More

    ಪರ್ಯಾಯ ದೇವರ ನೈವೇದ್ಯಕ್ಕೆ ಬಳಸುವ ತಾಮ್ರದ ಪಾತ್ರೆಗಳಿಗೆ ಕ್ರೈಸ್ತ ಕುಟುಂಬದಿಂದ ಕಲಾಯಿ

    ಉಡುಪಿ: ಅದಮಾರು ಮಠದ ಪರ್ಯಾಯ ಹಿನ್ನೆಲೆಯಲ್ಲಿ ಮಠದಲ್ಲಿ ದೇವರ ನೈವೇದ್ಯಕ್ಕೆ ಬಳಸುವ ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವ ಕಾರ್ಯ ಪೂರ್ಣಗೊಂಡಿದೆ. ಅದಮಾರು ಮಠದಲ್ಲಿರುವ 200 ವರ್ಷಕ್ಕೂ ಹೆಚ್ಚಿನ ಇತಿಹಾಸವುಳ್ಳ ಹಿತ್ತಾಳೆ, ತಾಮ್ರದ ಪಾತ್ರೆಗಳಿಗೆ ಸಾಲಿಗ್ರಾಮದ ಕ್ರೈಸ್ತ ಸಮುದಾಯದ ಕುಶಲಕರ್ಮಿಗಳು ಕಲಾಯಿ ಹಾಕಿದ್ದಾರೆ. 14 ಕೆ.ಜಿ. ತೂಕದ ಅಕ್ಕಿ ಹಿಡಿಯುವ ಪಾತ್ರೆಯಿಂದ 41 ಕೆ.ಜಿ. ಸಾಮರ್ಥ್ಯದ ಪದಾರ್ಥ ಹಿಡಿಯುವ ಪಾತ್ರೆಗಳು ಅದಮಾರು ಮಠದಲ್ಲಿವೆ. ಮಠದ ತಾಮ್ರದ ಪಾತ್ರೆ, ಕಠಾರ, ಉರುಳಿ, ಕೊಡಪಾನ, ಹಂಡೆ, ದೇವರ ನೈವೇದ್ಯಕ್ಕೆ ಬಳಸುವ ಎಲ್ಲ ಪಾತ್ರೆಗಳಿಗೆ ಕಲಾಯಿ ಹಾಕಿದ್ದು, ತೀರಾ ಕೆಟ್ಟು ಹೋಗಿರುವ ಕೆಲವು ಪಾತ್ರೆಗಳನ್ನು ರಿಪೇರಿ ಮಾಡಲಾಗಿದೆ. ಸಾಲಿಗ್ರಾಮದ ಅಲ್ಫ್ರೆಡ್ ಕಾರ್ಡೋಜ ಕಲಾಯಿ ಕೆಲಸ ಮಾಡಿದ್ದು, 8 ಮಂದಿ 12 ದಿನ ಕೆಲಸ ನಿರ್ವಹಿಸಿದ್ದಾರೆ.
    ಕಳೆದ ಆರೇಳು ವರ್ಷಗಳಿಂದ ಕೃಷ್ಣ ಮಠದೊಂದಿಗೆ ಸಂಪರ್ಕದಲ್ಲಿರುವ ಅಲ್ಫ್ರೆಡ್ ಕಾಣಿಯೂರು ಶ್ರೀಗಳ ಪರ್ಯಾಯದಿಂದ ಮಠದ ಪಾತ್ರೆಗಳಿಗೆ ಕಲಾಯಿ ಹಾಕುತ್ತಿದ್ದಾರೆ. ಪೇಜಾವರ, ಪಲಿಮಾರು ಮಠ ಬಳಿಕ ಈಗ ಅದಮಾರು ಮಠದ ಪಾತ್ರೆಗಳಿಗೆ ಕಲಾಯಿ ಹಾಕುವ ಜವಾಬ್ದಾರಿಯೂ ಸಿಕ್ಕಿದೆ. ಅದಮಾರು ಪರ್ಯಾಯದಲ್ಲಿ ಪಾತ್ರೆಗಳಿಗೆ ನಿರಂತರ ಕಲಾಯಿ ಹಾಕುವ ಜವಾಬ್ದಾರಿ ಇವರಿಗೇ ವಹಿಸಲಾಗಿದೆ.

    ಹುಳಿ, ಉಪ್ಪಿನಿಂದಾಗಿ ಹಿತ್ತಾಳೆ, ತಾಮ್ರದ ಪಾತ್ರೆಗಳ ಮೇಲ್ಪದರ ಸವೆಯುತ್ತದೆ. ಇದಕ್ಕೆೆ ಕಲಾಯಿ ಹಾಕಬೇಕಾಗುತ್ತದೆ. ಕಲಾಯಿ ಹಾಕದೆ ಕಿಲುಬು ಹಿಡಿದ ಪಾತ್ರೆಗಳಲ್ಲಿ ಆಹಾರ ಮಾಡಿದರೆ ವಿಷವಾಗಿ ಪರಿಣಮಿಸುತ್ತದೆ. ಇದರಿಂದ ವಾಂತಿ, ಭೇದಿ ಸಾಧ್ಯತೆ ಹೆಚ್ಚು. ಕಲಾಯಿಗೆ ನವಸಾಗರ, ಸ್ವಚ್ಛತೆಗೆ ಸಲರ್ ಆ್ಯಸಿಡ್, ಕಾಸ್ಟಿಕ್, ಹಳೆ ಬಟ್ಟೆ, ಮಸಿ ಅವಶ್ಯವಿದೆ.
    – ಅಲ್ಫ್ರೆಡ್ ಕಾರ್ಡೋಜ, ಕಲಾಯಿ ಕೆಲಸಗಾರ, ಸಾಲಿಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts