More

    ನೆಲಸಂಸ್ಕೃತಿ ಉಳಿಸಿ ಬೆಳೆಸಬೇಕು

    ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ನೆಲ ಸಂಸ್ಕೃತಿ ಪ್ರದರ್ಶನಕ್ಕೆ ವೇದಿಕೆ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ದಾವಣಗೆರೆ ವಿವಿ ಚಿತ್ರದುರ್ಗ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಂ.ಯು.ಲೋಕೇಶ್ ಹೇಳಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿತ್ರದುರ್ಗ ತಾಲೂಕು ಗುಡ್ಡದರಂಗವ್ವನಹಳ್ಳಿ ದಾವಣಗೆರೆ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಯುವ ಸೌರಭ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನೆಲಸಂಸ್ಕೃತಿ ಉಳಿಸಿ ಬೆಳೆಸುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.
    ಪ್ರಪಂಚದಲ್ಲಿಯೇ ಭಾರತ ಹೆಚ್ಚು ಯುವಶಕ್ತಿ ಹೊಂದಿರುವ ದೇಶ. ದೊರೆಯುವಂಥ ಅವಕಾಶಗಳನ್ನು ಯುವಜನರು ಸದುಪ ಯೋಗ ಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಸಂಸ್ಕೃತಿ ಬಿತ್ತರಕ್ಕೆ ಯುವ ಸೌರಭ ಉತ್ತಮ ವೇದಿಕೆಯಾಗಿದೆ ಎಂದರು.
    ಕನ್ನಡ ಅಧ್ಯಯನ ವಿಭಾಗ ವಿಷಯ ಸಂಯೋಜಕ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ,ಕಲಾತಂಡಗಳು ಹಾಗೂ ಕಲಾವಿದ ರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೆಲಸ ಮಾಡುತ್ತಿದೆ. ಯುವ ಜನರ ಪ್ರತಿಭೆ ಪ್ರೋತ್ಸಾಹಿಸಲು,ಅವರನ್ನು ಸೃಜನಾತ್ಮಕ ಕಲೆಗಳೆಡೆ ಸೆಳೆಯುವ ಈ ಪ್ರಯತ್ನ ಆಶಾದಾಯಕವಾಗಿದೆ ಎಂದರು.
    ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನಸೂರೆಗೊಂಡಿತು. ಚಿತ್ರದುರ್ಗ ಮೈಲಾರಿ ತಂಡದವರ ಜನಪದ ಗೀತೆಗಳ ಗಾಯನ,ಹಿರಿಯೂರಿನ ನಾಗಶ್ರೀಭಟ್ ತಂಡದಿಂದ ಸಮೂಹ ನೃತ್ಯ,ಚಿತ್ರದುರ್ಗ ಅಫ್ರೀನ್ ಕೌಸರ್ ತಂಡದವರಿಂದ ಸುಗಮ ಸಂಗೀತಗಾಯನ,ಚಿತ್ರಹಳ್ಳಿ ಎನ್.ಹನುಮಂತ ತಂಡದವರಿಂದ ನಾಸಿಕ್‌ಡೋಲು,ಎಂ.ಕೆ.ಹಟ್ಟಿ ಕೆ. ಮನು ತಂಡದಿಂದ ಕಹಳೆ ವಾದನ ಹಾಗೂ ಗೋನೂರಿನ ಆಕಾಶ್ ತಂಡದವರಿಂದ ‘ಕೋಟು’ಹಾಸ್ಯ ನಾಟಕದ ಪ್ರದರ್ಶನ ನಡೆಯಿತು.
    *ಸಂವಿಧಾನ ಜಾಗೃತಿ ಜಾಥಾ: ಅಧ್ಯಯನ ಕೇಂದ್ರದ ಮುಖ್ಯದ್ವಾರದಲ್ಲಿ ಸಂವಿಧಾನ ಜಾಗೃತಿ ಜಾಥಾ ಹಾಗೂ ಯುವ ಸೌರಭ ಮೆರವಣಿಗೆಯನ್ನು ಲೋಕೇಶ್ ಹಾ ಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಅವರು ಉದ್ಘಾಟಿಸಿದರು. ಮುಖ್ಯದ್ವಾರದಿಂದ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು.
    ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ರೂಪೇಶ್‌ಕುಮಾ ರ್,ಡಾ.ಭೀಮಾಶಂಕರ್,ಡಾ.ಗಿರೀಶ್,ಬಿ.ಟಿ.ನಿವೇದಿತಾ,ಶೌಕತ್‌ಅಲಿ,ಅರುಣ್‌ಕುಮಾರ್,ಎನ್‌ಎಸ್‌ಎಸ್ ಅಧಿಕಾರಿ ಸುಂದರಂ,ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts