More

    ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ : ಪಾಲಕರಿಗೆ ನಟಿ ಡಾ.ಪವಿತ್ರಾ ಸಲಹೆ

    ಕೊಡಗು : ಮಕ್ಕಳ ಮನಸ್ಸು ವಿಕಸನಗೊಳಿಸಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಪಾಲಕರು ಆದ್ಯತೆ ಕೊಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕಲಾ ಉಪನ್ಯಾಸಕಿ ಹಾಗೂ ನಟಿ ಡಾ.ಪವಿತ್ರಾ ಹೇಳಿದರು.

    ಸೋಮವಾರಪೇಟೆ ಯಶೋದೆ ರಂಗ ಟ್ರಸ್ಟ್ ಹಾಗೂ ಸಾಂದೀಪನಿ ಪ್ರೌಢಶಾಲೆ ವತಿಯಿಂದ ಶಾಲೆಯ ಆವರಣದಲ್ಲಿ ಬುಧವಾರ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


    ಪಾಲಕರು ತಮ್ಮ ಮಕ್ಕಳು ಹೆಚ್ಚಿನ ಅಂಕಗಳಿಸಬೇಕು, ರ‌್ಯಾಂಕ್ ಬರಬೇಕು ಎಂದು ಆಶಿಸುತ್ತಾರೆ. ಆದರೆ, ಅವರ ಮಾನಸಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಗಮನವೇ ಹರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


    ನಿಮ್ಮ ಮಕ್ಕಳ ಅಂಕಗಳು ಅಂಕಪಟ್ಟಿಯಲ್ಲಿ ಕಂಡರೆ ಸಾಲದು. ಅವರ ಪಠ್ಯೇತರ ಚಟುವಟಿಕೆ ಅವರ ಮುಂದಿನ ಜೀವನದಲ್ಲಿ ರೂಪಿಸಿಕೊಳ್ಳಲು ಸಾಧ್ಯ. ಅವರ ಚಟುವಟಿಕೆಗಳು ಕೇವಲ ಬೇಸಿಗೆ ಶಿಬಿರಕ್ಕೆ ಮೀಸಲಾಗದೆ ಅವರಿಗೆ ನಿತ್ಯವೂ ಪ್ರೋತ್ಸಾಹಿಸಿ ಎಂದರು.


    ಕಾರ್ಯಕ್ರಮದಲ್ಲಿ ಖಾಸಗಿ ವಾಹಿನಿಯ ಸರಿಗಮಪ ಪ್ರಶಸ್ತಿ ವಿಜೇತೆ ಪ್ರಗತಿ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು. ದ್ರಾವಿಡ ಕನ್ನಡಿಗರು ಸಂಸ್ಥೆ ಮುಖ್ಯಸ್ಥ ಅಭಿಗೌಡ, ಲೇಖಕಿ ಕುಶಾಲನಗರದ ಫ್ಯಾನ್ಸಿ ಮುತ್ತಣ್ಣ, ಯಶೋದೆ ರಂಗ ಟ್ರಸ್ಟ್‌ನ ಅಧ್ಯಕ್ಷ ಮುತ್ತಣ್ಣ, ರಂಗ ಕಲಾವಿದರಾದ ಅರ್ಚನಾ ಸುರೇಶ್, ಸುಮಂತ್, ಯೋಗೇಶ್, ಇನ್ಸಾಫ್, ಶಿವಕುಮಾರ್ ತೀರ್ಥಳ್ಳಿ, ಮುಖಂಡರಾದ ಗಣೇಶ್ ಎಂ.ಭೀಮನಕೋಣೆ, ನಿಶಾಂತ್ ಮುತ್ತಣ್ಣ ಇತರರು ಇದ್ದರು.
    ಶಿಬಿರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ನಾಟಕ, ಯಕ್ಷಗಾನ, ನೃತ್ಯ ಪ್ರದರ್ಶನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts