More

    ಪರಿಶೀಲನೆ ಬಳಿಕವೇ ಬಿಲ್ ಪಾವತಿಸಿ

    ಕಲಬುರಗಿ: ನೀರಾವರಿ ನಿಗಮದಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಕೆಲ ಕಾಮಗಾರಿಗಳಲ್ಲಿ ಅವ್ಯವಹಾರ, ಕಳಪೆ ಇತರ ದೂರುಗಳು ಕೇಳಿ ಬಂದಿದ್ದು, ಕೆಲಸಗಳ ಪರಿಶೀಲನೆ ಆಗುವವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
    ನಗರದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಭಿಯಂತರ ಕಚೇರಿಯಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ತಾಕೀತು ಮಾಡಿದರು.
    ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಬಸವರಾಜ ಮುತ್ತಿಮೂಡ, ಡಾ.ಅವಿನಾಶ ಜಾಧವ್, ಬಿ.ಜಿ.ಪಾಟೀಲ್ ಅವರು ಬೆಣ್ಣೆತೊರಾ, ಮುಲ್ಲಾಮಾರಿ ಹಾಗೂ ಗಂಡೋರಿ ನಾಲಾ ಮತ್ತು ಕಾಲುವೆಗಳಲ್ಲಿ ಬಿರುಕು, ಕಳಪೆ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಸಚಿವರ ಗಮನ ಸೆಳೆದು, ಆರ್ಥಿಕ ಗುರಿ ಹೆಚ್ಚಿದೆ. ಆದರೆ ಭೌತಿಕ ಗುರಿ ಸಾಧಿಸಿಲ್ಲ ಎಂದು ತಿಳಿಸಿದರು.
    ಥರ್ಡ ಪಾರ್ಟಿ ಬಗ್ಗೆ ಸಂಶಯ ಇದ್ದುದರಿಂದ ನಾಲ್ಕನೇ ತಂಡವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಪ್ರೊ.ಶ್ರೀನಿವಾಸ ಅವರಿಂದ ತಪಾಸಣೆ ಮಾಡಿಸಲು ಸಂಸದರು ಕೋರಿದಾಗ ಸಚಿವರು ಸಮ್ಮತಿಸಿದರು. ಮತ್ತೆ ನಾನು ಕಲಬುರಗಿ ಭೇಟಿ ನೀಡಲಿದ್ದು, 2 ದಿನ ಇಲ್ಲೇ ವಾಸ್ತವ್ಯ ಹೂಡಿ ಎಲ್ಲ ನೀರಾವರಿ ಯೋಜನೆಗಳ ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲಿಸುವುದಾಗಿ ಹೇಳಿದರು.
    ಗಡಿಲಿಂಗದಹಳ್ಳಿ ಯೋಜನೆ ಪುನರ್ವಸತಿ ಕೇಂದ್ರಗಳ ಮೂಲಸೌಕರ್ಯಕ್ಕೆ 18 ಕೋಟಿ ಅನುದಾನ ನೀಡಲಾಗಿದೆ. ಇದುವರೆಗೆ 12 ಕೋಟಿ ರೂ. ಖರ್ಚಾಗಿದೆ. ಗಣಮಟ್ಟದ ರಸ್ತೆ, ವಿದ್ಯುತ್, ಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಿಸಿಲ್ಲ ಎಂಬುದನ್ನು ವಿಡಿಯೋ ಸಹಿತ ಸಭೆ ಸಂಸದರು ಗಮನಕ್ಕೆ ತಂದಾಗ, ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು.
    ನಿಗಮದ ಕಲಬುರಗಿ ವಲಯ ಮುಖ್ಯ ಅಭಿಯಂತರ ರಂಗನಾಥ ನಾಯಕ, ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಜೆ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎನ್.ರುದ್ರಯ್ಯ, ಅಧೀಕ್ಷಕ ಅಭಿಯಂತರ ಜಗನ್ನಾಥ ಹಲಿಂಗೆ, ಕಾರ್ಯಕಾರಿ ಇಂಜಿನಿಯರ್ ವಿಲಾಸಕುಮಾರ್ ಮಾಶೆಟ್ಟಿ ಇತರರಿದ್ದರು.

    ಮುಲ್ಲಾಮಾರಿ ಮಾದರಿ ಪ್ರವಾಸಿ ತಾಣವಾಗಿಸಿ
    ಎಂಎಲ್ಸಿ ಬಿ.ಜಿ.ಪಾಟೀಲ್ ಅವರು ಮುಲ್ಲಾಮರಿ ಜಲಾಶಯ ಪ್ರವಾಸಿ ತಾಣಕ್ಕೆ ಸೂಕ್ತವಾಗಿದೆ. ಅದನ್ನು ಹೊಸಪೇಟೆ ತುಂಗಭದ್ರಾ (ಟಿಬಿ) ಡ್ಯಾಂ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು. ಇದಕ್ಕೆ ಸಂಸದ ಜಾಧವ್ ದನಿಗೂಡಿಸಿ, ಜಿಲ್ಲೆಯ ಇತರ ಜಲಾಶಯಗಳನ್ನು ಪ್ರವಾಸಿ ತಾಣವಾಗಿಸಬೇಕು ಎಂದು ಗಮನಕ್ಕೆ ತಂದರು. ಶಾಸಕ ಸುಭಾಷ ಗುತ್ತೇದಾರ ಅವರು, ಅಮರ್ಜಾ ಜಲಾಶಯ ಬಳಿ ಸಕರ್ಾರದ 74 ಎಕರೆ ಭೂಮಿ ಇದ್ದು, ಇದನ್ನು ಪಿಕ್ನಿಕ್ ಸ್ಪಾಟ್ ಆಗಿ ಮಾಡಬೇಕು ಎಂದು ಸಲಹೆ ನೀಡಿದರು. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಬೆಂಗಳೂರು ಬಳಿಯ ಕೆಸಿ ವ್ಯಾಲಿಯಂತೆ ನಂದಿಕೂರ ಎಸ್ಟಿಪಿ (ನೀರು ಶುದ್ಧೀಕರಣ ಘಟಕ) ಅಭಿವೃದ್ಧಿ ಮಾಡುವಂತೆ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts