More

    ಪಾಲನೆಯಾಗುತ್ತಿಲ್ಲ ಕರೊನಾ ಮುನ್ನೆಚ್ಚರಿಕೆ ಕ್ರಮ

    ರೋಣ: ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನದಟ್ಟಣೆ ಜಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಪಟ್ಟಣದ ಸರ್ಕಾರಿ ಕಚೇರಿ, ಸಂತೆ, ಮಾರುಕಟ್ಟೆ ಸೇರಿ ಬಹುತೇಕ ಕಡೆಗಳಲ್ಲಿ ಅದು ಪಾಲನೆ ಆಗದಿರುವುದು ಕಂಡು ಬರುತ್ತಿದೆ.

    ತಾಲೂಕಿನ ವಿವಿಧ ಗ್ರಾಮಗಳು ಸೇರಿ ಬೇರೆಡೆಯಿಂದ ಬರುವ-ಹೋಗುವ ಪ್ರಯಾಣಿಕರ ಓಡಾಟ ಎಂದಿನಂತಿದೆ. ಬಸ್ ಸಂಚಾರ ಎಂದಿನಂತಿದೆ. ಆದರೆ, ಮಾಸ್ಕ್​ಗಳನ್ನು ನೀಡದಿರುವುದಕ್ಕೆ ಸಾರಿಗೆ ಸಂಸ್ಥೆ ಚಾಲಕ, ನಿರ್ವಾಹಕರು ಬೇಸರ ವ್ಯಕ್ತಪಡಿಸುತ್ತಾರೆ.

    ಸಂತೆ ದಿನವಾದ ಗುರುವಾರ ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿತ್ತು. ಪಟ್ಟಣದ ಬಸ್ ನಿಲ್ದಾಣದ ಮುಂದಿರುವ ಹೋಟೆಲ್​ಗಳ ಮುಂದೆ ಗೌಜು-ಗದ್ದಲ ಎಂದಿನಂತಿದೆ.

    ನಿದ್ರೆಗೆ ಜಾರಿದ ಸಮಿತಿಗಳು

    ತಾಲೂಕಿನಲ್ಲಿ ಕರೊನಾ ವೈರಸ್ ಹರಡದಂತೆ ಮುನ್ನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್​ಫೋರ್ಸ್ ಹಾಗೂ ಸಮನ್ವಯ ಸಮಿತಿಗಳನ್ನು ರಚಿಸಿದ್ದರೂ ಅವು ಕಾಟಾಚಾರಕ್ಕೆ ಎನ್ನುವಂತಿವೆ. ತಾಲೂಕಿನಲ್ಲಿ ಕರೊನಾ ಜಾಗೃತಿಯ ಬಗೆಗೆ ಯಾವುದೇ ಕೆಲಸ, ಕಾರ್ಯಗಳು ನಡೆಯುತ್ತಿಲ್ಲ.

    ರೋಣ ಬಸ್ ನಿಲ್ದಾಣ ನಿತ್ಯ ಪ್ರಯಾಣಕರಿಂದ ತುಂಬಿ ತುಳುಕುತ್ತಿದೆ. ಪ್ರತಿದಿನ ಜಿಲ್ಲೆ ಸೇರಿ ರಾಜ್ಯದ ಭಾಗಗಳಿಂದ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ದಿನ ನಿತ್ಯ ಅವರೊಂದಿಗೆ ನಾವು ವ್ಯವಹರಿಸಬೇಕಾಗುತ್ತದೆ. ಹೀಗಾಗಿ ನಮ್ಮ ಸುರಕ್ಷತೆಗಾಗಿ ಮಾಸ್ಕ್ ನೀಡುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

    | ಎ.ಜಿ. ಗುಳಗುಳಿ, ಸಾರಿಗೆ ನಿಯಂತ್ರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts