More

    ನೌಕರರ ಹಿತಾಸಕ್ತಿ ಕಾಪಾಡಲು ಬದ್ಧ

    ಬಾಗಲಕೋಟೆ: ಸರ್ಕಾರಿ ನೌಕರರು ತಮ್ಮ ಸೇವೆಯನ್ನು ಮನೆ ಕೆಲಸ ಅಂತ ತಿಳಿದು ಮಾಡಬೇಕು. ಸರ್ಕಾರ ನೌಕರರಿಗೆ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ನೌಕರರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

    ನವನಗರದ ಕಲಾಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ, ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ, ಕೇಂದ್ರ ಸರ್ಕಾರಿ ನೌಕರರು ಮತ್ತು ಖಾಸಗಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಪ್ರಥಮ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
    ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಜಿಲ್ಲೆಯ ಸರ್ಕಾ ನೌಕರರು ಉತ್ತಮವಾಗಿ ಕಾಯಕ ಮಾಡುತ್ತಿದ್ದಾರೆ. ನೌಕರರ ಬೇಡಿಕೆಗಳಿಗೆ ಈಡೇರಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಿದ್ದಾರೆ. ನಾನು ಕೂಡಾ ತಮ್ಮ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ ಎಂದ ಅವರು, ನವನಗರದಲ್ಲಿ ಬಿಟಿಡಿಎ ವತಿಯಿಂದ ನೌಕರರ ಸಂಘಕ್ಕೆ ನಿವೇಶನ ಹಂಚಿಕೆ ಮಾಡಲಾಗಿದೆ. ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
    ಇನ್ನು ಶಿವಮೊಗ್ಗದಲ್ಲಿ 600 ಎಕರೆ ಸರ್ಕಾರಿ ನೌಕರರಿಗಾಗಿ ಲೇಔಟ ಮಾಡಿ ಹಂಚಿಕೆ ಮಾಡಲಾಗಿದೆ. ಇದೇ ರೀತಿ ಬಾಗಲಕೋಟೆ ನಗರದಲ್ಲಿ ನೌಕರರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಖಾಸಗಿ ಲೇಔಟ ಮಾಡುತ್ತಿರುವುದು ಶ್ಲಾಘನೀಯ. ಭಾರಿ ಮೊತ್ತದ ನಿವೇಶನ ನೌಕರರು ಖರೀದಿ ಮಾಡುವುದು ಕಷ್ಟ ಕೆಲಸ. ಕಡಿಮೆ ವೆಚ್ಚದಲ್ಲಿ ನಿವೇಶನ ನೀಡಲು ನೌಕರರ ಸಂಘ ಯೋಜನೆ ಹಾಕಿಕೊಂಡಿರುವುದು ಮಾದರಿ ಕಾರ್ಯ.ಸ್ವಾಗತಾರ್ಹ ಬಾಗಲಕೋಟೆ ಸುತ್ತಮುತ್ತಲು ಸಾಕಷ್ಟು ಜಮೀನು ಇದೆ. ಬುಡಾ ನೇತೃತ್ವದಲ್ಲಿ ಲೇಔಟ ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ. ನೌಕರರ ಸಂಘದವರು ಬುಡಾ ಆಯುಕ್ತರೊಂದಿಗೆ ಮಾತುಕತೆ ನಡೆಸಿದಲ್ಲಿ ಲೇಔಟ ಮೂಲಕ ನೌಕರರಿಗೆ ನಿವೇಶನ ಹಂಚು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

    ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸಲು ನೌಕರರು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿನ ಉತ್ತಮ ವಾತಾವರಣ. ಮುಳಗಡೆ ಸಮಸ್ಯೆ ಪರಿಹರಿಸುವಲ್ಲಿ ನೌಕರರ ಪಾತ್ರ ಹಿರಿದಾಗಿದೆ. ಸರ್ಕಾರ ಯಶಸ್ವಿಯಾಗುವಲ್ಲಿ ಕಾರ್ಯಾಂಗದ ಬಹಳ ಮಹತ್ವ ಪಡೆದುಕೊಂಡಿದೆ. ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವಲ್ಲಿ ನೌಕರರು ಸೇತುವೆ ಕೆಲಸ ಮಾಡುತ್ತಾರೆ ಎಂದ ಅವರು,ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ.
    ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಜಿ.ಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಕಾರಿ ಮಹಾದೇವ ಮುರಗಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಯ್ಯ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಪದಾಧಿಕಾರಿಗಳಾದ ಎಸ್.ವಿ.ಸತ್ಯರೆಡ್ಡಿ, ಎಸ್.ಕಿ.ಹಿರೇಮಠ, ಐ.ಎಸ್.ಹಿರೇಮಠ, ಎಸ್.ಎಸ್.ಇಂಜಗನೇರಿ, ವಿಠ್ಠಲ ವಾಲಿಕಾರ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts