More

    ಪರಮೇಶ್ವರನಿಗೆ ಭಕ್ತಿಯ ಅರ್ಪಣೆ

    ಶಿರಸಿ: ತಾಲೂಕಿನ ಪ್ರಸಿದ್ಧ ಶಿವತಾಣಗಳಲ್ಲಿ ಮಹಾಶಿವರಾತ್ರಿಯ ಆಚರಣೆ ಶ್ರದ್ಧಾಭಕ್ತಿಯ ನಡುವೆ ಸಂಭ್ರಮದಿಂದ ಜರುಗಿತು. ಇಲ್ಲಿನ ಪುಣ್ಯಕ್ಷೇತ್ರ ಸಹಸ್ರಲಿಂಗ ಸೇರಿ ಗ್ರಾಮೀಣ ಭಾಗಗಳ ಶಿವತಾಣಗಳಲ್ಲಿ ಸಾವಿರಾರು ಭಕ್ತರು ಸರತಿಯಲ್ಲಿ ನಿಂತು ಮಹಾಶಿವನಿಗೆ ಮಹಾಪೂಜೆ ಸಲ್ಲಿಸಿದರು.

    ಇತಿಹಾಸ ಪ್ರಸಿದ್ಧ ಸಹಸ್ರಲಿಂಗದಲ್ಲಿ ಶಾಲ್ಮಲಾ ನದಿ ನೀರೊಳಗಿನ ಶಿವಲಿಂಗಗಳಿಗೆ ವಿಶೇಷ ಪೂಜೆ ನೆರವೇರಿತು. ಸಾವಿರಾರು ಭಕ್ತರು ಹರಿಯುತ್ತಿರುವ ಶಾಲ್ಮಲಾ ನದಿಯಲ್ಲಿ ಪುಣ್ಯ ಸ್ನಾನಗೈದರು. ನಂತರ ನದಿ ಮಧ್ಯದ ಹಾಗೂ ದಂಡೆ ಮೇಲಿನ ಶಿವಲಿಂಗಗಳಿಗೆ ಚಿಲಗಿ ಮಾಲೆ, ಬಿಲ್ವಪತ್ರೆ ಸೇರಿದಂತೆ ವಿವಿಧ ಶಿವಪ್ರಿಯ ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಿ, ನದಿಯ ನೀರಿನಿಂದ ಅಭಿಷೇಕ ಮಾಡಿ ಕೃತಾರ್ಥರಾದರು.

    ಬನವಾಸಿಯ ಮಧುಕೇಶ್ವರ ದೇವಾಲಯ, ಪಂಚಲಿಂಗ ದೇವಾಲಯ, ನಗರದ ಶಂಕರ ದೇವಾಲಯ, ಗುಡ್ನಾಪುರದ ಶ್ರೀಬಂಗಾರೇಶ್ವರ ದೇವಾಲಯ, ಕೊಪ್ಪ, ಕಲಗಾರ ಸೇರಿದಂತೆ ತಾಲೂಕಿನ ವಿವಿಧ ಭಾಗದ ಈಶ್ವರ ದೇವಾಲಯಗಳಲ್ಲಿ ಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಳೆದೆಲ್ಲ ವರ್ಷಕ್ಕಿಂತ ಈ ವರ್ಷ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿವತಾಣಗಳಿಗೆ ಆಗಮಿಸಿದ್ದುದು ವಿಶೇಷವಾಗಿತ್ತು. ಜನಜಂಗುಳಿಯಿದ್ದರೂ ಶಾಂತಿಯಿಂದ ಸರತಿಯಲ್ಲಿ ನಿಂತು ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts