More

    ಪತ್ರಕರ್ತರನ್ನು ಎಚ್ಚರಿಸುವುದೇ ಪತ್ರಿಕಾ ದಿನ

    ಭಾಲ್ಕಿ: ಪತ್ರಿಕಾ ದಿನ ಆಚರಣೆ ಮಾಡುವುದೆಂದರೆ ಪತ್ರಕರ್ತರನ್ನು ಎಚ್ಚರಿಸಿದಂತೆ. ಅವರ ಕರ್ತವ್ಯಗಳನ್ನು ಲೋಪದೋಷಗಳಿಲ್ಲದಂತೆ, ತಾರತಮ್ಯ ಮಾಡದೆ ಸಕರ್ಾರದ ಕಣ್ತೆರೆಸುವ ಕಾರ್ಯ ಮಾಡುವುದಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

    ಭೀಮಣ್ಣ ಖಂಡ್ರೆ ತಾಂತ್ರಿಕ ಶಿಕ್ಷಣ (ಬಿಕೆಐಟಿ) ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕೆಗಳು ಪಾರದರ್ಶಕ ಕೆಲಸ ಮಾಡಬೇಕಾಗಿದೆ. ಆದರೆ ಕೆಲವರ ಕಪಿಮುಷ್ಠಿಯಲ್ಲಿ ಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

    ಸಕರ್ಾರದ ಕಣ್ತೆರೆಸುವುದರ ಜತೆಗೆ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ಎತ್ತಿ ತೋರಿಸುವಂಥ ಹೊಣೆ ಹೊತ್ತಿರುವ ಪತ್ರಕರ್ತರಿಗೆ ಯಾವುದೇ ವಿಶೇಷ ಅನುದಾನ ಅಥವಾ ಪ್ಯಾಕೇಜ್ ಇಲ್ಲ. ರಕ್ಷಣೆ ಸಹ ಇಲ್ಲ. ಪತ್ರಕರ್ತರು ಸ್ವಯಂ ರಕ್ಷಣೆ ಮಾಡಿಕೊಂಡು ಪತ್ರಿಕೆಗಳ ಮೂಲಕ ನಿಜಾಂಶವನ್ನು ಜನರ ಮುಂದಿಡಬೇಕಾಗಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ್ ಮಾತನಾಡಿ, ಪತ್ರಕರ್ತರೆಂದರೆ ಸಕರ್ಾರದ ಇನ್ನೊಂದು ಅಂಗದಂತೆ ಕಾರ್ಯನಿರ್ವಹಣೆ ಮಾಡುವವರು. ಸಮಾಜವನ್ನು ಎಚ್ಚರಿಸುವಂಥ ಕಾರ್ಯದಲ್ಲಿ ತೊಡಗಿರುವ ಪತ್ರಿಕೆಗಳು, ಸಕರ್ಾರದ ಕಣ್ತೆರೆಸುವ ಕಾರ್ಯವನ್ನೂ ಸಮರ್ಥವಾಗಿ ಮಾಡುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ವಿಶೇಷ ಸನ್ಮಾನ ಸ್ವೀಕರಿಸಿದ ವಿಜಯವಾಣಿ ಸ್ಥಾನಿಕ ಸಂಪಾದಕ ಸದಾನಂದ ಜೋಶಿ ಮಾತನಾಡಿ, ಇಂದು ಪತ್ರಕರ್ತರು ಸತ್ಯ ಬರೆಯಬೇಕಾದರೂ ಹೆದರುವಂಥ ಸ್ಥಿತಿ ಇದೆ. ಏಕೆಂದರೆ ಅವರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ. ಪತ್ರಿಕಾ ರಂಗವನ್ನು ಸಕರ್ಾರದ 4ನೇ ಅಂಗವೆಂದು ಹೇಳುತ್ತ ಬರುತ್ತಿದ್ದರೂ ಪತ್ರಕರ್ತರಿಗೆ ಭದ್ರತೆ ಒದಗಿಸುವಂಥ ಯಾವೊಂದು ಕಾಯ್ದೆ ಅನುಷ್ಠಾನಕ್ಕೆ ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

    ಪುರಸಭೆ ಅಧ್ಯಕ್ಷ ಅನೀಲ ಸುಂಟೆ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಾಜೇಶ ಮುಗಟೆ, ಹಿರಿಯ ಪತ್ರಕರ್ತರಾದ ಅಪ್ಪಾರಾವ ಸೌದಿ, ರೇವಣಸಿದ್ದಪ್ಪ ಪಾಟೀಲ್, ಶಶಿಕಾಂತ ಬಂಬುಳಗೆ, ಶ್ರೀಕಾಂತ ಬಿರಾದಾರ, ದೃಶ್ಯ ಮಾಧ್ಯಮದ ವರದಿಗಾರರಾದ ಸುರೇಶ ನಾಯಕ್, ಮಲ್ಲಿಕಾಜರ್ುನ ಮರಕಲೆ, ಲಿಂಗೇಶ ಮರಕಲೆ, ಸಂಜೀವಕುಮಾರ ಬಕ್ಕಾ, ರಾಜಕುಮಾರ ಸ್ವಾಮಿ ಹಾಗೂ ಶಶಿಧರ ಕೋಸಂಬೆ ಇದ್ದರು. ಬಿಕೆಐಟಿ ಪ್ರಾಚಾರ್ಯ ಡಾ.ನಾಗಶೆಟ್ಟೆಪ್ಪ ಬಿರಾದಾರ ಸ್ವಾಗತಿಸಿದರು. ಬಸವರಾಜ ಕಾವಡಿ ನಿರೂಪಣೆ ಮಾಡಿದರು. ಅಂಕುಶ ಢೋಲೆ ವಂದಿಸಿದರು.

    ಜಿಲ್ಲಾ ಕೇಂದ್ರ ಸೇರಿ ಔರಾದ್, ಕಮಲನಗರ, ಚಿಟಗುಪ್ಪ, ಬಸವಕಲ್ಯಾಣ, ಹುಮನಾಬಾದ್ ಮತ್ತು ಭಾಲ್ಕಿ ತಾಲೂಕಿನ ಪತ್ರಕರ್ತರನ್ನು ಸನ್ಮಾನಿಸಲಾಯಿತು.

    ಮುಂದಿನ ವರ್ಷದಿಂದ ತಾಲೂಕಿಗೆ ಒಬ್ಬರಂತೆ ಪತ್ರಿಕಾ ರಂಗದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಪತ್ರಕರ್ತರನ್ನು ಗುರುತಿಸಿ ಮಾತೋಶ್ರೀ ಲಿಂ.ಲಕ್ಷ್ಮೀಬಾಯಿ ಭೀಮಣ್ಣ ಖಂಡ್ರೆ ಹೆಸರಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಮೂಲಕ ಪತ್ರಕರ್ತರ ಕೊಡುಗೆಯನ್ನು ನಾಡಿಗೆ ಮತ್ತು ಪತ್ರಕರ್ತ ವೃತ್ತಿಯ ಮಹತ್ವ ಸಮಾಜಕ್ಕೆ ತಿಳಿಸಿಕೊಟ್ಟಂತಾಗಲಿದೆ.
    | ಈಶ್ವರ ಖಂಡ್ರೆ, ಶಾಸಕ

    ಪತ್ರಕರ್ತ ಮತ್ತು ರಾಜಕಾರಣಿ ಮಧ್ಯೆ ಅನ್ಯೋನ್ಯ ಸಂಬಂಧವಿದೆ. ಕೆಲವು ಸಲ ಪತ್ರಕರ್ತರು ವಿದ್ಯಮಾನಕ್ಕೆ ಅನುಗುಣವಾಗಿ ಹರಿತವಾಗಿ ಬರೆಯಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ರಾಜಕಾರಣಿಗಳು ಅಪಾರ್ಥ ಮಾಡಿಕೊಳ್ಳದಿದ್ದರೆ ಅವರ ರಾಜಕೀಯ ಭವಿಷ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಬದಲಾವಣೆಗೆ ಕಾರಣವಾಗುತ್ತದೆ.
    | ಸದಾನಂದ ಜೋಶಿ, ವಿಜಯವಾಣಿ ಸ್ಥಾನಿಕ ಸಂಪಾದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts