More

    ನೇಕಾರ ನಿಗಮಕ್ಕೆ ಹೆಚ್ಚಿನ ಅನುದಾನ

    ಕಲಬುರಗಿ: ನೇಕಾರ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಸ್ಥಾಪಿಸಿರುವ ನಿಗಮಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವುದರ ಜತೆಗೆ ನಗರದಲ್ಲಿ ನೇಕಾರ ಭವನ ನಿರ್ಮಿಸಲು ಒತ್ತು ನೀಡಲಾಗುವುದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಭರವಸೆ ನೀಡಿದರು.

    ನಗರದ ಕನ್ನಡ ಭವನದಲ್ಲಿ ಸೋಮವಾರ ಸಂಜೆ ಸಪ್ತ ನೇಕಾರರ ಸೇವಾ ಸಂಘ (ಪಟ್ಟಸಾಲಿ, ಹಟಗಾರ, ಕುರುಹಿನಶೆಟ್ಟಿ, ಸ್ವಕುಳಸಾಲಿ, ಪದ್ಮಸಾಲಿ, ತೊಗಟವೀರ ಕ್ಷತ್ರಿಯ, ದೇವಾಂಗ) ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ನವ ಕಲ್ಯಾಣ ಕರ್ನಾಟಕ ತೊಗಟವೀರ ಕ್ಷತ್ರಿಯ ಸಮಾಜ ಸೇವಾ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ನಿಗಮಕ್ಕೆ ಸಮಾಜದವರ ಬೇಡಿಕೆಯಂತೆ ಅನುದಾನ ಕೊಡಿಸುವ ಮೂಲಕ ಎಲ್ಲ ತೆರನಾದ ಪ್ರಗತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನಕ್ಕಾಗಿ ಕೋರುವೆ ಎಂದರು.

    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಖ್ಯಾತ ವೈದ್ಯ ಡಾ.ಪ್ರಕಾಶ ಹಾದಿಮನಿ ಮಾತನಾಡಿ, ಶಿಕ್ಷಣ ಕಲಿಕೆ ಬಹುಮುಖ್ಯವಾಗಿದೆ. ಹೀಗಾಗಿ ಎಲ್ಲ ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

    ಪಟ್ಟಸಾಲಿ ಸಮಾಜದ ಅಧ್ಯಕ್ಷ ಮಡಿವಾಳಪ್ಪ ಹತ್ತೂರೆ, ಪದ್ಮಸಾಲಿ ಸಮಾಜದ ಅಧ್ಯಕ್ಷ ರಂಗನಾಥಬಾಬು ಚನ್ನಾ, ಸ್ವಕುಳಸಾಲಿ ಸಮಾಜದ ಅಧ್ಯಕ್ಷ ನಾರಾಯಣರಾವ ಸಿಂಗಾಡೆ, ಹಟಗಾರ ಸಮಾಜದ ಅಧ್ಯಕ್ಷ ಚನ್ನಬಸಪ್ಪ ನಿಂಬೆಣ್ಣಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ ಕರದಳ್ಳಿ, ತೊಗಟವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ ಬಲಪುರ, ದೇವಾಂಗ ಸಮಾಜದ ಅಧ್ಯಕ್ಷ ಹಣಮಂತ ಕಣ್ಣಿ, ಪ್ರಮುಖರಾದ ಚಂದ್ರಶೇಖರ ಮ್ಯಾಳಗಿ, ಸಂತೋಷ ಗುರುಮಠಕಲ್, ರಾಜಗೋಪಾಲ ಭಂಡಾರಿ, ರೇವಣಸಿದ್ದಪ್ಪ ಗಡ್ಡದ, ಪ್ರದೀಪ ಸಂಗಾ, ಸುಭಾಷ ಬಣಗಾರ, ಭೀಮಾಶಂಕರ ಕದರಿ, ಹಣಮಂತ ಕಣ್ಣಿ, ಮಲ್ಲಿನಾಥ ಬಡ್ಡೂರ, ರಾಜು ಕೋಷ್ಠಿ, ಲಕ್ಷ್ಮೀಕಾಂತ ಜೋಳದ, ವಿಜಯಕುಮಾರ ತ್ರಿವೇದಿ, ರಾಹುಲ್ ಕೋಷ್ಠಿ, ಶೋಭಾರಾಣಿ ಕೋರವಾರ, ಸುಜಾತಾ ಅಕ್ಕಾ, ಗೀತಾಂಜಲಿ ಮೈನಾಳೆ, ನಿರ್ಮಲಾ ಅಂಕದ ಗುಡ್ಡದ ಇತರರಿದ್ದರು.

    ಸಪ್ತ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ವಿನೋದ ಜನೇವರಿ ನಿರೂಪಣೆ ಮಾಡಿದರು. ಕೈಮಗ್ಗ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಪಾರ್ವತಿ ಭೀಮಣ್ಣ ನಾಗಠಾಣ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಾದ ಚೈತ್ರಾ ಇತರರನ್ನು ಸನ್ಮಾನಿಸಲಾಯಿತು.

    ಬದಲಾದ ಪರಿಸ್ಥಿತಿ ಮತ್ತು ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ನೇಕಾರರು ಉದ್ಯೋಗ ಕಳೆದುಕೊಂಡು ಹಲವು ಸಮಸ್ಯೆಗಳನ್ನು ಎದುರಿಸುತ್ತ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅವರನ್ನು ಪುನಶ್ಚೇತನಗೊಳಿಸಬೇಕಾಗಿದೆ. ಸರ್ಕಾರದ ಯೋಜನೆಗಳ ಲಾಭ ಮತ್ತು ನಿಮ್ಮ ಹಕ್ಕುಗಳನ್ನು ಪಡೆಯಲು ಎಲ್ಲರೂ ಒಗ್ಗಟ್ಟಾಗಬೇಕು.
    | ಅಲ್ಲಮಪ್ರಭು ಪಾಟೀಲ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts