More

    ಪತಮಾತ್ಮ ತತ್ವವೇ ಬಾಳಿಗೆ ಬೆಳಕು ತೋರಬಲ್ಲ ಏಕೈಕ ಸಾಧನ

    ಇಳಕಲ್ಲ(ಗ್ರಾ): ಮುನುಷ್ಯ ಜೀವನದ ಮೇಲೆ ಜ್ಞಾನ ಹಾಗೂ ವಿಜ್ಞಾನದ ಪ್ರಭಾವವು ತುಂಬ ಇದೆ. ಅವಿನಾಶಿಯಾಗಿರುವ ಪರಮಾತ್ಮ ತತ್ವವೇ ಬಾಳಿಗೆ ಬೆಳಕು ತೋರಬಲ್ಲ ಏಕೈಕ ಸಾಧನವಾಗಿದೆ ಎಂದು ಪಂಡಿತ ಸಮೀರಣಾಚಾರ್ಯ ಪಾಂಗರಿ ಪ್ರತಿಪಾದಿಸಿದರು.
    ಇಲ್ಲಿಯ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಭಗವದ್ ಗೀತಾ ಅಭಿಯಾನ ಸರಣಿಯ ಚೈತ್ರ ಮಾಸದ ಪ್ರವಚನಕಾರರಾಗಿ ಅವರು ಆಗಮಿಸಿದ್ದರು.
    ಉತ್ತರಾದಿ ಮಠಾದೀಶ ಸತ್ಯಾತ್ಮತೀರ್ಥರ ಸುವರ್ಣ ಮಹೋತ್ಸವ ನಿಮಿತ್ತ ಉತ್ತರಾದಿ ಮಠದ ಧರ್ಮ ಜ್ಞಾನವಾಹಿನಿ, ವಿಶ್ವಮಾಧ್ವಪರಿಷತ್ತು, ಬಾಗಲಕೋಟೆ ಹಾಗೂ ಇಳಕಲ್ಲ ಬ್ರಾಹ್ಮಣ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ ಸೇವಾ ಸಂಸ್ಥೆಗಳು ಸಂಯುಕ್ತವಾಗಿ ಈ ಅಭಿಯಾನ ಹಮ್ಮಿಕೊಂಡಿವೆ. ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
    ಪ್ರಾಯೋಜಕ ಖ್ಯಾತ ನೇತ್ರ ತಜ್ಞ ಡಾ. ಸುಶೀಲ ಕಾಖಂಡಕಿ ಅವರನ್ನು ಇಳಕಲ್ಲ ಬ್ರಾಹ್ಮಣ ಸಮಾಜ ಪರ ಪಾಂಗರಿ ಆಚಾರ್ಯರು ಗೌರವಿಸಿದರು.
    ಮಹಿಪತಿ ಕುಲಕರ್ಣಿ, ಸುರೇಖಾ ದೇಶಪಾಂಡೆ, ವೆಂಕಟೇಶದಾಸ ಸಿಡ್ಲಿಗೇರಿ, ಕಮಲಾಕರ ದೇಶಪಾಂಡೆ, ಬಂಡು ಕಟ್ಟಿ ಮಾತನಾಡಿದರು.
    ಶ್ರೀಹರಿ ಪೂಜಾರ ವೇದಘೋಷ ಮಾಡಿದರು. ವೆಂಕಟೇಶ ಪೂಜಾರ ಧಾರ್ಮಿಕ ಚಟುವಟಿಕೆ ನಿರ್ವಹಿಸಿದರು. ವಿಜಯ ಕಾರ್ಕಳ, ಕಾಶೀನಾಥ ದೇಶಪಾಂಡೆ, ಗಿರಿಧರ ದೇಸಾಯಿ ಮೊದಲಾದ ಪದಾಧಿಕಾರಿಗಳು ಆಚಾರ್ಯರನ್ನು ಗೌರವಿಸಿ ಸತ್ಕರಿಸಿದರು.
    ಗುರುರಾಜ ಕುಲಕರ್ಣಿ, ಭಾಸ್ಕರ್ ಪಾಟೀಲ, ವೆಂಕಟೇಶ ಇದ್ದಲಗಿ, ಮೋಹನ ಗೊಂಬಿ, ಅಶೋಕ ಗೊಂಬಿ, ರಂಗಣ್ಣ ಇನಾಂದಾರ, ರವಿ ಬಲಕುಂದಿ, ಗುರುರಾಜ ಪೂಜಾರ, ಪ್ರೊ.ಎಂ.ಎಸ್. ಜೋಶಿ, ಸತೀಶ ಹುನಕುಂಟಿ, ಗಿರೀಶ ಜೋಶಿ, ನರಸಿಂಹ ಪೂಜಾರ, ಸಮೀರ ಜೋಶಿ ಇತರರಿದ್ದರು. ಲಕ್ಷ್ಮೀ ಮಹಿಳಾ ಮಂಡಳಿ ಸದಸ್ಯೆಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts