More

    ಪಶು ಸಂಗೋಪನೆ ಇಲಾಖೆಗೆ ‘ಚುಚ್ಚುಮದ್ದು’

    ಶಿರಸಿ: ಚಿಕಿತ್ಸೆಗಾಗಿ ಜಾನುವಾರುಗಳನ್ನು ಪಶು ಆಸ್ಪತ್ರೆಗೆ ಕೊಂಡೊಯ್ದರೆ ವೈದ್ಯರ ಬದಲು ಅಟೆಂಡರ್ ಚುಚ್ಚುಮದ್ದು ನೀಡುವ ಇಲ್ಲಿನ ಪಶುಸಂಗೋಪನಾ ಆಸ್ಪತ್ರೆಯ ಕ್ರಮಕ್ಕೆ ತಾಲೂಕು ಪಂಚಾಯಿತಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

    ಬುಧವಾರ ನಗರದ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯ ನಾಗರಾಜ ಶೆಟ್ಟಿ ಮಾತನಾಡಿ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹೈನುಗಾರರನ್ನು ನಿರ್ಲಕ್ಷಿಸುತ್ತಿದ್ದಾರೆ. ಪಶು ಆಸ್ಪತ್ರೆಗೆ ಅನಾರೋಗ್ಯಪೀಡಿತ ಜಾನುವಾರನ್ನು ಕೊಂಡೊಯ್ದರೆ ಅಟೆಂಡರ್ ಕೆಲಸ ಮಾಡುವವರು ಚುಚ್ಚುಮದ್ದು ನೀಡುತ್ತಾರೆ. ವೈದ್ಯರಿದ್ದರೂ ಚಿಕಿತ್ಸೆಗೆ ಬರುವುದಿಲ್ಲ. ಇದೇ ರೀತಿಯಾದರೆ ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಇಲಾಖೆ ಅಧಿಕಾರಿ ಆರ್.ಜಿ. ಹೆಗಡೆ ಅವರನ್ನು ಎಚ್ಚರಿಸಿದರು.

    ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಮಾತನಾಡಿ, ಲೈನ್​ವೆುನ್​ಗಳಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಬೇಕು. ಹ್ಯಾಂಡ್ ಗ್ಲೌಸ್, ಹೆಡ್ ಲೈಟ್, ರೇನ್ ಕೋಟ್ ಕೊಡುವ ಕಾರ್ಯವಾಗಬೇಕು ಎಂದರು. ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ದನಗನಹಳ್ಳಿ ಭಾಗದಲ್ಲಿ ಅಕೇಶಿಯಾ ಮರಗಳು ವಿದ್ಯುತ್ ಕಂಬಗಳ ಮೇಲೆ ಬೀಳುವ ಹಂತದಲ್ಲಿವೆ. ಹೀಗಾಗಿ ಅರಣ್ಯ ಇಲಾಖೆ, ಹೆಸ್ಕಾಂ ಜತೆಯಾಗಿ ಅವುಗಳ ತೆರವು ಕಾರ್ಯ ಮಾಡಬೇಕು ಎಂದರು.

    ಆಯುಷ್ ವೈದ್ಯಾಧಿಕಾರಿ ಜಗದೀಶ ಯಾಜಿ ಮಾತನಾಡಿ, ಕರೊನಾ ನಿವಾರಣೆ ಉದ್ದೇಶಕ್ಕೆ 2300 ಕಿಟ್ ವಿತರಿಸಲಾಗಿದೆ. ಈ ಬಗ್ಗೆ ಬೇಡಿಕೆ ಬಂದರೆ ಪೂರೈಕೆ ಮಾಡಲಾಗುವುದು ಎಂದರು.

    ಸದಸ್ಯ ನಾಗರಾಜ ಶೆಟ್ಟಿ ಮಾತನಾಡಿ, ರಸ್ತೆ ಪಕ್ಕದಲ್ಲಿ ಒಣಗಿ ನಿಂತ ಬಿದಿರು ಮೆಳೆಗಳನ್ನು ತ್ವರಿತವಾಗಿ ತೆರವು ಮಾಡುವ ಕಾರ್ಯವಾಗಬೇಕು ಎಂದರು.

    ಕೃಷಿ ಅಧಿಕಾರಿ ಮಧುಕರ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಈವರೆಗೆ 1652 ಮಿಮಿ ಮಳೆಯಾಗಿದೆ. ಕೆಲ ಗದ್ದೆಗಳಲ್ಲಿ ನೀರು ನಿಂತರೂ ಹಾನಿಯಾಗಿಲ್ಲ ಎಂದರು. 1060 ಮೆ.ಟನ್ ಯೂರಿಯಾ ಈಗಾಗಲೇ ವಿತರಣೆ ಮಾಡಲಾಗಿದ್ದು, ತಾಲೂಕಿನಲ್ಲಿ ಯೂರಿಯಾ ಕೊರತೆಯಿಲ್ಲ ಎಂದರು. 6300 ಹೆ. ಪ್ರದೇಶದಲ್ಲಿ ನಾಟಿ ಹಾಗೂ ಬಿತ್ತನೆಯಾಗಿದೆ. 90 ಕ್ವಿಂ. ಬೀಜ ಇನ್ನೂ ದಾಸ್ತಾನಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಈ ವೇಳೆ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ. ಚಿನ್ನಣ್ಣನವರ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಇದ್ದರು.

    ಕಳೆದೆರಡು ದಿನಗಳಲ್ಲಿ ಹೆಸ್ಕಾಂ ವ್ಯಾಪ್ತಿಯಲ್ಲಿ 162 ಕಂಬ, 4 ಟ್ರಾನ್ಸ್ಪರ್ಮರ್ ಹಾನಿಯಾಗಿದೆ. ಏಪ್ರಿಲ್ ನಿಂದ ಈವರೆಗೆ 595 ಕಂಬ, 10 ಟ್ರಾನ್ಸ್ಪರ್ಮರ್​ಗಳು ಧರೆಗುರುಳಿವೆ.

    | ಧರ್ವ, ಹೆಸ್ಕಾಂ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts