More

    ಪಟೇಲ್ ಪ್ರತಿಮೆಗೆ ಭವ್ಯ ಸ್ವಾಗತ

    ಕಲಬುರಗಿ: ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕು ಗೋರ್ಟಾ(ಬಿ) ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಶುಕ್ರವಾರ ರಾಮಮಂದಿರ ಮೂಲಕ ತೆರಳಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಬೀಳ್ಕೊಟ್ಟರು.
    ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ದೇಶ ಸ್ವಾತಂತ್ರÈ ಕಂಡರೂ ಈ ಭಾಗ ನಿಜಾಮನ ಆಳ್ವಿಕೆಗೆ ಒಳಪಟ್ಟಿತ್ತು. ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಕೈಗೊಂಡ ದಿಟ್ಟ ನಿರ್ಧಾರದಿಂದ ಈ ಭಾಗ ಭಾರತದಲ್ಲಿ ವಿಲೀನವಾಗಲು ಸಾಧ್ಯವಾಗಿದೆ. ಇಂತಹ ಮಹಾಪುರುಷನನ್ನು ಜನ ಸದಾ ಸ್ಮರಿಸಬೇಕು ಎಂದರು.
    ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ದಿಟ್ಟ ಕ್ರಮದಿಂದ ಭಾರತದ ಏಕೀಕರಣ ಕಾರ್ಯ ಆಗಿದೆ. ದೇಶದ ಸ್ವಾತಂತ್ರÈ, ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿರುವ ಅವರ ಪ್ರತಿಮೆ ಸ್ಮರಕವಾಗಿ ಗೋರ್ಟಾದಲ್ಲಿ ಪ್ರತಿಷ್ಠಾಪಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
    ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿದ್ಯಾಸಾಗರ ಶಾಬಾದಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅವಿನಾಶ ಕುಲಕರ್ಣಿ, ಪ್ರಮುಖರಾದ ಶಿವಕಾಂತ ಮಹಾಜನ್, ಮಹಾದೇವ ಬೆಳಮಗಿ, ಶಿವಯೋಗಿ ನಾಗನಹಳ್ಳಿ, ಸುಂದರ ಕುಲಕರ್ಣಿ, ನಾಗರಾಜ ಮಹಾಗಾಂವಕರ್, ಸೂರಜ ತಿವಾರಿ, ಶಿವಾ ಅಷ್ಟಗಿ, ಬಾಬುರಾವ ಹಾಗರಗುಂಡಗಿ, ಸಂತೋಷ ಹಾದಿಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts