More

    ನ್ಯೂ ಕಾಟನ್ ಮಾರ್ಕೆಟ್ ಸಂಪೂರ್ಣ ಅಭಿವೃದ್ಧಿ

    ಹುಬ್ಬಳ್ಳಿ: 20 ಕೋಟಿ ರೂ. ಕೇಂದ್ರ ರಸ್ತೆ ನಿಧಿಯಡಿ ಇಲ್ಲಿನ ನಿಲಿಜಿನ್ ರಸ್ತೆ ಸೇರಿ ನ್ಯೂ ಕಾಟನ್ ಮಾರ್ಕೆಟ್​ನ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ನಿಂದ ನಿರ್ಮಾಣ ಮಾಡಲಾಗುತ್ತಿದೆ. ಕರೊನಾ ಹಾಗೂ ಬಿಲ್​ಬಾಕಿ ಇರುವುದರಿಂದ ರಸ್ತೆ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರ ಗಮನಕ್ಕೆ ತರಲಾಗಿದೆ. ಮಾರುಕಟ್ಟೆಯ ಉಳಿದ 455 ಮೀಟರ್ ಪ್ರಮುಖ ರಸ್ತೆ ನಿರ್ವಣಕ್ಕೆ ರಾಜ್ಯ ಸರ್ಕಾರದಿಂದ 1.83 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.

    ನಗರದ ನ್ಯೂ ಕಾಟನ್ ಮಾರುಕಟ್ಟೆಯ ‘ವಿಜಯವಾಣಿ’ ಕಚೇರಿ ಬಳಿ ಮಂಗಳವಾರ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಕಳೆದ ವರ್ಷದ ಪ್ರವಾಹದಿಂದ ವಿದ್ಯಾನಗರ ಸೇರಿ ಹಲವು ಕಡೆ ನಾಲ್ಕು ಸೇತುವೆಗಳು ಹಾಳಾಗಿದ್ದವು. ಇವುಗಳ ಮರು ನಿರ್ವಣಕ್ಕೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರ 15 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ಈ ಅನುದಾನದಲ್ಲಿ ಉಳಿದ 1.83 ಕೋಟಿ ರೂ. ವೆಚ್ಚದಲ್ಲಿ ನ್ಯೂ ಕಾಟನ್ ಮಾರುಕಟ್ಟೆಯ ಭಗತ್ ಸಿಂಗ್ ಸರ್ಕಲ್​ನಿಂದ ಮಾರುತಿ ಪಾರ್ಸಲ್ ಕೊರಿಯರ್ಸ್ ಕಚೇರಿವರೆಗೆ 325 ಮೀಟರ್ ಹಾಗೂ 130 ಮೀಟರ್ ಅಡ್ಡ ರಸ್ತೆಯಲ್ಲಿ ಸುಸಜ್ಜಿತ ಸಿಸಿ ರಸ್ತೆ ಹಾಗೂ ಡ್ರೇನ್ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಂತೋಷ ಚವ್ಹಾಣ, ರವಿ ನಾಯಕ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts