More

    ನೇಜ ಗ್ರಾಮದ ಕೆರೆಗೆ ಬಾಗಿನ

    ಚಿಕ್ಕೋಡಿ: ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ಮೂಲಕ ನೇಜ ಗ್ರಾಮದ ಕೆರೆ ತುಂಬಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಕೆರೆಗೆ ಬಾಗಿನ ಅರ್ಪಿಸಿದರು.

    ಕೃಷ್ಣಾ ನದಿಯಿಂದ ನೀರನ್ನು ಏತ ನೀರಾವರಿ ಯೋಜನೆ ಮೂಲಕ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶದ ಹೀರೆಕೊಡಿ, ನೇಜ, ನಾಗರಾಳ ಹಾಗೂ ಸುತ್ತಮುತ್ತಲಿನ 23 ಹಳ್ಳಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.

    ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ತುಂಬಿದ ಕೆರೆ ಕಟ್ಟೆಗಳಿಗೆ, ಹಳ್ಳ-ಕೊಳ್ಳಗಳಿಗೆ, ತುಂಬಿ ಹರಿಯುವ ನದಿಗಳಿಗೆ ಕೃತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ. ಮನುಷ್ಯನ ಬದುಕಿನಲ್ಲಿ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಕೆರೆಗಳು ನೀರಿನಿಂದ ತುಂಬಿರಲಿ ಎನ್ನುವ ಭಕ್ತಿ ಸಮರ್ಪಿಸಿದಂತಾಗಿದೆ ಎಂದರು.

    ಪರಗೌಡಾ ಪಾಟೀಲ, ಅಣ್ಣಾಸಾಬ ಮಗದುಮ್ಮ, ಕುಂದನ ಕಾಂಬಳೆ, ಚಿದು ಹರಗಾಪುರೆ, ಅನಿಲ ಶಾಮ, ಶ್ರೀಶೈಲ ಪಾಟೀಲ, ಬಸಗೌಡ ಮುದ್ದಾಯಿ, ಅರುಣ ಬೋನೆ, ರಾಜು ಪಾಟೀಲ, ಪ್ರಕಾಶ ಮಗದುಮ್ಮ, ಸಂತೋಷ ಹಿರೇಮಠ, ಮೋಹನ ಶಿಂಗಾಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts