More

    ನೋ ಹಾಸ್ಪಿಟಲ್ ನೋ ವೋಟ್

    ವಿಜಯವಾಣಿ ಸುದ್ದಿಜಾಲ ಕಾರವಾರ ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಆಗ್ರಹಿಸಿ ನಡೆದಿರುವ ಅಭಿಯಾನ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.‌

    ಶಿರೂರಿನ ಟೋಲ್ ಗೇಟ್ ಬಳಿ ನಡೆದ ಆಂಬುಲೆನ್ಸ್ ಅಪಘಾತದ ಚರ್ಚೆಯಿಂದ ಪ್ರಾರಂಭವಾದ ಅಭಿಯಾನ ಈಗ ಮತದಾನ ಬಹಿಷ್ಕರಿಸುವ ಹಂತವನ್ನೂ ತಲುಪಿದೆ. “ನೋ ಹಾಸ್ಪಿಟಲ್‌ ನೋ ವೋಟ್ ಎಂಬ” ಹ್ಯಾಷ್ ಟ್ಯಾಗ್ ಇರುವ ಸಂದೇಶ ಟ್ವಿಟ್ಟರ್, ಫೇಸ್ ಬುಕ್ ಹಾಗೂ ವಾಟ್ಸ್ಆ್ಯಪ್ ಗಳಲ್ಲಿ ಹರಿದಾಡುತ್ತುದೆ. #WeNeedEmergencyHospitalInUtyaraKannada ಎ‌‌ಂಬ ಸಂದೇಶದೊಂದಿಗೆ ಭಾನುವಾರ ಸಾಯಂಕಾಲ 5 ಗಂಟೆಗೆ ಟ್ವಿಟ್ಟರ್ ಅಭಿಯಾನ ನಡೆಸಲು ನಿರ್ಧರಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ತಾಜ್ಯದ ಮುಖ್ಯಮಂತ್ರಿ ಸೇರಿ ಹಲವರಿಗೆ ಟ್ಯಾಗ್ ಮಾಡಲು ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ನೀಡುವಂತೆ ಆಗ್ರಹಿಸಿ ಟ್ವೀಟ್ ಮಾಡಲು ನೆಟ್ಟಿಗರು ನಿರ್ಧರಿಸಿದ್ದಾರೆ.

    ಕಾರವಾರದ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಕುಮಟಾದ ವಕೀಲ ಆರ್.ಜಿ.ನಾಯ್ಕ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಧರಣಿ ನಡೆಸಲು‌ ತೀರ್ಮಾನಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts