More

    ಪತಂಜಲಿಯಿಂದ ಡಿಜಿಟಲ್ ಯೋಗ ದಿನಾಚರಣೆ ನಾಳೆ

    ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ ರಾಜ್ಯ ಕಾರ್ಯಾಲಯ ಹುಬ್ಬಳ್ಳಿಯಿಂದ ಜೂ. 21ರಂದು 6ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ.

    ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಕರೊನಾ ಸೋಂಕಿನಿಂದಾಗಿ ಡಿಜಿಟಲ್ ಯೋಗ ದಿನ ಆಚರಣೆಗೆ ಪತಂಜಲಿ ಯೋಗ ಸಮಿತಿ ಮುಂದಾಗಿದೆ.

    ಹರಿದ್ವಾರದ ಪತಂಜಲಿ ಯೋಗ ಪೀಠದ ಅಡಿ ಯೋಗ ಗುರು ಬಾಬಾ ರಾಮದೇವ ಗುರೂಜಿ ಹಾಗೂ ಸಮಿತಿಯ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ 6ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಫೇಸ್​ಬುಕ್ ಲೈವ್ ಮೂಲಕ ಆಚರಿಸಲಾಗುತ್ತದೆ.

    ಜೂ. 21ರಂದು ಬೆಳಗ್ಗೆ 6 ಗಂಟೆಗೆ ಫೇಸ್​ಬುಕ್ ಲೈವ್ ನೇರ ಪ್ರಸಾರದ ಮೂಲಕ ಮೊದಲು ಪ್ರಾರ್ಥನೆ, ಕೆಲವು ಸೂಕ್ಷ್ಮ ವ್ಯಾಯಾಮಗಳ ನಂತರ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ತಾನ ಮಂಡುಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂದಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ ಮತ್ತು ಪ್ರಾಣಾಯಾಮಗಳಾದ ಕಪಾಲಭಾತಿ, ಅನುಲೋಮ ವಿಲೋಮ, ಶಿತಲಿ, ಭ್ರಾಮರಿ ಮತ್ತು ಧ್ಯಾನಗಳನ್ನು ನೇರ ಪ್ರಸಾರದಲ್ಲಿ ಅಭ್ಯಾಸ ಮಾಡುವ ಮೂಲಕ ಯೋಗ ದಿನ ಆಚರಿಸಲಾಗುವುದು. ಸಾರ್ವಜನಿಕರು, ಸಂಘ-ಸಂಸ್ಥೆಗಳು ಯೋಗಾಚಾರ್ಯ ಭವರಲಾಲ್ ಆರ್ಯ ಫೇಸ್​ಬುಕ್ ಪೇಜ್ ಲೈಕ್ ಮಾಡಿ ನೇರ ಪ್ರಸಾರದಲ್ಲಿ ಭಾಗಿಯಾಗಿ ಯೋಗಾಭ್ಯಾಸ ಮಾಡಬಹುದು. ಕರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ನಿತ್ಯ ಯೋಗಾಭ್ಯಾಸ ಅಗತ್ಯ. ಯೋಗವು ರೋಗಿಗಳಿಗೆ ಚಿಕಿತ್ಸಾ ಪದ್ಧತಿಯಾಗಿದೆ. ಆರೋಗ್ಯವಂತರಿಗೆ ಜೀವನ ಪದ್ಧತಿಯಾಗಿದೆ. ಆಧ್ಯಾತ್ಮ ಸಾಧಕರಿಗೆ ಸಾಧನಾ ಪದ್ಧತಿಯಾಗಿದೆ.

    ಕಳೆದ 15 ದಿನಗಳಿಂದ ಪತಂಜಲಿ ರಾಜ್ಯ ಕಾರ್ಯಾಲಯ ಹುಬ್ಬಳ್ಳಿಯಿಂದ ಯೋಗಾಚಾರ್ಯ ಭವರಲಾಲ್ ಆರ್ಯ ಫೇಸ್​ಬುಕ್ ಮೂಲಕ ನಿತ್ಯ ಬೆಳಗ್ಗೆ 5 ಗಂಟೆಗೆ ಯೋಗಾಭ್ಯಾಸದ ನೇರ ಪ್ರಸಾರ ನಡೆಯುತ್ತಿದೆ. ರಾಜ್ಯದಿಂದ 5 ಲಕ್ಷಕ್ಕೂ ಹೆಚ್ಚು ಜನ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    | ಭವರಲಾಲ್ ಆರ್ಯ, ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts