More

    ಪರಸ್ಪರ ಅಂತರ ಮರೆತ ಸುರಾಪಾನ ಪ್ರಿಯರು

    ಕಲಘಟಗಿ: ಲೌಕ್​ಡೌನ್ ಸಡಿಲಿಕೆ ಆಗಿದ್ದೇ ತಡ ಜನರು ಮದ್ಯದ ಅಂಗಡಿ, ಬ್ಯಾಂಕ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸದೆ ಎಲ್ಲೆಂದರಲ್ಲಿ ಗುಂಪು ಚರ್ಚೆಯಲ್ಲಿ ತೊಡಗá-ತ್ತಿದ್ದಾರೆ.

    ಇದರಿಂದ ತಾಲೂಕಿನಲ್ಲಿ ಕರೊನಾ ಸೋಂಕು ಕಾಣಿಸá-ವುದರಲ್ಲಿ ಯಾವುದೇ ಸಂಶಯವಿಲ್ಲದಂತಾಗಿದೆ. ತಾಲೂಕು ಆಡಳಿತ ಕರೊನಾ ತಡೆಗಾಗಿ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸá-ತ್ತಿದೆ. ದೈಹಿಕ ಅಂತರ ಕಾಯ್ದುಕೊ್ಳುವಂತೆ ತಿಳಿವಳಿಕೆ ನೀಡಿ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮತ್ತಿತರ ಸೇವೆಗಳನ್ನು ಸರ್ಕಾರ, ಸ್ಥಳೀಯ ಸೇವಾ ಸಂಸ್ಥೆಗಳು ಮಾಡá-ತ್ತಿವೆ. ಆದರೂ ಜನ ಎಚ್ಚೆತ್ತಿಲ್ಲ. ಎಲ್ಲ ಗ್ರಾಮಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಮರೀಚಿಕೆಯಾಗಿದೆ ಕಲಘಟಗಿ ಮದ್ಯ, ನ್ಯಾಯಬೆಲೆ ಅಂಗಡಿ ಕೆವಿಜಿ, ಕೆಸಿಸಿ ಬ್ಯಾಂಕ್ ಮುಂದೆ ಜನರು ಸರತಿ ನಿಲ್ಲುತ್ತಿಲ್ಲ. ಬಾರ್ ಮುಂದೆ ಅಕ್ಕಪಕ್ಕ ನಿಂತು ಮದ್ಯ ಖರೀದಿ ಪಡಿತರ ಪಡೆಯಲು ಮುಗಿಬೀಳá-ತ್ತಿದ್ದಾರೆ.

    ಕಲಘಟಗಿ ವ್ಯಾಪ್ತಿಯ ಅಂಗಡಿ-ಮುಂಗಟ್ಟುಗಳಲ್ಲಿ ಯಾವುದೇ ವಸ್ತು ಖರೀದಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವಾಗ ಪರಸ್ಪರ ಅಂತರ ಕಾಯ್ದುಕೊಳ್ಳದಿದ್ದರೆ ಅಂಗಡಿ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುವುದು. ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸá-ವಿಕೆ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸಲಾಗುವುದು.

    | ಅಶೋಕ ಶಿಗ್ಗಾಂವಿ ತಹಸೀಲ್ದಾರ್, ಕಲಘಟಗಿ

    ಬ್ಯಾಂಕ್​ಗೆ ಮುಗಿಬಿದ್ದ ಗ್ರಾಹಕರು: ಪರಸ್ಪರ ಅಂತರ ಲೆಕ್ಕಿಸದೇ ಗ್ರಾಹಕರು ಬ್ಯಾಂಕ್​ಗೆ ಮá-ಗಿಬಿದ್ದ ದೃಶ್ಯ ಕುಂದಗೋಳ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಮುಂದೆ ಕಂಡá-ಬಂತು. ವ್ಯವಹಾರ, ಜನಧನ ಖಾತೆಗೆ ಹಣ ಹಾಕಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಕ್ಕಳ ಸಮೇತ ವಯೋವೃದ್ಧರು ತಮ್ಮ ಪಾಸ್​ಬá-ಕ್​ಗೆ ಹಣ ಜಮೆಯಾಗಿದೆಯೋ ಅಥವಾ ಇಲ್ಲವೋ ಎಂಬá-ದನ್ನು ಪರಿಶೀಲಿಸಿಕೊಳ್ಳಲು ಆಗಮಿಸಿದ್ದರು. ಈ ವೇಳೆ ದೈಹಿಕ ಅಂತರ ಕಾಯ್ದುಕೊಳ್ಳದೇ ಮನಬಂದಂತೆ ನಿಂತಿದ್ದರು. ಕರೊನಾ ತಡೆಗೆ ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಸಾರ್ವಜನಿಕರು ಯಾವುದನ್ನೂ ಲೆಕ್ಕಿಸದೇ ರ್ವಸá-ತ್ತಿದ್ದಾರೆ. ಪೊಲೀಸರು ಕ್ರಮ ಕೈಗೊಂಡರೂ ಜನ ಬೈಕ್, ಕಾರು, ಮತ್ತಿತರ ವಾಹನಗಳಲ್ಲಿ ಅಕ್ಕಪಕ್ಕ ಕುಳಿತá- ವಿವಿಧೆಡೆ ತೆರಳá-ತ್ತಿದ್ದಾರೆ.

    ವ್ಯಾಪಾರಸ್ಥರು ಮಾರ್ಗಸೂಚಿ ಪಾಲಿಸಲಿ: ಲಾಕ್​ಡೌನ್ ಸಡಿಲಿಕೆ ವೇಳೆ ವ್ಯಾಪಾರಸ್ಥರು ಸರ್ಕಾರದ ನಿಯಮಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಅಣ್ಣಿಗೇರಿ ಪಟ್ಟಣದ ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿದ ಅವರು, ವ್ಯಾಪಾರಸ್ಥರಿಗೆ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ತಿಳಿ ಹೇಳಿದರು. ವ್ಯಾಪಾರಸ್ಥರು ನಿಗದಿಗಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಪ್ರತಿಯೊಬ್ಬ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳ ಮುಂದೆ 6 ಅಡಿ ಅಂತರದಲ್ಲಿ ಪರಸ್ಪರ ಅಂತರದ ಬಾಕ್ಸ್​ಗಳನ್ನು ಹಾಕಬೇಕು. ಕೈ ತೊಳೆಯಲು ಸ್ಯಾನಿಟೈಸರ್ ಇಡಬೇಕು. ಗ್ರಾಹಕರು ಮಾಸ್ಕ್​ಗಳನ್ನು ಕಡ್ಡಾಯವಾಗಿ ಧರಿಸಬೇಕು.ಪಟ್ಟಣದ ಜನರು ಸರ್ಕಾರದ ನಿಯಮಗಳನ್ನು ಪಾಲಿಸುವುದರೊಂದಿಗೆ ತಾಲೂಕಾಡಳಿತಕ್ಕೆ ಸಹಕಾರ ನೀಡಬೇಕು ಎಂದರು.

    ಮಾಸ್ಕ್ ಧರಿಸಿ ಕೆಲಸ ನಿರ್ವಹಿಸಿ: ಕರೊನಾ ಲಾಕ್​ಡೌನ್​ನಿಂದ ಕೆಲಸವಿಲ್ಲದೆ ಪರದಾಡá-ತ್ತಿದ್ದ ಕೂಲಿ ಕಾರ್ವಿುಕರಿಗೆ ಈಗ ನರೇಗಾ ಯೋಜನೆಯಡಿ ಕೆಲಸ ಆರಂಭಿಸಲಾಗಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು. ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಪಂನಿಂದ ಗ್ರಾಮದ ಬಸನಗೌಡ ಮಲ್ಲನಗೌಡ ಕೋಟೂರ ಹೊಲದಲ್ಲಿ ನರೇಗಾ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕರೊನಾದಿಂದ ಕೂಲಿ ಕಾರ್ವಿುಕರು ಸೇರಿ ಎಲ್ಲ ವರ್ಗದವರಿಗೂ ಯಾವುದೇ ಕೆಲಸವಿಲ್ಲದೇ ತೊಂದರೆಯಾಗಿತ್ತು. ಈಗ ಲಾಕ್​ಡೌನ್ ಸಡಿಲಿಕೆಯಿಂದ ಕೂಲಿಕಾರರು ನಿಟ್ಟುಸಿರು ಬಿಡá-ವಂತಾಗಿದೆ. ನರೇಗಾ ಯೋಜನೆ ಅಡಿ ಕೆಲಸ ನಿರ್ವಹಿಸá-ವ ಎಲ್ಲ ಕಾರ್ವಿುಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದರು.

    ಗ್ರಾಪಂ ಅಧ್ಯಕ್ಷ ಕಲ್ಲನಗೌಡ ಮುದಿಗೌಡ್ರ, ತವನಪ್ಪ ಅಷ್ಟಗಿ, ಕೆಎಂಎಫ್ ನಿರ್ದೇಶಕ ಶಂಕರ ಮುಗದ, ತಾಪಂ ಸದಸ್ಯ ಈರಣ್ಣ ಏಣಗಿ, ಎಪಿಎಂಸಿ ಸದಸ್ಯ ಬಸವರಾಜ ಹೊಸೂರ, ತಾಪಂ ಇಒ ಎ.ಎಸ್. ಕಾದ್ರೊಳ್ಳಿ, ಸಂತೋಷಗೌಡ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts