More

    ನ್ಯಾಸರ್ಗಿಯಲ್ಲಿ ಬಾವಿಗೆ ಬಿದ್ದ ಹಸು ರಕ್ಷಣೆ

    ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಗುರುವಾರ ಬಾವಿಯೊಂದರಲ್ಲಿ ಬಿದ್ದ ಗರ್ಭಿಣಿ ಹಸುವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಗ್ರಾಮದ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಬಾವಿಗೆ ಗರ್ಭಿಣಿ ಹಸು ಬೇರೆ ಹಸುವಿನೊಂದಿಗೆ ಗುದ್ದಾಡುತ್ತ ಹೋಗಿ ಬಿದ್ದಿದೆ. ಗ್ರಾಮಸ್ಥರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 70 ಅಡಿ ಆಳದ ಬಾವಿಗೆ ಇಳಿದು ಹಸುವನ್ನು ರಕ್ಷಿಸಿದ್ದಾರೆ. ಆಳವಾದ ಮತ್ತು ಅಪಾಯಕಾರಿ ಬಾವಿ ಇದಾಗಿದ್ದು ಇದರ ಮುಂದೆಯೇ ಅಂಗನವಾಡಿ ಕೇಂದ್ರವಿದೆ. ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟವರು ಮುಂಜಾಗ್ರತೆ ವಹಿಸಬೇಕು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ನಾರಾಯಣ ತಳೇಕರ, ಸಪ್ನಿಲ್ ಪೆಡ್ನೇಕರ, ಅಡವೆಪ್ಪ ಕುರುವಿನಕೊಪ್ಪ, ಬಸವರಾಜ ನಾಣಾಪುರ, ಮಂಜುನಾಥ ಪಟಗಾರ, ಚಂದ್ರಪ್ಪ ಲಮಾಣಿ, ದುರ್ಗಪ್ಪ ಹರಿಜನ, ವಿಠ್ಠು ಧೂಳಿಪಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts