More

    ಪಡಿತರ ಚೀಟಿ ಫಲಾನುಭವಿಗಳ ಖಾತೆ ಸೇರಿದ 46 ಕೋಟಿ ರೂ.

    ಬೆಳಗಾವಿ: ರಾಜ್ಯ ಸರ್ಕಾರ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವ ಕುಟುಂಬ ಸದಸ್ಯರಿಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲು ನೇರ ನಗದು ವರ್ಗಾವಣೆ ಸೌಲಭ್ಯದಡಿ ಜಿಲ್ಲೆಯ 8.29 ಲಕ್ಷ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಸೋಮವಾರ ಒಟ್ಟು 46,54,18,520 ರೂ.ಜಮೆ ಮಾಡಲಾಗಿದೆ.

    ಜಿಲ್ಲೆಯಲ್ಲಿ 68,642 ಅನ್ನ ಅಂತ್ಯೋದಯ ಹಾಗೂ 10,80,929 ಬಿಪಿಎಲ್ ಸೇರಿ ಒಟ್ಟು 11,49,501 ಪಡಿತರ ಚೀಟಿ ಚಾಲ್ತಿಯಲ್ಲಿದ್ದು, ಆ ಪೈಕಿ 8,29,501 ಕುಟುಂಬಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನಗದು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

    68,230 ಅಂತ್ಯೋದಯ ಚೀಟಿಗಳ ಪೈಕಿ 4 ಸದಸ್ಯರಿರುವವರಿಗೆ ಸರ್ಕಾರದ ಮಾರ್ಗಸೂಚಿಯಂತೆ 140 ರೂ., ಐವರು ಸದಸ್ಯರಿಗೆ 510 ರೂ., ಆರು ಜನರಿದ್ದವರಿಗೆ 850 ರೂ. ಹಾಗೂ ಏಳು, ಎಂಟು ಜನ ಸದಸ್ಯರಿದ್ದರೆ ಕ್ರಮವಾಗಿ 1,190 ಹಾಗೂ 1,530 ರೂ.ಜಮೆ ಮಾಡಲಾಗಿದೆ. ಇನ್ನೂ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ಕೂಡಲೇ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು. ಇ-ಕೆವೈಸಿ ಮಾಡಿಸಿಕೊಂಡರೆ ಮುಂದಿನ ತಿಂಗಳ ಕಂತು ಖಾತೆಗೆ ಜಮೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts