More

    ನೋಂದಾಯಿತ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷದ ಆದ್ಯತೆ

    ಬೆಳಗಾವಿ: ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಕುರಿತು ಕಾಂಗ್ರೆಸ್ ರಾಜ್ಯದ ಪ್ರತಿ ಮನೆಗೂ ತೆರಳಿ ಕುಟುಂಬಗಳನ್ನು ನೋಂದಾಯಿಸಿಕೊಳ್ಳಲಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ನೋಂದಣಿ ಸಂಖ್ಯೆ ಆಧರಿಸಿ, ಅರ್ಹ ಎಲ್ಲ ಕುಟುಂಬಗಳಿಗೂ ಘೋಷಿತ ಸೌಲಭ್ಯ ಒದಗಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ತಿಳಿಸಿದರು.

    ನಗರದಲ್ಲಿನ ಕಾಂಗ್ರೆಸ್ ಭವನದಲ್ಲಿ ‘ಕಾಂಗ್ರೆಸ್ ಗ್ಯಾರಂಟಿ’ ಕರಪತ್ರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ಬಡ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಮನೆ ಯಜಮಾನ್ತಿಗೆ ಪ್ರತಿ ತಿಂಗಳು 2000 ತಪ್ಪದೆ ಒದಗಿಸಲಾಗುವುದು. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆ ಹಾಗೂ ಬಿಜೆಪಿಯ ದುರಾಡಳಿತವನ್ನು ಜನತೆ ಪ್ರತಿ ಮನೆ-ಮನಗಳಿಗೂ ಮುಟ್ಟಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಕಾಂಗ್ರೆಸ್‌ನ ಎಲ್ಲ ಪ್ರನಾಳಿಕೆಯನ್ನೂ ಇಡೇರಿಸಿತ್ತು. ಈಗ ಎರಡು ಗ್ಯಾರಂಟಿಗಳನ್ನು ಮಾತ್ರ ಘೋಷಿಸಿದ್ದು, ಮುಂದೆ ಕ್ಷೇತ್ರವಾರು ಹಾಗೂ ಜಿಲ್ಲಾವಾರು ಘೊಷಣೆಯಾಗುವ ಎಲ್ಲ ಗ್ಯಾರಂಟಿಗಳನ್ನು ಇಡೇರಿಸಲಾಗುವುದು ಎಂದರು.

    ಕೆಲವೇ ದಿನಗಳಲ್ಲಿ ಟಿಕೆಟ್ ಘೋಷಣೆಯಾಗಲಿದ್ದು, ಯಾರಿಗ ಸಿಕ್ಕರೂ ಸಹ ಒಗ್ಗಟ್ಟಾಗಿ ದುಡಿದು ಪಕ್ಷ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಬೇಕು. ಎಲ್ಲರೂ ಒಗ್ಗಟ್ಟಿನಿಂದಿ ಕೆಲಸ ಮಾಡಿದರೇ, ಜಿಲ್ಲೆಯ 15 ವಿಧಾನ ಸಭಾ ಕ್ಷೇತ್ರ ಗೆದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಬಹುದು. ಈ ನಿಟ್ಟಿನಲ್ಲಿ, ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ರಾಜ್ಯದಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಕೋಟಾ ಸರ್ಕಾರ. ಬಿಜೆಪಿ ಎಂದರೆ ಭ್ರಷ್ಠ ಜನತಾ ಪಾರ್ಟಿ ಎನ್ನುವಂತಾಗಿದೆ. 15 ಕೋಟಿ ಉದ್ಯೋಗ ನೀಡುತ್ತೇವೆ ಎಂದವರು ದೇಶದಲ್ಲಿ 15 ಲಕ್ಷ ಉದ್ಯೋಗವನ್ನೂ ನೀಡಿಲ್ಲ. ಅಷ್ಟೇ ಅಲ್ಲದೇ, ಬೆಲ ಏರಿಕೆಯಿಂದಾಗಿ ಎಲ್ಲ ವರ್ಗದ ಜನರಿಗೂ ಅನ್ಯಾಯ ಮಾಡಿದೆ. ರೈತರ ಮತ ಕೇಳುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಬೆಳಗಾವಿ ಜಿಲ್ಲಾ ಉಸ್ತುವಾರಿ ವಿಷ್ಣುನಾದ, ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಡಿ.ಬಿ.ಇನಾಮದಾರ್, ಅಶೋಕ ಪಟ್ಟಣ, ಬಾಬಾಸಾಹೇಬ ಪಾಟೀಲ, ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಜಿಲ್ಲಾ ಅಧ್ಯಕ್ಷ ರಾಜು ಸೇಠ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts