More

    ಪರಿಶೀಲನೆ ನಡೆಸದೆ ಬಿಲ್ ಪಾವತಿಸಬೇಡಿ

    ಸೊರಬ: ತಾಲೂಕು ಪಂಚಾಯಿತಿ ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ಸೋಮವಾರ ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಹಾಗೂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕವಾಗಿ ನಡೆಯಿತು.

    ನಯನಾ ಶ್ರೀಪಾದ ಹೆಗಡೆ ಮಾತನಾಡಿ, ತಾಪಂ ಅನುದಾನದಲ್ಲಿ ನಡೆಯುವ ಕಾಮಗಾರಿಗಳನ್ನು ಹಾಗೂ ಇಲಾಖೆಯ ಖರ್ಚು ವೆಚ್ಚಗಳನ್ನು ಪರಿಶೀಲನೆ ನಡೆಸದೆ ಬಿಲ್ ಪಾಸ್ ಮಾಡಬಾರದು ಎಂದು ತಾಪಂ ಸಿಬ್ಬಂದಿಗೆ ಸೂಚಿಸಿದರು.

    ಆರೋಗ್ಯ, ಶಿಕ್ಷಣ, ಜಿಪಂ ಇಲಾಖೆಗಳ ಮೇಲಿನ ಅಧಿಕಾರಿಗಳ ವರದಿಯನ್ನು ಪ್ರಶ್ನಿಸಿದರು. ಇಲಾಖೆಗಳು ಸ್ಥಾಯಿ ಸಮಿತಿ ಅನುಮೋದನೆ ಪಡೆಯದೆ ಬಿಲ್​ಗೆ ಅನುಮೋದನೆ ಪಡೆಯಲು ಬಂದರೆ ಸಮಿತಿ ಬಿಲ್ ಪಾಸ್ ಮಾಡುವ ಮೊದಲು ಕಾಮಗಾರಿಗಳನ್ನು ಹಾಗೂ ಖರ್ಚು ವೆಚ್ಚಗಳನ್ನು ಪರಿಶೀಲನೆ ಮಾಡಬೇಕಿದೆ ಎಂದರು. ಅದಕ್ಕೆ ಸದ್ಯಸರಾದ ವಿಜಯಕುಮಾರ್, ಹನುಮಂತಪ್ಪ ಬೆಂಬಲ ವ್ಯಕ್ತಪಡಿಸಿದರು.

    ಕೃಷಿ ಇಲಾಖೆಯ ಕೃಷಿ ಉತ್ಪನ್ನ ಸಂರಕ್ಷಣಾ ಯೋಜನೆಯಡಿ ಟಾರ್ಪಲಿನ್ ವಿತರಣೆಗೆ ಅರ್ಜಿ ಆಹ್ವಾನಿಸಿದ್ದು 1,840 ರೈತರಿಗೆ ನೀಡಲು ಅವಕಾಶವಿದ್ದು ಸಮಿತಿ ಅನುಮೋದನೆ ನೀಡಬೇಕೆಂದು ಕೃಷಿ ಸಹಾಯಕ ನಿರ್ದೇಶಕ ಕೆ.ಜಿ ಕುಮಾರ್ ಸಭೆಗೆ ತಿಳಿಸಿದಾಗ, ಆದ್ಯತೆ ಆಧಾರದ ಮೇಲೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು ವಿತರಿಸುವಂತೆ ಸಭೆ ಅನುಮೊದನೆ ನೀಡಿತು.

    ಜಿಪಂನಿಂದ ನಡೆಯುವ 179 ಕಾಮಗಾರಿಗಳಲ್ಲಿ 134 ಕಾಮಗಾರಿಗಳು ಪೂರ್ಣಗೊಂಡಿವೆ. ಇವುಗಳ ಬಿಲ್ ಪಾವತಿಗೆ ಅನುಮತಿ ನೀಡಬೇಕೆಂದು ಜಿಪಂ ಸಹಯಕ ಕಾರ್ಯಪಾಲಕ ಇಂಜಿನಿಯರ್ ಯಶೋದರ ಸಭೆಗೆ ಮಾಹಿತಿ ನೀಡಿದಾಗ, ಎಲ್ಲ ಕಾಮಗಾರಿ ಪರಿಶೀಲನೆ ನಡೆಸಿ ಬಿಲ್ ಪಾವತಿಸಬೇಕು ಎಂದು ಅಧ್ಯಕ್ಷೆ ಸೂಚಿಸಿದರು. ಬಾಕಿ ಇರುವ ಕಾಮಗಾರಿಗಳ ಮಾಹಿತಿ ಹಾಗೂ ಮಾರ್ಚ್ 20ರ ಒಳಗೆ ಪೂರ್ಣಗೊಳಿಸಬೇಕು. ನಂತರ ಬಂದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಇಒ ನಂದಿನಿ ಇಂಜಿನಿಯರ್​ಗೆ ತಿಳಿಸಿದರು.

    ಸಭೆಗೆ ಇಲಾಖೆಯ ಕೆಲವು ಮುಖ್ಯ ಅಧಿಕಾರಿಗಳು ಬಾರದೆ ಇರುವುದರಿಂದ ಸಮರ್ಪಕ ಉತ್ತರ ದೊರೆಯದ ಕಾರಣ ಅಧ್ಯಕ್ಷರು ಹಾಗೂ ಸದಸ್ಯರು ಅಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ಇಒಗೆ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts