More

    ನೌಕರಿ ಕಾಯಂಗೊಳಿಸಿ

    ಲೋಕಾಪುರ: ಗ್ರಾಮ ಪಂಚಾಯಿತಿ ಸಿಬ್ಬಂದಿ ತಮ್ಮ ನೌಕರಿ ಕಾಯಂಗೊಳಿಸಲು ಒತ್ತಾಯಿಸಿ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.

    ನಂತರ ಮಾತನಾಡಿ, ಲೋಕಾಪುರ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ವರ್ಷಗಳಿಂದ ವಾಟರ್‌ಮನ್, ಲೈನ್‌ಮನ್, ಹೆಲ್ಪರ್, ಸ್ವೀಪರ್, ಕರ ವಸೂಲಿಗಾರ ಎಂದು ಹಲವಾರು ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಕೆಲಸ ನಿರ್ವಹಿಸುತ್ತ ಬಂದಿದ್ದು, ನಮ್ಮ ಜೀವನ ಅತಂತ್ರವಾಗಿದೆ. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಠರಾವು ಅನುಮೋದನೆಯಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿಯಲ್ಲಿ ಕಾಯಂಗೊಳಿಸಿ ಪಟ್ಟಣ ಪಂಚಾಯಿತಿಯಲ್ಲಿಯೂ ಮುಂದುವರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಗ್ರಾಪಂ ಸಿಬ್ಬಂದಿ ಮನವಿ ಮಾಡಿದರು.

    ಡಿಸಿಎಂ ಗೋವಿಂದ ಕಾರಜೋಳ ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ನೌಕರಿ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಜತೆ ಕೂಲಂಕಷವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಬಿಜೆಪಿ ಮುಖಂಡ ಬಿ.ಎಲ್. ಬಬಲಾದಿ, ಗ್ರಾಪಂ ಸಿಬ್ಬಂದಿ ವಿಠ್ಠಲ ಗಸ್ತಿ, ರಾಘವೇಂದ್ರ ಮುರಗೋಡ, ಮಲ್ಲಪ್ಪ ರೊಡ್ಡಪ್ಪನವರ, ಕಲ್ಲಪ್ಪ ಭಜಂತ್ರಿ, ಹನುಮಂತ ಪರಸನ್ನವರ, ಪರಶುರಾಮ ಪರಸನ್ನವರ, ವಿಠ್ಠಲ ಮುದಕವಿ, ಲಕ್ಷ್ಮಣ ಭಜಂತ್ರಿ, ರಾಮಣ್ಣ ನಾಯ್ಕ, ಯಮನಪ್ಪ ಹುಗ್ಗಿ, ಅಶೋಕ ಕಾಳಮನ್ನವರ, ಪ್ರವೀಣ ಅರಳಿಕಟ್ಟಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts