More

    ಪಾಲನೆ ಆಗದ ನಿಯಮ, ನಿಯಂತ್ರಣವಾಗದ ಕರೊನಾ

    ಬೆಳಗಾವಿ: ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಕಾಲಾವಕಾಶ ವಿಸ್ತರಿಸಿದ್ದರೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನರು ನಿಯಮ ಉಲ್ಲಂಘಿಸಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಮುಗಿಬೀಳುತ್ತಿದ್ದು, ಸರಿಯಾಗಿ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಪ್ರಕ್ರಿಯೆ ಸಾಗಿದೆ. ಬೆಳಗಾವಿಯಲ್ಲಿ ದಿನೇ ದಿನೆ ಕರೊನಾ ಸೋಂಕಿತರ ಸಂಖ್ಯೆ, ಮರಣ ಪ್ರಮಾಣ ಹೆಚ್ಚುತ್ತಿದ್ದರೂ ಜನರು ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ಇದ್ದರೂ ನಗರದ ಗಣಪತಿ ಗಲ್ಲಿ ರಸ್ತೆಯಲ್ಲಿ ಬಟ್ಟೆ ಸೇರಿ ಇತರ ಅಂಗಡಿಗಳೂ ಸೋಮವಾರ ತೆರೆದಿದ್ದವು. ಬಟ್ಟೆ ಅಂಗಡಿ ತೆರೆದಿದ್ದ ಯುವತಿಯೋರ್ವಳನ್ನು ಖಡೇಬಜಾರ್ ಪೊಲೀಸರು ತರಾಟೆ ತೆಗೆದುಕೊಂಡರು. ಈ ವೇಳೆ ಮಾತಿಗಿಳಿದ ಯುವತಿ, ಬೇರೆ ಬಟ್ಟೆ ಅಂಗಡಿಗಳೂ ತೆರೆದಿವೆ. ಅವುಗಳನ್ನೂ ಬಂದ್ ಮಾಡಿಸಿ ಎಂದು ಹೇಳಿದಳು. ಆಕ್ರೋಶಗೊಂಡ ಪೊಲೀಸರು ನಾಳೆಯಿಂದ ಅಂಗಡಿ ತೆರೆದರೆ ಹುಷಾರ್ ಎಂದು ಆಕೆಗೆ ಎಚ್ಚರಿಕೆ ನೀಡಿದರು. ಅಲ್ಲದೆ, ಅಂಗಡಿ ಮುಚ್ಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts