More

    ಪಕ್ಷ ಸಂಘಟನೆ ಚಾಣಾಕ್ಷ ರಾಜೇಶ

    ಚಿಕ್ಕೋಡಿ ಬೆಳಗಾವಿ: ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ರಾಜಕೀಯವಾಗಿ ಪಕ್ಷ ಸಂಘಟನೆಯಲ್ಲಿ ಚಾಣಾಕ್ಷತೆ ಮೆರೆಯುತ್ತಿರುವ ಡಾ.ರಾಜೇಶ ನೇರ್ಲಿ ಎಂದರೆ ಕಾರ್ಯಕರ್ತರಿಗೆ ಅಚ್ಚುಮೆಚ್ಚು. ಸರಳ ಹಾಗೂ ಸೌಮ್ಯ ಸ್ವಭಾವದಿಂದ ಸದ್ದಿಲ್ಲದೆ ಬಿಜೆಪಿಯನ್ನು ಬಲಿಷ್ಠಗೊಳಿಸುತ್ತಿರುವುದು ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ ಹೇಳಿದರು.

    ಚಿಕ್ಕೋಡಿ ಬಿಜೆಪಿ ಜಿಲ್ಲಾ ಕಚೇರಿಯ ಜಯಪ್ರಕಾಶ ನಾರಾಯಣ ಭವನದಲ್ಲಿ ಶನಿವಾರ ಆಯೋಜಿಸಿದ್ದ ಡಾ.ರಾಜೇಶ ನೇರ್ಲಿ ಅವರ 52ನೇ ಜನ್ಮದಿನ ಸಮಾರಂಭ ಹಾಗೂ ಅಸಂಘಟಿತ ಕಟ್ಟಡ ಕಾರ್ಮಿಕರ ಪ್ರಕೋಷ್ಟದ ಜಿಲ್ಲಾ ಸಹಸಂಚಾಲಕರು, ಗ್ರಾಮೀಣ ಭಾಗದ ಕಟ್ಟಡ ಕಾರ್ಮಿಕರಿಗೆ ಪ್ರಮಾಣ ಪತ್ರ ಹಾಗೂ ಆರೋಗ್ಯ ಕಿಟ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಪ್ರತಿಷ್ಠಿತ ಅವಿಭಕ್ತ ಕುಟುಂಬದಿಂದ ಬಂದ ಸರಳ, ಸಜ್ಜನಿಕೆಯ ಡಾ.ರಾಜೇಶ ನೇರ್ಲಿ ಅವರು ಬಿಜೆಪಿಯನ್ನು ಬೂತ್‌ಮಟ್ಟದಲ್ಲಿ ಬೆಳೆಸುವ ಕೆಲಸ ಮಾಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಗಮನ ಸೆಳೆಯುತ್ತಿರುವ ಅವರು ಸಂಘಟನಾ ಚತುರರಾಗಿ ಬೆಳೆದಿದ್ದಾರೆ. ಜನರೊಂದಿಗೆ ಬೆರೆತು ನಡೆಯುವ ಮೃದು ಸ್ವಭಾವದಿಂದ ಜನ ಮನ್ನಣೆ ಗಳಿಸಿದ್ದಾರೆ. 52 ವಸಂತ ಪೂರೈಸಿ 53ನೇ ವಸಂತಕ್ಕೆ ಕಾಲಿಡುತ್ತಿರುವ ಅವರಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

    ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವತ್ಥಪುರ ಮಾತನಾಡಿ, ಪ್ರತಿ ಕಾರ್ಯಕರ್ತರನ್ನು ಪೇಜ್ ಮಟ್ಟದಿಂದ ಬಿಜೆಪಿಯನ್ನು ಸಂಘಟಿಸುತ್ತಿರುವ ಕ್ರಿಯಾಶೀಲ ಅಧ್ಯಕ್ಷರಾಗಿದ್ದಾರೆ ಎಂದರು.

    ಸನ್ಮಾನ ಸ್ವೀಕರಿಸಿ ಡಾ.ರಾಜೇಶ ನೇರ್ಲಿ ಮಾತನಾಡಿ, ನಾನು ಪಕ್ಷದಲ್ಲಿ ಏನಾದರೂ ಮಾಡಿದ್ದರೆ ಅದು ನನ್ನ ಸ್ವಂತಿಕೆ ಅಲ್ಲ. ಅದು ಕಾರ್ಯಕರ್ತರಿಗೆ ಪದಾಧಿಕಾರಿಗಳಿಗೆ ಸಲ್ಲುತ್ತದೆ. ನನ್ನ ಅಧಿಕಾರಾವಧಿಯಲ್ಲಿ ವಿಶೇಷವಾಗಿ ಪ್ರೋತ್ಸಾಹಿಸಿ ಎಲ್ಲ ಜನಪ್ರತಿನಿಧಿಗಳಿಗೆ ಮನಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

    ನಾನು ಅಧ್ಯಕ್ಷನಾದ ಬಳಿಕ ಸುಸಜ್ಜಿತ ಒಂದು ಜಿಲ್ಲಾ ಬಿಜೆಪಿ ಕಚೇರಿ ಮಾಡಬೇಕೆಂಬ ಮಹದಾಸೆಯಿತ್ತು ಅದು ಈಡೇರಿದೆ. ಕಚೇರಿಯಲ್ಲಿ ಸಂಸದರು, ಶಾಸಕರು, ಎಂಎಲ್‌ಸಿ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ವಿಶೇಷ ಆಸನ ವ್ಯವಸ್ಥೆ ಜತೆಗೆ ಮಿಟಿಂಗ್ ಹಾಲ್ ಸಭಾಭವನ ನಿರ್ಮಿಸಲಾಗಿದ್ದು, ಕಾರ್ಯಕರ್ತರು ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳು ಮಿಟಿಂಗ್ ನಡೆಸಲು ಸಭಾಭವನ ಸಹಕಾರಿಯಾಗಿದೆ ಎಂದರು.

    ನಾನು ವೈದ್ಯಕೀಯ ಸೇವೆ ಬದಿಗಿಟ್ಟು ನನ್ನ ಸಂಪೂರ್ಣ ಸಮಯವನ್ನು ಪಕ್ಷ ಸಂಘಟನೆಗೆ ಒತ್ತು ನೀಡಿ, ಪ್ರತಿದಿನ 2ರಿಂದ 3 ಮಂಡಲ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿ ಕೇಳಮಟ್ಟದಿಂದ ಪಕ್ಷ ಸಂಘಟಿಸುತ್ತಿದ್ದೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರ ಮನೆ-ಮನೆಗೆ ಮುಟ್ಟುವ ಹಾಗೆ ಕಾರ್ಯಕರ್ತರ ಪಡೆಯನ್ನು ಜಿಲ್ಲಾದ್ಯಂತ ಮಾಡಲಾಗುತ್ತಿದೆ ಎಂದರು.

    ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ದೀಪಕ ಪಾಟೀಲ,ರಾಯಬಾಗ ಮಂಡಳ ಪ್ರ.ಕಾ. ರಾಜು ಹರಗಣ್ಣವರ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಶಿವಾನಂದ ನವಿನಾಳೆ, ಡಾ.ರವಿ ಸಂಕ ಮಾತನಾಡಿದರು.
    ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಸಾದ ಪಚಂಡಿ, ಉದಯ ದೇಸಾಯಿ, ಮಹಾದೇವ ಗಣಾಚಾರಿ, ಶಾಂತನು ಕಾಗಲೆ, ರಾಜು ಪಾಟೀಲ, ಮಂಜು ಕೋಳಿ, ಸಂತೋಷ ಮಿರ್ಜೆ, ಸುವರ್ಣ ಹಂಪಣ್ಣವರ, ವಿಜಯ ಪಾಟೀಲ, ಬಾಬಾಸಾಹೇಬ ಕೆಂಚಣ್ಣವರ, ಮೋಸಿನ್ ಇನಾಮದಾರ್, ವಿಕಾಶ ಪಾಟೀಲ, ಗೈಬುಸಾಬ ಅಮನಿ, ಶಿವಾನಂದ ನವಿನಾಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts