿದ್ದಾರೆ. ರಾಷ್ಟ್ರಪತಿಯವರು ಬಂದಾಗಲೂ ಸಹ ನಾನು ಗೌನ್ ಹಾಕಿಲ್ಲ, ಸಭೆಯಲ್ಲಿಯೂ ಗೌನ್ ಹಾಕಲ್ಲ. ಗೌನ್ ಧರಿಸಬೇಕು ಎಂದು ಎಲ್ಲಿಯೂ ಕಾನೂನು ಇಲ್ಲ ಎಂದು ಮೇಯರ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts