More

    ಪಾಲಿಕೆ ಆವರಣದಲ್ಲಿ ಮದ್ಯದ ಘಮಲು

    ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಮದ್ಯದ ಬಾಟಲಿ, ಟೆಟ್ರಾ ಪ್ಯಾಕೆಟ್​ಗಳು ರಾಶಿ ರಾಶಿಯಾಗಿ ಬಿದ್ದಿದ್ದು, ಅಧಿಕಾರಿಗಳ ಕಾರ್ಯವೈಖರಿಯನ್ನು ಅಣಕಿಸುವಂತಿದೆ.

    ಕೇಂದ್ರ ಕಚೇರಿಗೆ ಹೊಂದಿಕೊಂಡು ಪಾಲಿಕೆ ಒಡೆತನದ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವಿದ್ದು, ನಿತ್ಯ ನೂರಾರು ಜನರು ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಅದೇ ರೀತಿ ಪಾಲಿಕೆ ಕಾಂಪೌಂಡ್ ಹೊರಗೆ 3-4 ಮರದ ಕಟ್ಟೆಯ ಮೇಲೂ ಹಲವಾರು ಜನರು ಕುಳಿತಿರುತ್ತಾರೆ. ಇವರಲ್ಲಿ ಕೆಲವರು ನಿರ್ಗತಿಕರು, ಭಿಕ್ಷುಕರು ಇದ್ದಾರೆ.

    ಲಾಕ್​ಡೌನ್ ಪರಿಣಾಮ ಮದ್ಯದಂಗಡಿಗಳಲ್ಲಿ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಮದ್ಯ ಸೇವನೆಗೆ ಅವಕಾಶವಿಲ್ಲ. ಇದರಿಂದ ಪಾಲಿಕೆಯ ಆವರಣವನ್ನೇ ಕುಡುಕರು ಅಡ್ಡೆ ಮಾಡಿಕೊಂಡಿದ್ದಾರೆ. ಪಾರ್ಸಲ್ ತರುವ ಕುಡುಕರು ಗಿಡಗಳ ಮರೆಯಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ. ಖೋಡೇಸ್ ವಿಸ್ಕಿ, ಬೆಂಗಳೂರು ವಿಸ್ಕಿ ಇನ್ನಿತರ ಬ್ರ್ಯಾಂಡ್​ಗಳ ಮದ್ಯದ ಬಾಟಲಿ, ಟೆಟ್ರಾ ಪ್ಯಾಕೆಟ್​ಗಳು ಬಿದ್ದಿವೆ. ಸಂಜೆಯಾಗುತ್ತಿದ್ದಂತೆ ಕುಡುಕರ ಹಾವಳಿ ಜಾಸ್ತಿಯಾಗುತ್ತಿದ್ದು, ಯಾರೂ ಹೇಳುವವರು, ಕೇಳುವವರು ಇಲ್ಲವೇ? ಇದು ಪಾಲಿಕೆಯ ಕೇಂದ್ರ ಕಚೇರಿಯಾಗಿರುವುದರಿಂದ ಆವರಣದಲ್ಲಿ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆ ಇದೆ. ಭದ್ರತಾ ಸಿಬ್ಬಂದಿ ಇರುತ್ತಾರೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ (ಸಹಾಯವಾಣಿ)ನಲ್ಲೂ 5-6 ಸಿಬ್ಬಂದಿ ಸದಾ ಇರುತ್ತಾರೆ. ಆದರೂ ಇವರ ಗಮನಕ್ಕೆ ಬರದೇ ಇರುವುದು ಆಶ್ಚರ್ಯ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts