More

    ಪಕ್ಷೇತರರಾಗಿ ಗುರಿಕಾರ ನಾಮಪತ್ರ ಸಲ್ಲಿಕೆ

    ಧಾರವಾಡ: ವಿಧಾನ ಪರಿಷತ್​ನ ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶಿಕ್ಷಕರ ಕ್ಷೇತ್ರದ ಮುಖಂಡ ಬಸವರಾಜ ಗುರಿಕಾರ ಮಂಗಳವಾರ ನಾಮಪತ್ರ ಸಲ್ಲಿಸಿದರು.

    ನಾಮಪತ್ರ ಸಲ್ಲಿಕೆ ಪೂರ್ವದಲ್ಲಿ ಕಲಾಭವನ ಬಳಿಯ ಜಗಜ್ಯೋತಿ ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್, ದ.ರಾ. ಬೇಂದ್ರೆ, ಛತ್ರಪತಿ ಶಿವಾಜಿ ಹಾಗೂ ಡೆ.ಚೆನ್ನಬಸಪ್ಪ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಕರ್ನಾಟಕ ಕಾಲೇಜು ಆವರಣದಿಂದ ಆಲೂರು ವೆಂಕಟರಾವ್ ಪುತ್ಥಳಿಯವರೆಗೆ ಪದವೀಧರರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವೀಧರ ಕ್ಷೇತ್ರವು ರಾಜಕೀಯ ಕ್ಷೇತ್ರವಾಗದೆ ಪದವೀಧರರ ಕ್ಷೇತ್ರವಾದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ. ಇದೇ ಕಾರಣದಿಂದ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ.

    3 ದಶಕಗಳಿಂದ ಸಾಮಾಜಿಕ ಕ್ಷೇತ್ರದಲ್ಲಿದ್ದು ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಶಿಕ್ಷಕ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದು, ಗೆಲ್ಲುವ ಭರವಸೆ ಇದೆ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಮೃತ್ಯುಂಜಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಪಲಿ, ನ್ಯಾಯವಾದಿ ಪ್ರಕಾಶ ಉಡಕೇರಿ, ಎಸ್.ಕೆ ರಾಮದುರ್ಗ, ಎಸ್.ಎಸ್. ಕಣವಿ, ಎಂ.ಸಿ. ಸವಣೂರ, ವಿ.ಆರ್ ಮೆಳವಂಕಿ, ಎ.ಬಿ ಚನ್ನವೀರಗೌಡರ, ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ವಿನಾಯಕ ಗುಡ್ಡದಕೇರಿ, ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ರಾಘು ನರಗುಂದ, ಗದಗ ಜಿಲ್ಲೆಯ ಹಿರಿಯ ನ್ಯಾಯವಾದಿ ಎ.ಕೆ ಮುಧೋಳ, ಎಸ್.ಎಫ್ ಹಾಳ್ಯಾಳ, ಕೆ.ಎಸ್ ಪಾಟೀಲ, ಹಾವೇರಿ ಜಿಲ್ಲೆಯ ಚಂದ್ರು ಪೋಟೇರ, ವಿ.ಎಲ್ ಚವಾಣ, ಮಲ್ಲಿಕಾರ್ಜುನ, ಜಿ.ಎಚ್ ನಾಯ್ಕ, ಜಿ.ಎಸ್ ಭಟ್, ಎಸ್.ಎನ್ ಹಬ್ಬು, ಬೀರಣ್ಣ ನಾಯಕ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts