More

    ಪಶ್ಚಿಮ ಬಂಗಾಳಕ್ಕೆ ಮರಳಿದ ಕಾರ್ವಿುಕರು

    ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ವಿುಕರು ಭಾನುವಾರ ಮಧ್ಯಾಹ್ನ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಶ್ರಮಿಕ ಎಕ್ಸ್​ಪ್ರೆಸ್ ರೈಲಿನ ಮೂಲಕ ತವರು ರಾಜ್ಯಕ್ಕೆ ಪ್ರಯಾಣ ಬೆಳೆಸಿದರು.

    ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಿಂದ ಪಶ್ಚಿಮ ಬಂಗಾಳಕ್ಕೆ ಶ್ರಮಿಕ ಎಕ್ಸ್​ಪ್ರೆಸ್ ರೈಲು ಸಂಚರಿಸಿತು. ಹುಬ್ಬಳ್ಳಿಯಿಂದ ಮಧ್ಯಾಹ್ನ 12.10ಕ್ಕೆ ಹೊರಟ ರೈಲು, ಮಂಗಳವಾರ ಸಂಜೆ 4.30ಕ್ಕೆ ಪಶ್ಚಿಮ ಬಂಗಾಳದ ನ್ಯೂ ಜಲಪೈಗುರಿ ನಿಲ್ದಾಣ ತಲುಪಲಿದೆ.

    ಧಾರವಾಡ ಜಿಲ್ಲೆಯ 744, ಬೆಳಗಾವಿಯ 333, ಗದಗನ 157 ಹಾಗೂ ಹಾವೇರಿಯ 52 ವಲಸೆ ಕಾರ್ವಿುಕರು ಹಾಗೂ ಅವರ ಕುಟುಂಬದವರು ಸೇರಿ ಒಟ್ಟು 1,286 ಜನ ಹಾಗೂ ಅವರ ಕುಟುಂಬದವರು ಪಶ್ಚಿಮ ಬಂಗಾಳಕ್ಕೆ ಮರಳಿದರು.

    ಧಾರವಾಡದ ವಲಸೆ ಕಾರ್ವಿುಕರಿಗೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಯಿತು. ಬೆಳಗಾವಿ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಕಾರ್ವಿುಕರ ಆರೋಗ್ಯ ತಪಾಸಣೆಯನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಿ, ಸಾರಿಗೆ ಬಸ್​ಗಳ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಕರೆ ತರಲಾಯಿತು. ನಿಲ್ದಾಣ ಪ್ರವೇಶಿಸುವ ಮೊದಲು ಮತ್ತೊಮ್ಮೆ ಎಲ್ಲ ವಲಸೆ ಕಾರ್ವಿುಕರು ಹಾಗೂ ಅವರ ಕುಟುಂಬದವರ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ನಡೆಸಿ, ಸ್ಯಾನಿಟೈಸರ್ ನೀಡಲಾಯಿತು. ಪೊಲೀಸ್ ಇಲಾಖೆಯಿಂದ ಎಲ್ಲ ಕಾರ್ವಿುಕರಿಗೆ ಬಿಸ್ಕತ್ ಹಾಗೂ ಇಸ್ಕಾನ್​ನಿಂದ ಊಟದ ಪಾರ್ಸೆಲ್ ಒದಗಿಸಲಾಯಿತು.

    ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ದೀಪಾ ಗೌರಿ ನೇತೃತ್ವದಲ್ಲಿ ಮಹಿಳಾ ಪ್ರಯಾಣಿಕರಿಗೆ ಹಾಗೂ ರೈಲ್ವೆ ನಿಲ್ದಾಣದ ಮಹಿಳಾ ಕಾರ್ವಿುಕರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ನೀರಿನ ಬಾಟಲಿ ನೀಡಲಾಯಿತು.

    ನಿಲ್ದಾಣದಲ್ಲಿದ್ದ ರೈಲ್ವೆ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಚಪ್ಪಾಳೆ ತಟ್ಟುವ ಮೂಲಕ ವಲಸೆ ಕಾರ್ವಿುಕರನ್ನು ಬೀಳ್ಕೊಟ್ಟರು.

    ರಜೆಗೆ ಬಂದು ಸಿಲುಕಿದ ಬಾಲಕ ರಜೆಗೆಂದು ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಬಂದಿದ್ದ ಪಶ್ಚಿಮ ಬಂಗಾಳ ಹೌರಾದ ವಿದ್ಯಾರ್ಥಿ ಆಶೀಶ್ ಬ್ಯಾನರ್ಜಿ ಲಾಕ್​ಡೌನ್​ನಿಂದಾಗಿ ಇಲ್ಲಿಯೇ ಸಿಲುಕಿಕೊಂಡಿದ್ದ. ಪಿಯುಸಿ ವಿದ್ಯಾರ್ಥಿಯಾದ ಆಶೀಶ್ ಲಾಕ್​ಡೌನ್ ಘೋಷಣೆಯಾಗುವ 10 ದಿನ ಮುಂಚೆಯೇ ಹುಬ್ಬಳ್ಳಿಯ ಸಂಬಂಧಿಕರ ಮನೆಗೆ ಬಂದು, ಸುತ್ತಲಿನ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದ. 1 ತಿಂಗಳು ಇಲ್ಲಿಯೇ ಇದ್ದು, ಹೌರಾಕ್ಕೆ ಮರಳಬೇಕೆಂದುಕೊಂಡಿದ್ದ. ಆದರೆ ಲಾಕ್​ಡೌನ್​ನಿಂದಾಗಿ ಪರದಾಡುತ್ತಿದ್ದ. ಹೌರಾದಲ್ಲಿದ್ದ ಪಾಲಕರೊಂದಿಗೆ ನಿತ್ಯ ಮೊಬೈಲ್​ನಲ್ಲಿ ಮಾತನಾಡುತ್ತ, ನಿಮ್ಮ ನೆನಪಾಗುತ್ತಿದೆ. ಹೇಗಾದರೂ ಕರೆಯಿಸಿಕೊಳ್ಳಿ ಎಂದು ಅಳುತ್ತಿದ್ದನೆಂದು ಹುಬ್ಬಳ್ಳಿಯಲ್ಲಿದ್ದ ಆಶೀಶ್​ನ ಸಂಬಂಧಿಕರು ತಿಳಿಸಿದರು. ಪಶ್ಚಿಮ ಬಂಗಾಳದ ನ್ಯೂ ಜಲಪೈಗುರಿಗೆ ಶ್ರಮಿಕ ರೈಲು ಹೊರಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ನಗರದಲ್ಲಿದ್ದ ಆಶೀಶ್​ನ ಸಂಬಂಧಿಕರು, ಆತನ ಹೆಸರು ನೋಂದಾಯಿಸಿದರು. ಭಾನುವಾರ ಆತನ ಸಂಬಂಧಿಕರು ಹುಬ್ಬಳ್ಳಿ ರೈಲ್ವೆ ನಿಲ್ದಾಣದವರೆಗೆ ಬಂದು ಬೀಳ್ಕೊಟ್ಟರು. ಪಾಲಕರನ್ನು ಸೇರುವ ಉತ್ಸಾಹದಲ್ಲಿ ಆಶೀಶ್, ದಾಪುಗಾಲು ಹಾಕುತ್ತಲೇ ನಿಲ್ದಾಣದೊಳಗೆ ಹೆಜ್ಜೆ ಹಾಕಿದ.

    ಎಲ್ಲ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ರಕ್ಷಕರಿಗೆ ಕೈ ಗವಸು ಅತ್ಯವಶ್ಯವಲ್ಲ ಎಂದು ತೀರ್ವನಿಸಿ ಒದಗಿಸಿಲ್ಲ. ಆಗಾಗ ಸ್ಯಾನಿಟೈಸರ್​ನಿಂದ ಕೈ ಶುಚಿಗೊಳಿಸಿಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ. | ರಾಜಶ್ರೀ ಜೈನಾಪುರ ಮುಖ್ಯ ಆಡಳಿತಾಧಿಕಾರಿ, ಕಿಮ್್ಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts