More

    ಪರಿಶುದ್ಧ ಕಾಯಕದ ಹಣದಿಂದ ದಾಸೋಹ ನಡೆಸಿ

    ಸರಗೂರು: ಪರಿಶುದ್ಧ ಕಾಯಕದಿಂದ ಬಂದ ಹಣದಿಂದ ದಾಸೋಹವನ್ನು ನಡೆಸಬೇಕು ಎಂದು ಸಾಹಿತಿ ದೇವರಾಜು ಪಿ. ಚಿಕ್ಕಹಳ್ಳಿ (ದೇಚಿ) ಸಲಹೆ ನೀಡಿದರು.

    ಸರಗೂರಿನ ಪಡುವಲು ಶ್ರೀವಿರಕ್ತ ಮಠದಲ್ಲಿ ಗುರುವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಪಡುವಲು ಶ್ರೀ ವಿರಕ್ತ ಮಠ, ಬಿಡುಗಲು ಹಾಗೂ ಸರಗೂರು ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿ, ಕಾಯಕ ಮತ್ತು ದಾಸೋಹ ಸಮಾಜದ ಎರಡು ಕಣ್ಣುಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಕಾಯಕ ತತ್ವದ ಆಧಾರದ ಮೇಲೆ ನಿರ್ಮಾಣವಾದ ಶರಣ ಧರ್ಮ ದಾಸೋಹವೆಂಬ ಕರ್ತವ್ಯವನ್ನೂ ಬೋಧಿಸುತ್ತದೆ. ಅನೇಕ ಶರಣರು ತಮ್ಮ ಹೆಸರುಗಳ ಹಿಂದೆ ತಮ್ಮ ತಮ್ಮ ಕಾಯಕದ ಹೆಸರನ್ನು ಬರೆದು ಕಾಯಕ ಸಮಾಜದ ಮಹತ್ವವನ್ನು ಸಾರಿದ್ದರು. ದಾಸೋಹವೆಂಬುದು ದಾನಕ್ಕಿಂತಲೂ ಶ್ರೇಷ್ಠ, ನಮ್ಮದು ದಾಸೋಹ ಪರಂಪರೆ, ದಾನವೆಂಬ ಪದಕ್ಕೆ ಜಾಗವಿರಕೂಡದು. ಕಾರಣ ಈ ಜಗತ್ತಿನ ಏಕೈಕ ದಾನಿ ಮಹಾದೇವನೊಬ್ಬನೇ. ಹಾಗಾಗಿ, ಕಾಯಕ ಮತ್ತು ದಾಸೋಹ ಎರಡೂ ಈ ಸಮಾಜದ ಕಣ್ಣುಗಳು ಎನ್ನುತ್ತ ಹಲವು ವಚನಗಳನ್ನು ನಿರ್ವಚನ ಮಾಡುತ್ತ ಶರಣರ ಮನ ಮುಟ್ಟಿದರು ಎಂದರು.

    ಪಡುವಲು ಶ್ರೀ ವಿರಕ್ತ ಮಠದ ಶ್ರೀ ಮಹದೇವಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಹೆಳವರಹುಂಡಿ ಸಿದ್ದಪ್ಪ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಸರಗೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಗುರುಸ್ವಾಮಿ, ತಿ.ನರಸೀಪುರ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ತೋಂಟೇಶ್, ವೀರಶೈವ ಸಮಾನ ಮನಸ್ಕ ಗೆಳೆಯರ ಬಳಗದ ಅಧ್ಯಕ್ಷ ಶ್ರೀಕಂಠಸ್ವಾಮಿ, ಕೆಂಪಮ್ಮ, ಅರ್ಜುನಹಳ್ಳಿ ಬಸಪ್ಪ, ಮಾಲಂಗಿ ಸುರೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts