More

    ಪದವಿಪೂರ್ವ ಚಿತ್ರ ಬಿಡುಗಡೆ 30ಕ್ಕೆ, ನಟ ಪೃಥ್ವಿ ಶಾಮನೂರ್ ಮೊದಲ ಚಿತ್ರ

    ಹುಬ್ಬಳ್ಳಿ: ಯೋಗರಾಜ ಭಟ್ ಹಾಗೂ ರವಿ ಶಾಮನೂರ್ ಅವರ ನಿರ್ವಣದಲ್ಲಿ ಮೂಡಿ ಬಂದಿರುವ ಪದವಿ ಪೂರ್ವ ಚಿತ್ರವು ಡಿ. 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಪೃಥ್ವಿ ಶಾಮನೂರ್ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನನ್ನ ಮೊದಲ ಚಿತ್ರ. ಚಿತ್ರದಲ್ಲಿರುವ ಬಹುತೇಕ ಎಲ್ಲರೂ ಹೊಸಬರು. ದಶಕಗಳ ಹಿಂದೆ 1996-97ರಲ್ಲಿ ಪಿಯುಸಿ ವಿದ್ಯಾರ್ಥಿಗಳು, ಆ ವಯಸ್ಸಿನ ಯುವಕರಲ್ಲಿ ಕಂಡು ಬರುವ ತುಮುಲಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ಎಂದರು.

    ಮೊಬೈಲ್ ಇಲ್ಲದ ಆ ದಿನಗಳಲ್ಲಿ ಸ್ನೇಹ, ಬಾಂಧವ್ಯ ಹೇಗೆಲ್ಲ ಇತ್ತು ಎಂಬುದನ್ನು ತೋರಿಸಲಾಗಿದ್ದು, ಕಾಲೇಜು ದಿನಗಳನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುವಂತೆ ಮಾಡಲಿದೆ. ಕರ್ನಾಟಕದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ನಾಲ್ಕು ಹಾಡುಗಳಿವೆ. ಅರ್ಜುನ ಜನ್ಯ ಅವರ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದರು.

    ಹರಿಪ್ರಸಾದ್ ಜಯಣ್ಣ ಅವರ ನಿರ್ದೇಶನದಲ್ಲಿ ಹಿರಿಯ ಕಲಾವಿದರಾದ ರಂಗಾಯಣ ರಘು, ಶರತ್ ಲೋಹಿತಾಶ್ವ, ಅದಿತಿ ಪ್ರಭುದೇವ ಇತರರು ಕಾಣಿಸಿಕೊಳ್ಳಲಿದ್ದಾರೆ.

    ನಟಿ ಸುಷ್ಮಿತಾ ಮಾತನಾಡಿ, ಚಿತ್ರವು ಮೂರು ಹಂತದ ಕಥೆ ಒಳಗೊಂಡಿದೆ. ಕುಟುಂಬದ ಸದಸ್ಯರು ನೋಡುವಂತಿದೆ ಎಂದರು.

    ವಿಲನ್ ಪಾತ್ರಧಾರಿ ವಿಜಯಕಿರಣ, ಇತರ ನಟರಾದ ವಿಜೇಶ್, ರಜನೀಶ್, ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts