More

    ಪರಿಹಾರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

    ಹಿರೇಕೆರೂರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ವ್ಯವಸಾಯ ವೃತ್ತಿಪರ ಯೂನಿಯನ್​ನ ತಾಲೂಕು ಘಟಕದಿಂದ ಪಟ್ಟಣದ ಜಿ.ಬಿ. ಶಂಕರಾವ್ ವೃತ್ತದಿಂದ ತಾಲೂಕು ಪಂಚಾಯಿತಿ ಕಾರ್ಯಾಲಯದವರೆಗೆ ಗುರುವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

    ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯೂನಿಯನ್ ತಾಲೂಕು ಅಧ್ಯಕ್ಷೆ ಕಾಮಾಕ್ಷಿ ರೇವಣಕರ್ ಮಾತನಾಡಿ, ಕಳೆದ 6 ತಿಂಗಳು ಹಿಂದೆ ಅತಿವೃಷ್ಟಿಯಿಂದಾಗಿ ಬಡಕೂಲಿ ಕಾರ್ವಿುಕರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಪರಿಹಾರ ಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೆಚ್ಚು ಮನೆ ಕಳೆದುಕೊಂಡ ಕೂಲಿ ಕಾರ್ವಿುಕರಿಗೆ ಹೆಚ್ಚುವರಿ ಪರಿಹಾರವನ್ನು ರಾಜ್ಯ ಸರ್ಕಾರ ಘೊಷಿಸಿದರೂ ಕಾರ್ವಿುಕರ ಖಾತೆಗೆ ಹಣ ಜಮಾ ಆಗಿಲ್ಲ. ಕೂಡಲೆ ಜಮಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮಾಡಿದ ಕಾರ್ವಿುಕರಿಗೆ ವೇತನ ಜಮೆಯಾಗಿಲ್ಲ. ಈ ಯೋಜನೆಯಡಿ 250 ದಿನ ಕೆಲಸ, 450 ರೂ. ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

    ನಂತರ ತಾಪಂ ಇಒ ಶ್ರೀನಿವಾಸ ಎಚ್.ಜಿ. ಅವರಿಗೆ ಮನವಿ ಸಲ್ಲಿಸಲಾಯಿತು. ಯೂನಿಯನ್ ಪದಾಧಿಕಾರಿಗಳಾದ ನವೀನ್ ಹುಲ್ಲತ್ತಿ, ನಾಗರಾಜಪ್ಪ ಮಳೂರು, ಗುಡ್ಡಪ್ಪ ಮಡಿವಾಳರ, ಮಂಜುನಾಥ ಮಳಲಿಮಠ, ಕಮಲವ್ವ ಕುಂಬಾರ, ಶಶಿಕಲಾ ಆರಿಕಟ್ಟಿ, ಶಾಂತವ್ವ ಬಸರೀಹಳ್ಳಿ, ರಾಜಶೇಖರ ಹರಿಕೇರ, ಹನುಮಂತಪ್ಪ ಹಂಡೇರ, ವಿಜಯಾ ದೊಣ್ಣೇರ, ಗಂಗಮ್ಮ ಅಣ್ಣಣ್ಣನವರ ಹಾಗೂ ಕೂಲಿ ಕಾರ್ವಿುಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts