More

    ಪರೀಕ್ಷಾ ದಿನಾಂಕ ಮುಂದೂಡಿ

    ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ವೇಳಾಪಟ್ಟಿ ಪರಿಷ್ಕರಿಸಬೇಕು ಮತ್ತು ಪರೀಕ್ಷಾ ಶುಲ್ಕ ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ವಿವಿಧೆಡೆ ಸೋಮವಾರ ವಿದ್ಯಾರ್ಥಿಗಳು ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿದರು. ನಗರದಲ್ಲಿ ಎನ್​ಎಸ್​ಯುುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕುವೆಂಪು ವಿವಿ ಪದವಿ ಕಾಲೇಜುಗಳಲ್ಲಿ 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸೆ.8ರಿಂದ 22ರವರೆಗೆ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗಿದೆ. ಕಾಲೇಜುಗಳು ಪ್ರಾರಂಭವಾಗಿ ಎರಡು ತಿಂಗಳಾಗಿದ್ದು ಸಮಯದ ಅಭಾವದಿಂದ ಉಪನ್ಯಾಸಕರು ಪಾಠ ಪೂರ್ಣವಾಗಿ ಮುಗಿಸಿರುವುದಿಲ್ಲ. ಪಾಠಗಳು ಪೂರ್ಣಗೊಳ್ಳದಿರುವಾಗ ಪರೀಕ್ಷೆ ದಿನಾಂಕ ನಿಗಪಡಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಲ್ಲದೆ ಉತ್ತಮ ಫಲಿತಾಂಶಕ್ಕೂ ಪರಿಣಾಮ ಬೀರುತ್ತದೆ. ಪ್ರಾಚಾರ್ಯರನ್ನು ವಿಚಾರಿಸಿದಾಗ ಪಠ್ಯವನ್ನು ಪೂರ್ಣಗೊಳಿಸಲು ಕನಿಷ್ಠವೆಂದರೆ ಒಂದು ತಿಂಗಳ ಬೇಕಾಗಿದೆ. ಈವರೆಗೂ ಒಂದು ಇಂಟರ್​ನರ್ಲ್ ಪೂರ್ಣಗೊಳಿಸಲಾಗಿದ್ದು ಇನ್ನೂ ಒಂದು ಬಾಕಿ ಇದೆ. ಎಲ್ಲ ತರಗತಿಗಳನ್ನು ಆ.30ರೊಳಗೆ ಮುಗಿಸುವಂತೆ ಕುವೆಂಪು ವಿವಿಯಿಂದ ಆದೇಶ ಬಂದಿದೆ ಎಂದರು.

    ಪಾಠಗಳು ಪೂರ್ಣ ಪ್ರಮಾಣದಲ್ಲಿ ನಡೆಯದಿರುವ ಕಾರಣ 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಯನ್ನು ಒಂದು ತಿಂಗಳ ಅವಧಿಗೆ ಮುಂದೂಡಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದರು. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ದಿನಾಂಕವನ್ನು ಮುಂದೂಡಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಅನುಕೂಲ ಕಲ್ಪಿಸಲಾಗಿದೆ. ಹಾಗಾಗಿ ಕುವೆಂಪು ವಿವಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಅವಧಿಯನ್ನು ಕನಿಷ್ಠ ಒಂದು ತಿಂಗಳ ಮುಂದೂಡುವಂತೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts